
ಕೊಪ್ಪಳ (ಜ.4) : ರಾಜ್ಯದಲ್ಲಿ ತೀವ್ರ ಬರಗಾಲ ಬಂದಿರೋ ಹಿನ್ನೆಲೆ ಬೆಳೆದ ಬೆಳೆಗಳೆಲ್ಲ ನಾಶವಾಗಿವೆ. ರೈತರು ಜಮೀನು ಕಡೆ ಹೋಗುವುದೇ ಕಡಿಮೆ ಮಾಡಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು. ರಾತ್ರೋರಾತ್ರಿ ರೈತರ ಜಮೀನುಗಳಿಗೆ ನುಗ್ಗಿ ಒಂದೇ ದಿನದಲ್ಲಿ 11 ಕಡೆ ರೈತರ ಪಂಪ್‌ಸೆಟ್, ಕೇಬಲ್ ಕದ್ದು ಪರಾರಿಯಾಗಿರುವ ಘಟನೆ ಕೊಪ್ಪಳ ತಾಲೂಕಿನ ಮುದ್ದಾಬಳ್ಳಿ-ಹ್ಯಾಟಿ ಸೀಮಾದಲ್ಲಿ ನಡೆದಿದೆ.
ಬುಧವಾರ ತಡರಾತ್ರಿ 11 ರೈತರ ಪಂಪ್‌ಸೆಟ್ ಕೇಬಲ್ ಕದ್ದಿರೋ ಖದೀಮರು. ಬಸಪ್ಪ, ಶಿವಪ್ಪ, ಮೈಲಾರಪ್ಪ, ಮಂಜುನಾಥ, ಗುತ್ತೂರಪ್ಪ ಸೇರಿ 11 ರೈತರ ಪಂಪಸೆಟ್ ಕೇಬಲ್ ಕಳ್ಳತನವಾಗಿದೆ.ಬೆಳಗಿನ ಜಾಗ 3 ಗಂಟೆಗೆ ನೀರು ಹರಿಸಲು ತೆರಳಿದ ವೇಳೆ ಕೇಬಲ್ ಕಳ್ಳತನ ಬೆಳಕಿಗೆ ಬಂದಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಪಂಪ್‌ಸೆಟ್ ಕೇಬಲ್ ಹಾಕಿಸಿಕೊಂಡಿದ್ದ ರೈತರು. ಇದೀಗ ಬರದ ಪರಿಸ್ಥಿತಿಯಲ್ಲಿ ಕೇಬಲ್ ಕಳ್ಳತನವಾಗಿದ್ದಕ್ಕೆ ರೈತರು ಕಣ್ಣೀರು ಹಾಕುವಂತಾಗಿದೆ.
ಮೋದಿ ಭಾವಚಿತ್ರವಿರೋ ಪೋಸ್ಟರ್ ಹಿಡಿಯಲು ಹಿಂದೇಟು; ಗ್ರಾಪಂ ಅಧ್ಯಕ್ಷೆ ಫರೀದಾ ಬೇಗಂರಿಂದ ಪ್ರಧಾನಿಗೆ ಅವಮಾನ?
ರೈತರು ಜಮೀನಿನಲ್ಲಿ ಇಲ್ಲದ ವೇಳೆ ನುಗ್ಗಿರೋ ಖದೀಮರು. ಪಂಪ್‌ಸೆಟ್ ಕೇಬಲ್ ಎಲೆಕ್ಟ್ರಿಕ್ ವಸ್ತುಗಳನ್ನು ಕದಿಯಲಾಗಿದೆ. ಅಕ್ಕಪಕ್ಕದ ಜಮೀನುಗಳಿಗೆ ನುಗ್ಗಿ ಕಳ್ಳತನ. ರೈತರ ಪಂಪ್‌ಸೆಟ್ ಕದಿಯುತ್ತಿರುವುದು ಇದೇ ಮೊದಲಲ್ಲ ಹಿಂದೆಯೂ ಹಲವು ರೈತರ ಜಮೀನುಗಳಲ್ಲಿ ಅಳವಡಿಸಿದ್ದ ಪಂಪ್‌ಸೆಟ್ ಕದಿಯಲಾಗಿದೆ. ಆದರೆ ದೂರು ನೀಡಿದರು. ಇದುವರೆಗೆ ಬಂಧಿಸದೇ ನಿರ್ಲಕ್ಷ್ಯ ತೋರಿರುವ ಪೊಲೀಸ್ ಇಲಾಖೆ. ಇದೀಗ ಮತ್ತೆ ರೈತರ ಜಮೀನುಗಳಿಗೆ ನುಗ್ಗಿ ಕಳ್ಳತನ ಮಾಡಿ ಪರಾರಿಯಾಗಿರುವ ಖದೀಮರು. ರೈತರ ಪಂಪ್‌ಸೆಟ್‌ಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಕಳ್ಳತನ ಮಾಡಿರುವ ಆರೋಪಿಗಳನ್ನು ಬಂಧಿಸುವಂತೆ ರೈತರು ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ