
ರಾಮನಗರ (ನ.01): ಅಯಾನ್ ಹೋಂ ಸ್ಟೇನಲ್ಲಿ ರೇವ್ ಪಾರ್ಟಿ ಆರೋಪ ಹಿನ್ನೆಲೆಯಲ್ಲಿ ತಡರಾತ್ರಿ ಕಗ್ಗಲೀಪುರ ಪೊಲೀಸರು ದಾಳಿ ಮಾಡಿ ಯುವಕ, ಯುವತಿಯರು ಸೇರಿ 130 ಹೆಚ್ಚು ಜನರನ್ನು ಬಂಧಿಸಿದ್ದಾರೆ. ತಡರಾತ್ರಿ ಅಯಾನ್ ಹೋಂ ಸ್ಟೇನಲ್ಲಿ ರೇವ್ ಪಾರ್ಟಿ ಆರೋಪ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ಮಾಡಿದ್ದರು. ಪಾರ್ಟಿಯಲ್ಲಿ ಇದ್ದವರೆಲ್ಲಾ ಬೆಂಗಳೂರು ಮೂಲದವರಾಗಿದ್ದು 150ಕ್ಕೂ ಹೆಚ್ಚು ಜನರು ಪಾರ್ಟಿಯಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದರು. ಸದ್ಯ ರೇವ್ ಪಾರ್ಟಿ ನಡೆಸಿದ್ದವರಿಗೆ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ನಡೆಸಲಾಗಿದ್ದು, ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ವಾಟ್ಸ್ ಆಪ್‌ನಲ್ಲಿ ಗ್ರೂಪ್ ಮಾಡಿಕೊಂಡು ಪಾರ್ಟಿ ಆಯೋಜನೆ ಮಾಡಲಾಗಿದ್ದು, 19-23 ವರ್ಷದವರೆಗಿನ ಯುವಕ ಯುವತಿಯರು ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಜೆನ್ ಜೀ ಎಂಬ ಗ್ರೂಪ್ ಮಾಡಿಕೊಂಡು ಪಾರ್ಟಿಯಲ್ಲಿ ಯುವಕ-ಯುವತಿಯರು ಭಾಗಿಯಾಗಿದ್ದು, ಬೆಂಗಳೂರು ಮೂಲದ ವಿದ್ಯಾರ್ಥಿಗಳು ಪಾರ್ಟಿಯಲ್ಲಿದ್ದರು. ಪ್ರತಿ ಬಾರಿ ಪಾರ್ಟಿ ಆಯೋಜನೆ ಮಾಡ್ತಿದ್ದಾಗಲೂ ವಾಟ್ಸ್ ಆಪ್ ಗ್ರೂಪ್ ಮುಖಾಂತರ ಅಪ್ ಡೇಟ್ ಮಾಡಿಕೊಂಡು ಪಾರ್ಟಿಯಲ್ಲಿ ಯುವಕ-ಯುವತಿಯರು ಭಾಗಿಯಾಗ್ತಿದ್ದರು ಎಂದು ತಿಳಿದು ಬಂದಿದೆ.
ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಹೋಮ್ ಸ್ಟೇ ತೆರೆಯಲಾಗಿದೆ. ಯಾವುದೇ ಅನುಮತಿ ಪಡೆಯದೇ ಪಾರ್ಟಿ ಆಯೋಜನೆ ಮಾಡಿದ್ದಾರೆ. ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ಕೊಡ್ತಿದ್ದಾರೆ ಅಂತ ಮಾಹಿತಿ ಬಂತು. ಈ ಹಿನ್ನೆಲೆ ಕಗ್ಗಲೀಪುರ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಪಾರ್ಟಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಜನ ಇದ್ರು.35 ಯುವತಿಯರು, ಮೂವರು ಅಪ್ರಾಪ್ತರು, ಸೇರಿ 70 ಮಂದಿ ಯುವಕರು ಇದ್ದಾರೆ. ಅದರಲ್ಲಿ ಕೆಲವರು ಮಾದಕ ವ್ಯಸನಿಗಳು ಇದ್ದಾರೆ. ಸ್ಥಳದಲ್ಲಿ ಕೆಲ ಇಂಜೆಕ್ಷನ್ ರೀತಿಯ ಮಾದಕ ವಸ್ತುಗಳು ಪತ್ತೆಯಾಗಿದೆ. ವಶಕ್ಕೆ ತೆಗೆದುಕೊಂಡು ಟೆಸ್ಟ್‌ಗೆ ಕಳುಹಿಸಿದ್ದೇವೆ. 4 ಜನ ಕಾರ್ಯಕ್ರಮ ಆಯೋಕರ ಮೇಲೆ ಪ್ರಕರಣ ದಾಖಲಿಸಿದ್ದೇವೆ. ಎಲ್ಲಾ ವಿದ್ಯಾರ್ಥಿಗಳನ್ನ ಮೆಡಿಕಲ್ ಟೆಸ್ಟ್ ಮಾಡಿಸಿ ಅಡ್ರೆಸ್ ಪಡೆದು ಕಳುಹಿಸಿದ್ದೇವೆ. ಪ್ರಕರಣದ ತನಿಖೆ ಮುಂದುವರೆದಿದೆ ಎಂದು ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ