ಮಗಳನ್ನ ಮದುವೆ ಮಾಡಿಕೊಡುವುದಾಗಿ ನಂಬಿಸಿ ಯುವಕನಿಗೆ ಬರೋಬ್ಬರಿ ₹25 ಲಕ್ಷ ಉಂಡೇನಾಮ ಹಾಕಿದ ಕುಟುಂಬ!

By Ravi Janekal  |  First Published Feb 2, 2024, 9:14 AM IST

ಮಗಳನ್ನು ಮದುವೆ ಮಾಡಿಕೊಡುವುದಾಗಿ ನಂಬಿಸಿ ಯುವಕನಿಂದ ಬರೋಬ್ಬರಿ 25 ಲಕ್ಷ ರೂಪಾಯಿ ಪೀಕಿಸಿದ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕು ಕಡೇ ಮನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ


ಮೈಸೂರು (ಫೆ.2): ಮಗಳನ್ನು ಮದುವೆ ಮಾಡಿಕೊಡುವುದಾಗಿ ನಂಬಿಸಿ ಯುವಕನಿಂದ ಬರೋಬ್ಬರಿ 25 ಲಕ್ಷ ರೂಪಾಯಿ ಪೀಕಿಸಿದ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕು ಕಡೇ ಮನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ

ಅಶೋಕ್ ಎಂಬಾತನೇ ಹುಡುಗಿ ಆಸೆಗೆ ಹಣ ಕಳೆದುಕೊಂಡ ಯುವಕ. ವೆಂಕಟೇಶ್, ಲಕ್ಷ್ಮಿ ಹಾಗೂ ಸಿಂಚನ ಮೋಸ ಮಾಡಿದವರು. ಮೂವರಿಂದಲೂ ಅಶೋಕ್‌ಗೆ ಉಂಡೇನಾಮ.

Latest Videos

undefined

ಏನಿದು ಘಟನೆ?

ಅಶೋಕ್ ಎಂಬಾತ ವೆಂಕಟೇಶ್ ಪುತ್ರಿಯನ್ನ ಮೆಚ್ಚಿದ್ದಾನೆ. ಅವಳನ್ನೇ ಮದುವೆ ಮಾಡಿಕೊಳ್ಳಬೇಕು ಎಂದು ಆಸೆ ಪಟ್ಟಿದ್ದಾನೆ. ಆದರೆ ಯುವತಿ, ಪೋಷಕರು ಅಶೋಕನ ಬಳಿ ಹಣವಿರುವುದು ಅರಿತು. ಮದುವೆ ಮಾಡಿಕೊಡುವ ನಾಟಕವಾಡಿದ್ದಾರೆ. ತಮ್ಮ ಮಗಳನ್ನು ನಿನ್ನೊಂದಿಗೆ ಮದುವೆ ಮಾಡಿಕೊಡುವುದಾಗಿ ಒಪ್ಪಿಕೊಂಡಿರುವ ಯುವತಿಯ ತಂದೆ ವೆಂಕಟೇಶ್. ಮಾತುಕತೆ ಒಪ್ಪಂದದಂತೆ ಹಣಕ್ಕೆ ಪುಸಲಾಯಿಸಿದ್ದಾನೆ. ಯುವತಿಗೆ ಮನಸೋತಿದ್ದ ಯುವಕ. ಇದನ್ನೇ ದುರುಪಯೋಗ ಮಾಡಿಕೊಂಡಿರುವ ಕುಟುಂಬ. ಯುವಕನಿಂದ ಒಂದು ವರ್ಷದ ಅವಧಿಯಲ್ಲಿ ಬರೋಬ್ಬರಿ 25 ಲಕ್ಷ ಹಣ ವಸೂಲಿ ಮಾಡಿದ್ದಾರೆ. ತಂದೆ‌ 15 ಲಕ್ಷ, ತಾಯಿ 8 ಲಕ್ಷ ಹಾಗೂ ಮಗಳು ಎರಡು ಲಕ್ಷ ಪಡೆದಿದ್ದಾರೆ. ಆದರೆ ಒಪ್ಪಂದದಂತೆ ಮದುವೆ ಮಾಡಲು ಹಿಂದೇಟು ಹಾಕಿರುವ ಕುಟುಂಬ. ಅಷ್ಟೆಲ್ಲ ಕೊಟ್ಟರೂ ತಾನೂ ಮೋಸಹೋಗಿರುವುದು ತಿಳಿಯದಿದ್ದ ಯುವಕ. ಕೊನೆಗೆ ಮಗಳನ್ನು ಮದುವೆ ಮಾಡಿಕೊಡುವಂತೆ ಕೇಳಿದಾಗ ಕುಟುಂಬ ಹಿಂದೇಟು ಹಾಕಿದೆ. ಅಲ್ಲದೇ ಯುವತಿ ಕೂಡ ಮದುವೆಯಾಗಲು ಒಪ್ಪಿಲ್ಲ. ಇದರಿಂದ ಯುವಕ ವಂಚನೆಗೆ ಒಳಗಾಗಿರುವುದು ಅರಿವಿಗೆ ಬರುತ್ತಿದ್ದಂತೆ ಕೊಟ್ಟ ಹಣ ವಾಪಸ್ ಕೇಳಿದ್ದಾನೆ. ಹಣ ವಾಪಸ್ ಕೇಳಿದಾಗ ಯುವಕನ ಮೇಲೆಯೇ ಅಡಿಕೆ ಮರ ಕಡಿದ ಆರೋಪ ಹೊರಿಸಿ ಜೈಲಿಗೆ ಕಳಿಸಿರುವ ಖತರ್ನಾಕ್ ಕುಟುಂಬ!

ಸಾಲಗಾರರ ಕಾಟ ತಾಳಲಾರದೆ ಇಡೀ ಕುಟುಂಬ ನಾಪತ್ತೆ; ವಾರ ಕಳೆದರೂ ಪತ್ತೆಯಾಗಿಲ್ಲ!

2023ರ ಆಗಸ್ಟ್‌ನಲ್ಲಿ ಯುವಕನ ಮೇಲೆ ಸುಳ್ಳು ಆರೋಪ ಹೊರಿಸಿ ಜೈಲಿಗೆ ಕಳಿಸಿರುವ ಐನಾತಿ ಕುಟುಂಬ. ಯುವಕ ಜೈಲಿನಿಂದ ಹೊರಗಡೆ ಬಂದ ಮೇಲೆ ಮೋಸಗಾರರ ವಿರುದ್ಧ ತಿರುಗಿಬಿದ್ದಿದ್ದಾನೆ. ಹಣ ನೀಡಿದ ದಾಖಲೆಗಳ ಸಮೇತ ಸಿಂಚನ ಕುಟುಂಬದ ಕಳ್ಳಾಟ ಬಯಲು ಮಾಡಿರುವ ಯುವಕ. ಮೂವರಿಗೆ ಹಣ ಕೊಟ್ಟಿದ್ದಕ್ಕೆ ದಾಖಲೆ, ಸಿಂಚನ ಹಾಗೂ ಅಶೋಕ್ ನಡುವೆ ನಡೆದ ವಾಟ್ಸಪ್ ಚಾಟ್ ಮೆಸೇಜ್ ದಾಖಲೆ ಸಮೇತ ಹುಣಸೂರು ಪೊಲೀಸ್ ಠಾಣೆಯಲ್ಲಿ ಯುವಕ ದೂರು ದಾಖಲಿಸಿದ್ದಾನೆ. ಕಾನೂನು ಕ್ರಮ ಕೈಗೊಳ್ಳಬೇಕು, ಹಣ ವಾಪಸ್ ಮರಳಿಸಬೇಕು ಎಂದು ಯುವಕ ಒತ್ತಾಯ. ಹೆಣ್ಣಿಗೊಂದು ನ್ಯಾಯ, ಗಂಡಿಗೊಂದು ನ್ಯಾಯವಾ ಎನ್ನುವ ಪ್ರಶ್ನೆ ಎತ್ತಿರುವ ಅಶೋಕ್, ಯುವತಿಯ ಮನೆ ಮುಂದೆಯೇ ಧರಣಿ ಕೂರಲು ಯುವಕ ಅಶೋಕ್ ಮುಂದಾಗಿದ್ದಾನೆ.

ಎಲ್ಲರಿಗೂ ಒಳಿತಾಗಲಿ, ಬಂದಿರೋ ಹಣ ಬಡವರಿಗೆ ಕೊಡ್ತಿನಿ ಎಂದ ಬಿಗ್‌ಬಾಸ್ ರನ್ನರ್ ಅಪ್‌ ಡ್ರೋನ್ ಪ್ರತಾಪ್

click me!