ಆಸ್ತಿ ವಿಚಾರಕ್ಕೆ ಗಲಾಟೆ: ಹೆತ್ತ ತಾಯಿಯನ್ನೇ ಕಟ್ಟಿಗೆಯಿಂದ ಹೊಡೆದು ಕೊಂದ ಪಾಪಿ!

By Ravi Janekal  |  First Published Aug 4, 2024, 3:29 PM IST

ಆಸ್ತಿ ವಿಚಾರಕ್ಕೆ ಗಲಾಟೆ ಮಾಡಿ ಮಗನೊಬ್ಬ ಹೆತ್ತ ತಾಯಿಯನ್ನೇ ಕಟ್ಟಿಗೆಯಿಂದ ಹೊಡೆದು ಕೊಂದ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ನಡೆದಿದೆ.


ಬೆಳಗಾವಿ (ಆ.4): ಆಸ್ತಿ ವಿಚಾರಕ್ಕೆ ಗಲಾಟೆ ಮಾಡಿ ಮಗನೊಬ್ಬ ಹೆತ್ತ ತಾಯಿಯನ್ನೇ ಕಟ್ಟಿಗೆಯಿಂದ ಹೊಡೆದು ಕೊಂದ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ನಡೆದಿದೆ.

ಮಹಾದೇವಿ ತೋಲಗಿ(70) ಹತ್ಯೆಯಾದ ತಾಯಿ. ಈರಣ್ಣ ತೋಲಗಿ(34)ಹತ್ಯೆಗೈದ ಪಾಪಿ ಮಗ. ಮನೆ ಆಸ್ತಿ ವಿಚಾರವಾಗಿ ಮನಸ್ತಾಪವಾಗಿತ್ತು. ಇದೇ ವಿಚಾರಕ್ಕೆ ವೃದ್ಧ ತಾಯಿಯೊಂದಿಗೆ ದಿನನಿತ್ಯ ಕಂಠಪೂರ್ತಿ ಕುಡಿದು ಬಂದು ಜಗಳ ತೆಗೆಯುತ್ತಿದ್ದ ಮಗ. ಹಲವು ಬಾರಿ ವೃದ್ಧ ತಾಯಿ ಮೇಲೆ ಹಲ್ಲೆಯೂ ನಡೆಸಿದ್ದಾನೆಂಬ ಆರೋಪವಿದೆ.

Tap to resize

Latest Videos

undefined

'ಕಾಂಗ್ರೆಸ್‌ಗೆ ಮಾನ ಮಾರ್ಯಾದೆ ಇದ್ಯಾ?' ಜನಾಂದೋಲ ಕಾರ್ಯಕ್ರಮದಲ್ಲಿ ಶಾಸಕ ಶಿವಲಿಂಗೇಗೌಡ ಎಡವಟ್ಟು!

ನಿನ್ನೆ ಸಹ ತಡರಾತ್ರಿ ಕುಡಿದು ಬಂದು ತಾಯಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದಾನೆ. ಈ ವೇಳೆ ತಾಯಿ ಬುದ್ಧಿ ಮಾತು ಹೇಳಿದ್ದಾಳೆ. ಅದಾಗಲೇ ಕಂಠಪೂರ್ತಿ ಕುಡಿದು ಮತ್ತಿನಲ್ಲಿದ್ದ ಮಗ ಮತ್ತಷ್ಟು ಜಗಳ ತೆಗೆದಿದ್ದಾನೆ ಇದು ವಿಕೋಪಕ್ಕೆ ಹೋಗಿದೆ. ಈ ವೇಳೆ ಮನೆಯಲ್ಲೇ ಇದ್ದ ಅರ್ಧ ಸುಟ್ಟಿದ್ದ ಕಟ್ಟಿಗೆ ಹಿಡಿದು ತಾಯಿ ಮೇಲೆ ಮನಬಂದಂತೆ ತಲೆಗೆ ಹೊಡೆದಿದ್ದಾನೆ. ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ತಾಯಿ ಮೃತಪಟ್ಟಿದ್ದಾಳೆ. 

ದೊಡವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಬೈಲಹೊಂಗಲ ಡಿವೈಎಸ್‌ಪಿ ರವಿ ನಾಯಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

click me!