ಮಸೀದಿ ಮುಂದೆ ಕೊಂಡ ಹಾಯುವಾಗ ವ್ಯಕ್ತಿಯೊಬ್ಬ ಕಾಲು ಜಾರಿ ಬೆಂಕಿಯಲ್ಲಿ ಬೆಂದು ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ರಾಯಚೂರು (ಜು.16): ಕೊಂಡ ಹಾಯುವಾಗ ವ್ಯಕ್ತಿಯೊಬ್ಬ ಕಾಲು ಜಾರಿ ಬೆಂಕಿಯಲ್ಲಿ ಬೆಂದು ಮೃತಪಟ್ಟಿರುವ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯಲ್ಲಿ ಈ ದುರಂತ ನಡೆದಿದ್ದು, ಮೊಹರಂ ಅಲಾಯಿ ಕುಣಿಗೆ ವ್ಯಕ್ತಿ ಕಾಲು ಜಾರಿ ಬಿದ್ದು ದುರಂತ ಅಂತ್ಯ ಕಂಡಿದ್ದಾನೆ.
ವ್ಯಕ್ತಿ ಅಲಾಯಿ ಕುಣಿಗೆ ಬಿದ್ದ ಬಳಿಕ ಆತನ ರಕ್ಷಣೆಗೆ ಜನ ಮುಂದಾಗೊ ವಿಡಿಯೋ ಏಷ್ಯಾನೆಟ್ ಸುವರ್ಣನ್ಯೂಸ್ ಗೆ ಲಭ್ಯವಾಗಿದೆ. ರಾಯಚೂರು ಜಿಲ್ಲೆ ಮಸ್ಕಿ ತಾ.ಬೊಮ್ಮನಾಳ ಗ್ರಾಮದಲ್ಲಿ ಘಟನೆ ನಡೆದಿದ್ದು, ಜುಲೈ14 ರ ರಾತ್ರಿ ನಡೆದಿದ್ದ ನಡೆದಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೃತ ವ್ಯಕ್ತಿಯನ್ನು ಯಮನಪ್ಪ ಹಳೆಗೌಡ್ರು (45) ಎಂದು ಗುರುತಿಸಲಾಗಿದೆ. ಮೊಹರಂ ಹಿನ್ನೆಲೆ ರಾತ್ರಿ ಬೊಮ್ಮನಾಳ ಗ್ರಾಮದ ಮಸೀದಿ ಎದುರಿನ ಅಲಾಯಿ ಕುಣಿಯಲ್ಲಿ ಓಡುತ್ತಿದ್ದ ವೇಳೆ ಯಮನಪ್ಪ ಕಾಲುಜಾರಿ ಬಿದ್ದಿದ್ದ, ಈ ವೇಳೆ ಕೂಡಲೇ ಯಮನಪ್ಪ ದೇಹಕ್ಕೆ ಬೆಂಕಿ ಹೊತ್ತಿಕೊಂಡು, ಬೆಂಕಿಯಲ್ಲಿ ಸುಟ್ಟು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಯಮನಪ್ಪ ಕುಣಿಯಲ್ಲಿ ಬಿದ್ದಿ ತಕ್ಷಣ ನೀರು ಹಾಕಿ ಮೇಲೆತ್ತಲಾಯ್ತು, ಬಿಂದಿಗೆಗಳ ಮೂಲಕ ನೀರು ಎರಚಿ ಯಮನಪ್ಪ ರಕ್ಷಣೆಗೆ ಗ್ರಾಮಸ್ಥರು ಯತ್ನ ನಡೆಸಿದರೂ ಫಲಕಾರಿಯಾಗಲಿಲ್ಲ. ತೀವ್ರವಾಗಿ ಬೆಂಕಿ ತಗುಲಿದ ಹಿನ್ನೆಲೆ ಸ್ಥಳದಲ್ಲೇ ಯಮನಪ್ಪ ಮೃತಪಟ್ಟಿದ್ದ. ತುರ್ವಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರಾಯಚೂರಿನ ಬಹುತೇಕ ಕಡೆ ಮೊಹರಂ ಹಬ್ಬದ ಅಲಾಯಿ ದೇವರನ್ನು ಪೂಜೆ ಮಾಡುತ್ತಾರೆ. ಹಿಂದೂ ಮುಸ್ಲಿಂಮರೆನ್ನದೆ ಇದರಲ್ಲಿ ಭಾಗವಹಿಸುತ್ತಾರೆ.
ಈ ಊರಲ್ಲಿ ಮುಸ್ಲಿಂರಿಲ್ಲದಿದ್ದರೂ ಹಿಂದೂಗಳಿಂದಲೇ ಮೊಹರಂ!
ಮೊಹರಂ ಹಿಂದೂ-ಮುಸ್ಲಿಂ ಸಾಮರಸ್ಯ ಸಾರುವ ಹಬ್ಬ ಹೀಗಾಗಿ ರಾಯಚೂರಿನ ದೇವದುರ್ಗ ತಾಲೂಕಿನ ದೊಂಡಂಬಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಗಡಂಬಳಿಯೇ ವಿಶಿಷ್ಟ ಗ್ರಾಮವೊಂದಿದೆ. ಇಲ್ಲಿ ಮುಸ್ಲಿಂರಿಲ್ಲದಿದ್ದರೂ ಹಿಂದೂಗಳೇ ಮೊಹರಂ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಅಲಾಯಿ ದೇವರ ಪ್ರತಿಷ್ಠಾಪನೆ, ಮೆರವಣಿಗೆ ಮಾಡಿ ಮೊಹರಂ ಅನ್ನು ಶ್ರದ್ಧಾ ಭಕ್ತಿಯಿಂದ ಮಾಡುತ್ತಾರೆ. ಇವರ ಪೂರ್ವಜರ ಕಾಲದಿಂದಲೂ ಇಲ್ಲಿ ಹಿಂದೂಗಳೇ ಮೊಹರಂ ಮಾಡುತ್ತಾರೆ.