Uttara Kannada: ಆಸ್ತಿ ವಿವಾದಕ್ಕೆ ಅಣ್ಣನನ್ನೇ ಹೊಡೆದು ಕೊಂದ ಸಹೋದರರು, ವಿಡಿಯೋ ವೈರಲ್!

By Gowthami KFirst Published Nov 11, 2022, 5:26 PM IST
Highlights

ಉತ್ತರಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ತೊಟ್ಟಿಲುಗುಂಡಿ ಗ್ರಾಮದಲ್ಲಿ  ಆಸ್ತಿ ವಿವಾದಕ್ಕೆ ಸಹೋದರರ ನಡುವೆ ನಡೆದಿದ್ದ ಗಲಾಟೆ ಮತ್ತು ಭೀಕರ ಕೊಲೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.  

ಉತ್ತರಕನ್ನಡ (ನ.11): ಆಸ್ತಿ ವಿವಾದಕ್ಕೆ ಉತ್ತರಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ತೊಟ್ಟಿಲುಗುಂಡಿ ಗ್ರಾಮದಲ್ಲಿ ನಡೆದಿದ್ದ ಭೀಕರ ಕೊಲೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.  ಅಡಿಕೆ ತೋಟ ಹಾಗೂ ಆಸ್ತಿ ಭಾಗ ಮಾಡುವ ವಿಚಾರವಾಗಿ ಸಹೋದರರ ನಡುವೆ  ಜಗಳ ನಡೆದಿತ್ತು. ಹೀಗಾಗಿ ರೊಚ್ಚಿಗೆದ್ದ ಪಾಪಿ ತಮ್ಮಂದಿರು ಸ್ವಂತ ಅಣ್ಣನನ್ನು ರಾಡ್ ಹಾಗೂ ಕೋಲಿನಿಂದ ಹೊಡೆದು ಕೊಂದಿದ್ದಾರೆ. ನವೆಂಬರ್ 5ರಂದು ಸಂಜೆ ಸುಮಾರು 5 ಗಂಟೆ ವೇಳೆ ನಡೆದಿದ್ದ ಜಗಳ  ಕೊಲೆಯಲ್ಲಿ ಅಂತ್ಯವಾಗಿದೆ. ಹೊನ್ನಾವರ ತೊಟ್ಟಿಲಗುಂಡಿಯ ಹನುಮಂತ ನಾಯ್ಕ್ (54) ಕೊಲೆಯಾದ ವ್ಯಕ್ತಿಯಾಗಿದ್ದು, ಸಹೋದರರಾದ ವಿನಾಯಕ, ಚಿದಂಬರ ಹಾಗೂ ಸಂಬಂಧಿ ಮಂಜುನಾಥ ಸೇರಿ ರಾಡ್‌ ಮತ್ತು ಕೋಲಿನಿಂದ ಹಲ್ಲೆ ಮಾಡಿದ್ದರು. ಬಿಟ್ಟು ಬಿಡಿ ಅಂದ್ರೂ ಕೈಯಲ್ಲಿದ್ದ  ರಾಡ್‌ ಹಾಗೂ ಕೋಲಿನಿಂದ ಹಲ್ಲೆ ಮಾಡಿದ್ದರು. ಕೊಲೆ ಮಾಡಿರುವ ಆರೋಪಿಗಳನ್ನು  ಪೊಲೀಸರು  ಈಗಾಗಲೇ ವಶಕ್ಕೆ  ಪಡೆದಿದ್ದಾರೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ   ಪ್ರಕರಣ ದಾಖಲಾಗಿದೆ.

ಗಾಂಜಾ ವ್ಯಸನಿ ಅನೈ​ತಿಕ ವ್ಯವ​ಹಾ​ರ: ಕೊಲೆ​ಯಾದ ಯುವ​ಕನ ಮೃತದೇಹ ಪತ್ತೆ
ಬಂಟ್ವಾಳ: ಗಾಂಜ ವ್ಯಸನಿಯ ಅನೈತಿಕ ವ್ಯವಹಾರಕ್ಕೆ ಸಂಬಂಧಿಸಿದಂತೆ ಇರಾ ಸಮೀ​ಪದ ಗುಡ್ಡ​ವೊಂದ​ರಲ್ಲಿ ಕೊಲೆಯಾದ ಯುವಕ ಸುರಿಬೈಲು ನಿವಾಸಿ ಸಮಾದ್‌ (19) ಮೃತ​ದೇ​ಹ​ ಬುಧ​ವಾರ ಪತ್ತೆ​ಯಾ​ಗಿದೆ. ಮಂಗಳೂರು ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ಕೆ.ಎಸ್‌.ಹೆಗ್ಡೆ ಮೆಡಿಕಲ್‌ ಆಸ್ಪತ್ರೆಯ ಮಹಾಬಲೇಶ್ವರ ಶೆಟ್ಟಿಹಾಗೂ ತಂಡ ಸ್ಥಳದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮನೆಯವರಿಗೆ ಶವವನ್ನು ಹಸ್ತಾಂತರ ಮಾಡಲಾಯಿತು.

ನ.1ರಂದು ಸಮಾ​ದ್‌ ಕೊಲೆ​ಯಾ​ಗಿದೆ ಎಂದು ನಂಬ​ಲಾ​ಗಿದ್ದು, ಕೊಲೆ ಆರೋಪಿ ಸಾಲೆತ್ತೂರು ಸಮೀಪದ ಕಟ್ಟೆಪುನಿ ನಿವಾಸಿ ರಿಕ್ಷಾ ಚಾಲಕ ಅಬುಬಕ್ಕರ್‌ನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಸಮಾದ್‌ ಹಾಗೂ ಅದ್ರಾಮ ಸ್ನೇಹಿತರಾಗಿದ್ದು ಗಾಂಜಾ ವ್ಯಸನಿಗಳಾಗಿದ್ದರು. ಇವರೊಳಗೆ ಅನೈತಿಕ ವ್ಯವಹಾರಗಳು ನಡೆಯುತ್ತಿದ್ದವು. ಈ ವಿಚಾರ ಮನೆಯವರಿಗೆ ಗೊತ್ತಾಗಿ ಬಳಿಕ ಸಮಾದ್‌ನನ್ನು ಉದ್ಯೋಗಕ್ಕಾಗಿ ಬೆಂಗಳೂರಿಗೆ ಕಳುಹಿಸಿದ್ದರು.

ದೇವಸ್ಥಾನ ಆಸ್ತಿ ವಿವಾದ: ಜೆಡಿಎಸ್ ಮುಖಂಡನಿಂದ ಇಬ್ಬರ ಬರ್ಬರ ಕೊಲೆ

ಈ ಮಧ್ಯೆ ಅದ್ರಾಮ ಸಮಾದ್‌ನನ್ನು ಊರಿಗೆ ಬರುವಂತೆ ಒತ್ತಾಯಿಸಿದ್ದು, ನ. 1ರಂದು ಊರಿಗೆ ಬಂದಿದ್ದ ಸಮಾದ್‌ ಹಾಗೂ ಅದ್ರಾಮ ಇಬ್ಬರು ಸೇರಿ ಇರಾ ಸಮೀ​ಪದ ಗುಡ್ಡ​ವೊಂದಕ್ಕೆ ಅದ್ರಾಮನ ರಿಕ್ಷಾದಲ್ಲಿ ಹೋಗಿದ್ದರು. ಆರೋಪಿ ಪ್ರಾಥಮಿಕ ತನಿಖೆಯ ವೇಳೆ ಹೇಳಿದಂತೆ ಇಬ್ಬರು ಗಾಂಜಾ ಸೇವಿಸಿದ ಬಳಿಕ ಈತ ಬೆಂಗಳೂರಿಗೆ ತೆರಳದಂತೆ ಇವರಿಬ್ಬರ ಮಧ್ಯೆ ಜಗಳ ಆಗಿದೆ. ಬಳಿಕ ಇಬ್ಬರೂ ಗುಡ್ಡೆಯಲ್ಲಿ ಮಲಗಿದ್ದರು.

ಆಸ್ತಿ ವಿವಾದ: ಟ್ರ್ಯಾಕ್ಟರ್‌ ಲೋಡ್‌ ಮಣ್ಣು ಸುರಿದು ಇಬ್ಬರು ಮಹಿಳೆಯರ ಹತ್ಯೆಗೆ ಯತ್ನ..?

ಅ ಸಂದರ್ಭದಲ್ಲಿ ಅದ್ರಾಮ ರಿಕ್ಷಾದಲ್ಲಿ ಇರಿಸಿದ್ದ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ ಎಂದು ಹೇಳ​ಲಾ​ಗಿದೆ. ಅಡಿ​ಷ​ನಲ್‌ ಎಸ್‌ಪಿ ಕುಮಾರ್‌ ಚಂದ್ರ, ಗ್ರಾಮಾಂತರ ಪೊಲೀಸ್‌ ಇನ್‌​ಸ್ಪೆ​ಕ್ಟರ್‌ ಟಿ.ಡಿ.​ನಾ​ಗ​ರಾಜ್‌, ಎಸ್‌.​ಐ.​ಹ​ರೀಶ್‌ ಹಾಗೂ ಸಿಬ್ಬಂದಿ ಹಾಜ​ರಿ​ದ್ದ​ರು.

click me!