ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಗೆ ಮೈಸೂರಿನ ಪೋಕ್ಸೋ ವಿಶೇಷ ನ್ಯಾಯಾಲಯವು 25 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಗುರುವಾರ ತೀರ್ಪು ನೀಡಿದೆ.
ಮೈಸೂರು (ಅ.14): ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಗೆ ಮೈಸೂರಿನ ಪೋಕ್ಸೋ ವಿಶೇಷ ನ್ಯಾಯಾಲಯವು 25 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಗುರುವಾರ ತೀರ್ಪು ನೀಡಿದೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಹಾರೋಪುರ ಗ್ರಾಮದ ಪ್ರದೀಪ್ ಕುಮಾರ್ ಶಿಕ್ಷೆಗೆ ಗುರಿಯಾದವ. ಈತನು ಬಾಲಕಿಗೆ ದೂರದ ಸಂಬಂಧಿಯಾಗಿದ್ದು, ಆಗಾಗ್ಗೆ ಬಾಲಕಿ ಮನೆಗೆ ಬರುತ್ತಿದ್ದ.
2021ರ ಫೆ.17 ರಂದು ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಾಗ ಬಲವಂತವಾಗಿ ಆಕೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಪ್ರದೀಪ್, ಮನೆಯವರಿಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದೇ ರೀತಿ ಹಲವಾರು ಬಾರಿ ಬಾಲಕಿ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿದ್ದ ಪರಿಣಾಮ ಬಾಲಕಿಯು 7 ತಿಂಗಳ ಗರ್ಣಿಣಿಯಾಗಿರುವುದು ದೃಢಪಟ್ಟಿತ್ತು. ಈ ಸಂಬಂಧ ನಂಜನಗೂಡು ಆಗಿನ ಸಿಪಿಐ ಲಕ್ಷ್ಮೀಕಾಂತ್ ತಳವಾರ್ ಅವರು ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
undefined
ನಾನೂ ಸಿಎಂ ಸ್ಥಾನದ ಆಕಾಂಕ್ಷಿ: ಸಚಿವ ಶರಣಬಸಪ್ಪ ದರ್ಶನಾಪುರ ಹೊಸ ಬಾಂಬ್
ಈ ಪ್ರಕರಣದ ವಿಚಾರಣೆ ನಡೆಸಿದ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶೈಮ ಖರ್ಮೋಜ್ ಅವರು, ಆರೋಪಿ ಪ್ರದೀಪ್ ಕುಮಾರ್ ಮೇಲಿನ ಆರೋಪ ಸಾಬೀತಾಗಿದೆ ಎಂದು ಪೋಕ್ಸೋ ಕಾಯ್ದೆಯಂತೆ 25 ವರ್ಷಗಳ ಕಠಿಣ ಸಜೆ, 1.01 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಹಣದಲ್ಲಿ 75 ಸಾವಿರ ರೂ. ಪರಿಹಾರದ ರೂಪದಲ್ಲಿ ಬಾಲಕಿಗೆ ನೀಡಬೇಕು ಹಾಗೂ ನೊಂದ ಬಾಲಕಿ 5 ಲಕ್ಷ ರೂ. ಪರಿಹಾರಕ್ಕೆ ಅರ್ಹಳು ಎಂದು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಕೆ.ಬಿ. ಜಯಂತಿ ವಾದಿಸಿದ್ದರು.
ಸುಳ್ಳು ಜಾತಿ ಪ್ರಮಾಣಪತ್ರ ನೀಡಿದ್ದ ಗ್ರಾಮ ಲೆಕ್ಕಾಧಿಕಾರಿಗೆ ಜೈಲು ಶಿಕ್ಷೆ: ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಸರ್ಕಾರಿ ಉದ್ಯೋಗ ಪಡೆದಿದ್ದ ವ್ಯಕ್ತಿಗೆ 2 ವರ್ಷ 3 ತಿಂಗಳು ಜೈಲುಶಿಕ್ಷೆ, ₹11 ಸಾವಿರ ದಂಡ ಪಾವತಿಸುವಂತೆ ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ. ಪಟ್ಟಣ ಠಾಣೆ ವ್ಯಾಪ್ತಿ ಭದ್ರಾಪುರದ ನಿವಾಸಿ, 1997ರಲ್ಲಿ ಸೇವೆಗೆ ಸೇರ್ಪಡೆಗೊಂಡಿದ್ದ ಗ್ರಾಮ ಲೆಕ್ಕಾಧಿಕಾರಿ ಮೋಹನಕುಮಾರ್ ಅಪರಾಧಿ. ತಂದೆ ಮೃತರಾದ ಕಾರಣಕ್ಕೆ ಅನುಕಂಪ ಆಧಾರದಲ್ಲಿ ಉದ್ಯೋಗ ನೀಡಲಾಗಿತ್ತು. ತಂದೆ ಸೇವಾ ಪುಸ್ತಕದಲ್ಲಿ ಗಂಗಾಮತ ಎಂದು ನಮೂದಾಗಿತ್ತು.
ಆರೋಪಿಯ ಶಾಲಾ ದಾಖಲೆಯಲ್ಲಿ ಮಾತ್ರ ಹಿಂದೂ ಭೋವಿ ಎಂದು ನಮೂದಾಗಿತ್ತು. ಅದನ್ನೆ ಉದ್ಯೋಗ ಪಡೆಯುವುದಕ್ಕೆ ದಾಖಲೆಯಾಗಿ ಬಳಸಿಕೊಂಡು ಸರ್ಕಾರಿ ಉದ್ಯೋಗ ಪಡೆದಿದ್ದರು. ಅಲ್ಲದೇ, ಅವರ ಸೇವಾ ಪುಸ್ತಕದಲ್ಲೂ ಹಿಂದೂ ಭೋವಿ ಎಂದು ನಮೂದಿಸಿದಲ್ಲದೆ ಮುಂಬಡ್ತಿಗೂ ಪ್ರಯತ್ನಿಸಿದ್ದರು. ತನ್ನದು ಗಂಗಾಮತ ಜಾತಿ ಎಂದು ಗೊತ್ತಿದ್ದರೂ ನೇಮಕಾತಿ ಪ್ರಾಧಿಕಾರಕ್ಕೆ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ವಂಚಿಸಲಾಗಿದೆ ಎಂದು ಕಂದಾಯ ಇಲಾಖೆ 2010ರಲ್ಲಿ ಪಟ್ಟಣ ಠಾಣೆಗೆ ದೂರು ನೀಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ಹಿಂದೂಗಳ ಹತ್ಯೆ ಕಂಡು ಹೊಟ್ಟೆ ಉರಿಯುತ್ತಿದೆ: ಕೆ.ಎಸ್.ಈಶ್ವರಪ್ಪ
ವಾದ ವಿವಾದ ಆಲಿಸಿದ ನ್ಯಾಯಾಲಯ ಭಾ.ದಂ.ಸಂ. ಕಲಂ 177ರನ್ವಯ ಸುಳ್ಳು ಮಾಹಿತಿ ನೀಡಿದ ಕಾರಣಕ್ಕೆ 3 ತಿಂಗಳ ಸಾದಾ ಸಜೆ, ₹1000 ದಂಡ ಮತ್ತು ಭಾ.ದಂ.ಸಂ. ಕಲಂ 420, 511ರ ಅನ್ವಯ ವಂಚನೆ, ಅಪರಾಧ ಎಸಗಿದ ಕಾರಣಕ್ಕೆ 2 ವರ್ಷ ಸಾದಾ ಸಜೆ, ₹10 ಸಾವಿರ ದಂಡ ವಿಧಿಸಿ, ಅ.6ರಂದು ನ್ಯಾ. ಆರ್.ಯಶವಂತಕುಮಾರ್ ತೀರ್ಪು ನೀಡಿದ್ದಾರೆ. ಸಹಾಯಕ ಸರಕಾರಿ ಅಭಿಯೋಜಕರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.