ಸಿಡಿ ಕೇಸ್‌;  ಸಂತ್ರಸ್ತೆ ಪೋಷಕರು ಸಲ್ಲಿಸಿದ್ದ ರಿಟ್ ವಜಾ, ಕಾರಣ ಏನು?

By Suvarna NewsFirst Published Jun 22, 2021, 2:44 PM IST
Highlights

* ಮಾಜಿ ಸಚಿವರ  ಅಶ್ಲೀಲ ಸಿಡಿ ಪ್ರಕರಣ
* ಸಂತ್ರಸ್ತೆ ಪೋಷಕರು ಸಲ್ಲಿಸಿದ್ದ ಅರ್ಜಿ ವಜಾ
* ಯುವತಿ ಯಾವುದೇ ಒತ್ತಡದಲ್ಲಿ ಹೇಳಿಕೆ ನೀಡಿಲ್ಲ ಎಂದ ನ್ಯಾಯಾಲಯ
*  ಸ್ವಇಚ್ಛೆಯಿಂದ  ಹಾಗೂ ಯಾವುದೇ ಒತ್ತಾಯವಿಲ್ಲದೆ ಹೇಳಿಕೆ ನೀಡಿದ್ದಾಳೆ ಎಂದು ವಾದ

ಬೆಂಗಳೂರು(ಜು. 22)  ಸಿಡಿ ಪ್ರಕರಣಕ್ಕೆ ಸಂಬಂಧಿಸಿ  ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ನೇತೃತ್ವದ ಏಕಸದಸ್ಯ ಪೀಠ ಮಹತ್ವದ ತೀರ್ಪು ನೀಡಿದೆ. ಸಂತ್ರಸ್ತೆ ಪಾಲಕರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾ ಮಾಡಿದೆ.

ಸಂತ್ರಸ್ತೆ ಮ್ಯಾಜಿಸ್ಟ್ರೇಟ್ ಎದುರಿಗೆ ನೀಡಿದ್ದ  ಕಲಂ 164 Cr.P. C ರ ಅಡಿಯಲ್ಲಿ ಹೇಳಿಕೆಯನ್ನು ಹಾಗೂ ಅದರ ನ್ಯಾಯಬದ್ಧತೆಯನ್ನು ಹೈಕೋರ್ಟ್ ಮುಂದೆ ಸಂತ್ರಸ್ತೆಯ ಪೋಷಕರು ಪ್ರಶ್ನೆ ಮಾಡಿದ್ದರು. ತಮ್ಮ ಮಗಳು ಯಾರದ್ದೋ  ಒತ್ತಡಕ್ಕೆ ಬಿದ್ದು ಹೇಳಿಕೆ ನೀಡುತ್ತಿದ್ದಾಳೆ ಎಂದು ಹೇಳಿದ್ದರು.

ಸಿಡಿ ಕೇಸ್ ಹಿಂದಿನ ಅಸಲಿ ಕತೆ ಬೇರೆಯೇ ಇದೆ

ಸಂತ್ರಸ್ತೆಯ ಹೇಳಿಕೆ ಅವಳ ಮನಸ್ಸಿಗೆ ವಿರುದ್ಧವಾಗಿ ಹಾಗೂ ಒತ್ತಾಯಪೂರ್ವಕವಾಗಿ ಪಡೆಯಲಾಗಿದೆ ಎಂದು ಆರೋಪಿಸಿದ್ದರು. ಸಂತ್ರಸ್ತೆಯ ಪೋಷಕರು ಸಲ್ಲಿಸಿದ್ದ ಈ ರಿಟ್ ಅರ್ಜಿಯಲ್ಲಿ ಸಂತ್ರಸ್ತೆಯ ಪರವಾಗಿ ತಮ್ಮ ವಾದವನ್ನೂ ಆಲಿಸಬೇಕೆಂದು ಸುಪ್ರೀಂಕೋರ್ಟ್ ವಕೀಲರಾದ ಸಂಕೇತ ಏಣಗಿ ಅರ್ಜಿ ಸಲ್ಲಿಸಿದ್ದರು.

ವಕೀಲ ಸಂಕೇತ ಏಣಗಿ ರವರ ವಾದ ಆಲಿಸಿದ ನ್ಯಾಯಾಲಯ. ಸಂತ್ರಸ್ತೆ ಮ್ಯಾಜಿಸ್ಟ್ರೇಟ್ ಎದುರಿಗೆ ನೀಡಿದ್ದ  ಕಲಂ 164 Cr.P. C ರ ಅಡಿಯಲ್ಲಿ ಹೇಳಿಕೆ  ನ್ಯಾಯಬದ್ಧವಾಗಿದ್ದು, ಸುಪ್ರೀಂಕೋರ್ಟಿನ ನಿರ್ಭಯ ಅತ್ಯಾಚಾರ ಪ್ರಕರಣದ ತೀರ್ಪಿನ ಅನುಸಾರವಾಗಿದೆ, ಹಾಗೂ, ತದನಂತರ ಹೊಸದಾಗಿ 2013ರಲ್ಲಿ ಕಲಂ 164 Cr.P. C ರ  ತಿದ್ದುಪಡಿಯಾಗಿ  ಸೇರ್ಪಡೆಯಾದ ಹೊಸ ಕಲಂ ಕಲಂ 164(5) & (5A) Cr.P. C ರ ಅಡಿಯಲ್ಲಿ ಸಂತ್ರಸ್ತೆ ಮ್ಯಾಜಿಸ್ಟ್ರೇಟ್ ಎದುರಿಗೆ  ಸ್ವಇಚ್ಛೆಯಿಂದ  ಹಾಗೂ ಯಾವುದೇ ಒತ್ತಾಯವಿಲ್ಲದೆ ಹೇಳಿಕೆ ನೀಡಿದ್ದು ಅದು ನ್ಯಾಯಬದ್ಧವಾಗಿದೆ ಏಣಗಿ ವಾದ ಮಂಡಿಸಿದ್ದರು. SIT ಪರ ನ್ಯಾಯವಾದಿ ಪ್ರಸನ್ನಕುಮಾರ್ ವಾದ ಮಂಡನೆ ಮಾಡಿದ್ದರು. 

 

click me!