
ಗುರುಗಾಂವ್(ಜು.16) ಕಾಮುಕರ ಅಟ್ಟಹಾಸಕ್ಕೆ ಇದೀಗ ಬೀದಿ ನಾಯಿಗಳು ನೆಮ್ಮದಿಯಿಂದ ನಿದ್ದೆ ಮಾಡಲು ಭಯಪಡುವ ಪರಿಸ್ಥಿತಿ ಎದುರಾದಿದೆ. ಮಲಗಿದ್ದ ಬೀದಿ ನಾಯಿ ಮೇಲೆ ಇದೆಂತಾ ಕೌರ್ಯ? ವೃದ್ಧನೊಬ್ಬ ಬೀದಿ ನಾಯಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಗುರುಗಾಂವ್‌ನಲ್ಲಿ ನಡೆದಿದೆ. ಬೀದಿ ನಾಯಿ ಖಾಸಗಿ ಅಂಗವನ್ನು ಪದೇ ಪದೇ ಮುಟ್ಟಿ ಕಾಮ ತೃಷೆ ತೀರಿಸಿಕೊಳ್ಳಲು ಯತ್ನಸಿದ್ದಾನೆ. ಈ ವೃದ್ಧನ ಕಾಮುಕ ಅಟ್ಟಹಾಸದ ವಿಡಿಯೋ ಇದೀಗ ವೈರಲ್ ಆಗಿದೆ.
ಗುರುಗಾಂವ್ ಸೆಕ್ಟರ್ 48 ರಸ್ತೆಯಲ್ಲಿ ಈ ಘಟನೆ ನಡೆದಿದೆ. ಈ ವೃದ್ಧನ ದೌರ್ಜನ್ಯದ ವಿಡಿಯೋವನ್ನು ಸ್ಟ್ರೀಟ್ಸ್ ಆಫ್ ಮುಂಬೈ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೃದ್ಧನೊಬ್ಬ ಮಲಗಿದ್ದ ಬೀದಿ ನಾಯಿ ಬಳಿ ಬಂದು ನಾಯಿಯನ್ನು ಪ್ರೀತಿಯಿಂದ ಆರೈಕೆ ಮಾಡಿದ್ದಾನೆ. ಅಷ್ಟೊತ್ತಿಗೆ ನಾಯಿ ಎಚ್ಚರಗೊಂಡು ಎದ್ದಿದೆ. ಬಳಿಕ ನಾಯಿಯ ತಲೆ ಸವರುತ್ತಾ ಪ್ರೀತಿ ತೋರಿದ್ದಾನೆ. ವೃದ್ಧನ ಪ್ರೀತಿಗೆ ನಾಯಿ ಕೂಡ ಆತ್ಮೀಯವಾಗಿದೆ.
ತನ್ನ ಆಹಾರವನ್ನು ಹಸಿವಿನಿಂದ ಬಂದ ಬೀದಿ ನಾಯಿಗೆ ಹಂಚಿದ ನಿರ್ಗತಿಕನ ಹೃದಯಸ್ಪರ್ಶಿ ವಿಡಿಯೋ!
ನಾಯಿ ಆತ್ಮೀಯವಾಗುತ್ತಿದ್ದಂತೆ ವೃದ್ಧ ನಾಯಿಯ ಖಾಸಗಿ ಅಂಗಕ್ಕೆ ಕೈ ಹಾಕಿ ಕಾಮ ತೃಷೆ ತೀರಿಸಿಕೊಳ್ಳಲು ಯತ್ನಿಸಿದ್ದಾನೆ. ವೃದ್ಧ ನಾಯಿ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಎರಡು ವಿಡಿಯೋಗಳು ವೈರಲ್ ಆಗಿದೆ. ಈ ರೀತಿ ನಾಯಿ ಮೇಲೆ ತನ್ನ ಕಾಮ ತೃಷೆ ತೀರಿಸಿಕೊಳ್ಳುತ್ತಿರುವುದು ಮೊದಲಲ್ಲ. ಕಳೆದ ಹಲವು ದಿನಗಳಿಂದ ಈತ ಇದೇ ರೀತಿ ಮಾಡುತ್ತಿದ್ದಾನೆ ಅನ್ನೋ ಮಾತುಗಳು ಕೇಳಿಬಂದಿದೆ.
ಬೀದಿ ನಾಯಿಗಳಿಗೆ ಬಿಸ್ಕೆಟ್ ಸೇರಿದಂತೆ ಕೆಲ ಆಹಾರಗಳನ್ನು ನೀಡುತ್ತಾನೆ. ಇದರಿಂದ ಬೀದಿ ನಾಯಿಗಳು ಈ ವದ್ಧನ ಜೊತೆ ಸಲುಗೆಯಿಂದ ಇವೆ. ಇದೇ ಕಾರಣಕ್ಕಾಗಿ ಈತ ನಾಯಿಗೆ ಬಿಸ್ಕೆಟ್ ಸೇರಿದಂತ ಇತರ ಆಹಾರ ಹಾಕುತ್ತಿದ್ದ. ನಾಯಿ ಆತ್ಮೀಯವಾಗುತ್ತಿದ್ದಂತೆ ಖಾಸಗಿ ಅಂಗ ಮುಟ್ಟಿ, ಉದ್ರೇಕಗೊಳಿಸಿ ತನ್ನ ಕಾಮ ತೃಷೆಯನ್ನು ತೀರಿಸುವ ಯತ್ನ ಮಾಡುತ್ತಿದ್ದಾನೆ. ಈ ವೃದ್ಧಿನ ದೌರ್ಜನ್ಯದ ವಿಡಿಯೋ ಇದೀಗ ವೈರಲ್ ಆಗಿದೆ.
ಬೀದಿ ನಾಯಿ ಕೊಂದ ಕುಟುಂಬದ ವಿರುದ್ಧ ಸೇಡು, ಚೆನ್ನೈನಿಂದ ಕೋಲ್ಕತಾಗೆ ತೆರಳಿ ಚಾಕು ಇರಿದ ವಿದ್ಯಾರ್ಥಿ!
ಈ ವಿಡಿಯೋಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಈ ರೀತಿ ನಾಯಿ ಮೇಲೆ ಅಟ್ಟಹಾಸ ನಡೆಸುತ್ತಿರುವ ಕಾಮಕರಿಗೆ ತಕ್ಕ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ. ಹಲವೆಡೆ ಈ ರೀತಿಯ ಘಟನಗಳು ನಡೆಯುತ್ತಿದೆ. ಆದರೆ ಶಿಕ್ಷೆಯಾಗುತ್ತಿಲ್ಲ. ಹೀಗಾಗಿ ಕಾಮುಕರಿಗೆ ಭಯವಿಲ್ಲ. ಈ ಕಾಮುಕರ ಯಾವತ್ತೂ ಡೇಂಜರ್. ಇವರು ಪ್ರಾಣಿಗಳನ್ನು ಬಿಡುವುದಿಲ್ಲ, ಇತ್ತ ಹೆಣ್ಣುಮಕ್ಕಳನ್ನೂ ಬಿಡುವುದಿಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ