
ಬೆಂಗಳೂರು (ಫೆ.2) :ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ಗನ್, ಲಾಂಗ್, ಪೆಪ್ಪರ್ ಸ್ಪ್ರೇ ದಾಳಿ ನಡೆಸಿ ವ್ಯಾಪಾರಿಯೊಬ್ಬನಿಂದ 15 ಲಕ್ಷರೂ. ದರೋಡೆ ಮಾಡಿ ಪರಾರಿಯಾದ ಘಟನೆ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಿಗರೇಟ್ ಡಿಸ್ಟ್ರಿಬ್ಯೂಟರ್ ಗೋಪಾಲ್ ಹಣ ಕಳೆದುಕೊಂಡ ವ್ಯಕ್ತಿ. ಸಿಗರೇಟ್ ಡಿಸ್ಟ್ರಿಬ್ಯೂಟರ್ ಆಗಿರುವ ಗೋಪಾಲ್ ಟಾಟಾ ಏಸ್ ವಾಹನದಲ್ಲಿ ಅಂಗಡಿಗಳಿಂದ ಸಿಗರೇಟ್ ಬಿಲ್ ಕಲೆಕ್ಟ್ ಮಾಡಿದ್ದ ವೇಳೆ ಹಿಂಬಾಲಿಸಿರುವ ಖದೀಮರು. ಕೆಂಗೇರಿಯಿಂದ ಅಂಗಡಿಗಳಲ್ಲಿ ಸಿಗರೇಟ್ ಬಿಲ್ ಕಲೆಕ್ಟ್ ಮಾಡಿಕೊಂಡು ಬರ್ತಾ ಇದ್ರು. ಈ ವೇಳೆ ಡಿಯೋ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಕ ಮೂವರು ರಾಬರ್ಸ್. ನಾಗರಭಾವಿ ಪಾಪರೆಡ್ಡಿ ಪಾಳ್ಯಕ್ಕೆ ಬಂದಿದ್ದ ಗೋಪಾಲ್. ಈ ವೇಳೆ ನಾತೂರಾಮ್ ಎಂಬುವವರ ಅಂಗಡಿ ಬಳಿ ವಾಹನ ನಿಲ್ಲಿಸಿ ಬಿಲ್ ಕಲೆಕ್ಟ್ ಮಾಡಲು ಇಳಿದಿದ್ದ ವೇಳೆ ಅಟ್ಯಾಕ್ ಮಾಡಿರುವ ಖದೀಮರು.
ಚಿತ್ರದುರ್ಗದಲ್ಲಿ ₹1.50 ಕೋಟಿ ರಾಬರಿ ಕೇಸ್; 10 ಆರೋಪಿಗಳನ್ನು ಬಂಧಿಸಿದ ಪೊಲೀಸರು!
ಅಂಗಡಿಯೊಳಗೆ ನುಗ್ಗಿ ದಾಳಿ:
ರಾಬರ್ಸ್ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರಾವಿಜನ್ ಸ್ಟೋರ್ ಒಳಗೆ ಹೋಗಿರುವ ಗೋಪಾಲ್. ಆದರೆ ಖದೀಮರು ಪ್ರಾವಿಜನ್ ಸ್ಟೋರ್ ಒಳಗೆ ನುಗ್ಗಿ ಅಟ್ಟಾಡಿಸಿಕೊಂಡು ದಾಳಿ ನಡೆಸಿದ್ದಾರೆ. ಮೂವರ ಪೈಕಿ ಇಬ್ಬರು ಪೆಪ್ಪರ್ ಸ್ಪ್ರೇ ಹಾಕಿ ಗನ್ ತೋರಿಸಿ ಲಾಂಗ್ ಬೀಸಿದ್ದಾರೆ. ಲಾಂಗ್ ಬೀಸಿದ ರಭಸಕ್ಕೆ ಹಣವಿದ್ದ ಬ್ಯಾಗ್ ಕತ್ತರಿಸಿದೆ. ಕೂಡಲೇ ಹಣವಿದ್ದ ಬ್ಯಾಗ್ ಎತ್ತಿಕೊಂಡು ಹೋಗಿರೋ ಆರೋಪಿಗಳು. ಘಟನೆ ಬಳಿಕ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ ಗೋಪಾಲ್. ಸದ್ಯ ಪ್ರಕರಣ ದಾಖಲಿಸಿಕೊಂಡು ರಾಬರ್ಸ್ ಚಲನವಲನ ಪತ್ತೆ ಹಚ್ಚುತ್ತಿರುವ ಪೊಲೀಸರು.
ಮಗಳನ್ನ ಮದುವೆ ಮಾಡಿಕೊಡುವುದಾಗಿ ನಂಬಿಸಿ ಯುವಕನಿಗೆ ಬರೋಬ್ಬರಿ 25 ಲಕ್ಷ ರೂ. ಉಂಡೇನಾಮ ಹಾಕಿದ ಕುಟುಂಬ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ