ರಸ್ತೆ ಮೇಲೆ ಹೋಗುತ್ತಿದ್ದ ಕುರಿಗಳ ಮೇಲೆ ಲಾರಿ ಹರಿದು 25ಕ್ಕೂ ಅಧಿಕ ಕುರಿಗಳು ದುರ್ಮರಣಕ್ಕೀಡಾದ ಘಟನೆ ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ಬಳಿಯ ಫುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಚಿಕ್ಕೋಡಿ ತಾಲೂಕಿನ ಅಮಲಗೇರಿ ಗ್ರಾಮದ ಕುರಿಗಾಹಿ ರಾಮಪ್ಪ ಪೂಜಾರಿ ಎಂಬುವವರಿಗೆ ಸೇರಿದ ಕುರಿಗಳು.
ಬೆಳಗಾವಿ (ಫೆ.11): ರಸ್ತೆ ಮೇಲೆ ಹೋಗುತ್ತಿದ್ದ ಕುರಿಗಳ ಮೇಲೆ ಲಾರಿ ಹರಿದು 25ಕ್ಕೂ ಅಧಿಕ ಕುರಿಗಳು ದುರ್ಮರಣಕ್ಕೀಡಾದ ಘಟನೆ ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ಬಳಿಯ ಫುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಚಿಕ್ಕೋಡಿ ತಾಲೂಕಿನ ಅಮಲಗೇರಿ ಗ್ರಾಮದ ಕುರಿಗಾಹಿ ರಾಮಪ್ಪ ಪೂಜಾರಿ ಎಂಬುವವರಿಗೆ ಸೇರಿದ ಕುರಿಗಳು. ಇಂದು ಹಲಗಾ ಗ್ರಾಮದ ಜಮೀನಿನಲ್ಲಿ ತಂಗಲು ಕುರಿಗಳ ಸಮೇತ ಆಗಮಿಸಿದ್ದ ರಾಮಪ್ಪ ಪೂಜಾರಿ. ರಸ್ತೆ ಪಕ್ಕ ಹೊರಟಿದ್ದ ಕುರಿಗಳ ಹಿಂಡಿನ ಮೇಲೆ ಲಾರಿ ಹರಿದಿದೆ. ಲಾರಿಯು ಡಿಕ್ಕಿಯಾದ ರಭಸಕ್ಕೆ ರಸ್ತೆ ಮೇಲೆಯೇ ವಿಲವಿಲ ಒದ್ದಾಡಿ ಪ್ರಾಣಬಿಟ್ಟಿರೋ ಕುರಿಗಳು. ಕುರಿಗಳ ಮೇಲೆ ಲಾರಿ ಹರಿಸಿದ ಬಳಿಕ ಲಾರಿ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿರುವ ಚಾಲಕ.
ಬೆಂಗಳೂರು ಹೊಸಕೋಟೆ ಹೆದ್ದಾರಿಯಲ್ಲಿ ಭೀಕರ ಅಪಘಾತ, ಮೊಬೈಲ್ ಹಿಡಿದುಕೊಂಡೇ ಪ್ರಾಣಬಿಟ್ಟ ಯುವಕ!
ಕುರಿಗಳ ಮಾರಣಹೋಮದಿಂದ ರಸ್ತೆ ರಕ್ತಸಿಕ್ತವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಲೆಂದರಲ್ಲೇ ಕುರಿಗಳು ಸತ್ತುಬಿದ್ದಿದ್ದರಿಂದ ಕೆಲಹೊತ್ತು ಸಂಚಾರ ಸ್ಥಗಿತವಾಗಿತ್ತು. ಘಟನೆ ಬಳಿಕ ಸ್ಥಳಕ್ಕೆ ಹಿರೇಬಾಗೇವಾಡಿ ಠಾಣೆ ಪೊಲೀಸರು ಭೇಟಿ ನೀಡಿ, ಮೃತ ಕುರಿಗಳ ತೆರವು ಕಾರ್ಯಾಚರಣೆ ಮಾಡಲಾಯಿತು. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
ವೇಗವಾಗಿ ಹಂಪ್ ಎಗರಿದ ಬೈಕ್: ತಲೆಗೆ ಪೆಟ್ಟು ಬಿದ್ದು ಸವಾರ ಸಾವು!