ಬುದ್ಧಿಮಾತು ಹೇಳಿದ್ದೇ ತಪ್ಪಾಯ್ತು, ಗರ್ಭಿಣಿಯನ್ನು ಬೈಕ್‌ಗೆ ಕಟ್ಟಿ ಎಳೆದೊಯ್ದ ಪತಿ!

Published : Jan 15, 2023, 04:23 PM IST
ಬುದ್ಧಿಮಾತು ಹೇಳಿದ್ದೇ ತಪ್ಪಾಯ್ತು, ಗರ್ಭಿಣಿಯನ್ನು ಬೈಕ್‌ಗೆ ಕಟ್ಟಿ ಎಳೆದೊಯ್ದ ಪತಿ!

ಸಾರಾಂಶ

ಒಂದೆರೆಡು ವರ್ಷ ಲವ್, ಬಳಿಕ ಮದುವೆ. ಇದೀಗ ದಾಂಪತ್ಯ ಜೀವನಕ್ಕೆ 3 ವರ್ಷ. ಪತ್ನಿ 8 ತಿಂಗಳ ಗರ್ಭಿಣಿ. ಆದರೆ ಪತಿಯ ಕುಡಿತದ ಚಟಕ್ಕೆ ಪತ್ನಿ ಪದೇ ಪದೇ ಅಡ್ಡಿಯಾಗಿದ್ದಳು. ಕುಡಿತ ಬಿಡುವಂತೆ ವಾಗ್ವಾದ ನಡೆಸಿದ್ದಳು. ಅದ್ಯಾಕೋ ಏನೋ ಎಣ್ಣೆ ಏಟು, ಪತ್ನಿ ಮಾತು ಎರಡೂ ಪತಿಯನ್ನು ಕೆರಳಿಸಿದೆ. ಗರ್ಭಿಣಿಯನ್ನು ಬೈಕ್‌ಗೆ ಕಟ್ಟಿ ಎಳೆದೊಯ್ದ ಘಟನೆ ನಡೆದಿದೆ.

ಲಖನೌ(ಜ.15): ಮಹಿಳೆ, ಮಕ್ಕಳರ ಮೇಲಿನ ದೌರ್ಜನ್ಯ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಅದರಲ್ಲೂ ಅತ್ಯಂತ ಕ್ರೌರ್ಯ ಮೆರೆಯುತ್ತಿರುವ ಘಟನೆಗಳೇ ಆತಂಕ ಹುಟ್ಟಿಸುತ್ತಿದೆ. ಇದೀಗ ಉತ್ತರ ಪ್ರದೇಶದ ಗುಂಗ್‌ಚಾಯ್ ಗ್ರಾಮದಲ್ಲಿ ಭೀಕರ ಘಟನೆಯೊಂದು ನಡೆದಿದೆ. ಮದ್ಯದ ಚಟ, ಡ್ರಗ್ಸ್ ಅಮಲಿನಲ್ಲೇ ಕಾಲಕಳೆಯುತ್ತಿದ್ದ ಪತಿಯನ್ನು ಸರಿಪಡಿಸಲು ಬುದ್ಧಿಮಾತು ಹೇಳಲು ಆರಂಭಿಸಿದ್ದಾಳೆ. ಆದರೆ ಇದು ಪತಿಯನ್ನು ಮತ್ತಷ್ಟು ಕೆರಳಿಸಿದೆ. ಇದರ ಪರಿಣಾಮ ತನ್ನ 8 ತಿಂಗಳ ಗರ್ಭಿಣಿ ಪತ್ನಿಯನ್ನು ಬೈಕ್‌ಗೆ ಕಟ್ಟಿ ದರ ದರನೇ ಎಳೆದೊಯ್ದಿದ್ದಾನೆ.

ರಾಮ್ ಗೋಪಾಲ್ ಹಾಗೂ ಸುಮನಾ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಮದುವಾಗಿ 3 ವರ್ಷ ಕಳೆದಿದೆ. ಇದೀಗ ಸುಮನಾ 8 ತಿಂಗಳ ಗರ್ಭಿಣಿ. ಆದರೆ ಪತಿ ಪ್ರತಿ ದಿನ ಕುಡಿದು ಮನೆಗೆ ಬರುತ್ತಿದ್ದ. ಇದರಿಂದ ಸಂಸಾರದ ಲಯ ತಪ್ಪಿತ್ತು. ಆರ್ಥಿಕ ಸಂಕಷ್ಟ ಎದುರಾಗಿದೆ. ಇತ್ತ ಗರ್ಭಿಣಿಯಾಗಿರುವ ಸುಮನಾಳಿಗೆ ಮಾನಿಸಕವಾಗಿಯೂ ತೀವ್ರ ನೋವು ತಂದಿತ್ತು. ಕಳೆದ ಕೆಲ ತಿಂಗಳಿನಿಂದ ಪತಿ ರಾಮ್‌ಗೋಪಾಲ್‌ಗೆ ಕುಡಿತ ಹಾಗೂ ಡ್ರಗ್ಸ್ ಚಟ ಬಿಡುವಂತೆ ಮನವಿ ಮಾಡಿದ್ದಾಳೆ.

ಬಸ್‌ಗೆ ಕಾಯುತ್ತಿದ್ದ 90 ವರ್ಷದ ವೃದ್ಧೆಗೆ ಬೈಕ್‌ನಲ್ಲಿ ಲಿಫ್ಟ್, ಅತ್ಯಾಚಾರ ಎಸಗಿ ಪರಾರಿ!

ಜನವರಿ 14ರಂದು ಕಂಠಪೂರ್ತಿ ಕುಡಿದು ಮನೆಗೆ ಮರಳಿದ ಪತಿಯನ್ನು ಸುಮನಾ ತರಾಟೆಗೆ ತೆಗೆದುಕೊಂಡಿದ್ದಾಳೆ. ಇಷ್ಟು ದಿನ ಮನವಿ ಮಾಡುತ್ತಿದ್ದ ಸುಮನಾಳ ತಾಳ್ಮೆ ಕಳೆದುಕೊಂಡಿದ್ದಾಳೆ. ಪತಿ ವಿರುದ್ಧ ಗರಂ ಆಗಿ ವಾಗ್ವಾದ ನಡೆಸಿದ್ದಾಳೆ. ಕುಡಿತದಿಂದ ಮಾನಸಿಕ ಹಾಗೂ ದೈಹಿಕ ಹಿಂಸೆಯಾಗುತ್ತಿದೆ. ಇದರಿಂದ ಹುಟ್ಟುವ ಮಗುವಿನ ಮೇಲೂ ಪರಿಣಾಮ ಬೀರಲಿದೆ. ಹೀಗಾಗಿ ಇಂದಿನಿಂದಲೇ ಕುಡಿತ ನಿಲ್ಲಿಸುವಂತೆ ಸೂಚಿಸಿದ್ದಾಳೆ. ಮೊದಲೇ ಕುಡಿತ ಮತ್ತಿನಲ್ಲಿದ್ದ ಪತಿ ರಾಮ್ ಗೋಪಾಲ್ ಯುದ್ದಕ್ಕೆ ನಿಂತಿದ್ದಾನೆ. ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ರೀತಿಯ ಹಲ್ಲೇ ಹಲವು ಬಾರಿ ನಡೆದಿದ್ದ ಕಾರಣ, ಪತ್ನಿ ಎದೆಗಂದದೆ ಪತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ.

ರೊಚ್ಚಿಗೆದ್ದ ರಾಮ್ ಗೋಪಾಲ್ ಪತ್ನಿಗೆ ಹಲ್ಲೆ ಮಾಡಿ, ಬೈಕ್‌ಗೆ ಕಟ್ಟಿದ್ದಾನೆ. ಬಳಿಕ ಎಳೆದೊಯ್ದಿದ್ದಾನೆ. ಸುಮಾನ ಚೀರಾಡುತ್ತಿದ್ದರೆ ಪತಿಯ ಕೋಪ ಮಾತ್ರ ತಣಿದಿಲ್ಲ. 200 ಮೀಟರ್ ಹೆಚ್ಚು ದೂರ ಎಳೆದೊಯ್ಯುತ್ತಿದ್ದಂತೆ ಸುಮನಾ ಸಹೋದರ ಆಗಮಿಸಿ ತಡೆದು ನಿಲ್ಲಿಸಿದ್ದಾನೆ. ಬಳಿಕ ರಾಮ್ ಗೋಪಾಲ್ ಕಪಾಳಕ್ಕೆ ಎರಡು ಬಾರಿ, ತಂಗಿ ಸುಮನಾಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬಾಯ್‌ಫ್ರೆಂಡ್ ಬರ್ತ್‌ಡೇ ಆಚರಿಸಲು ಸ್ವಂತ ಮನೆಯನ್ನೇ ದೋಚಿದ 18ರ ಹುಡುಗಿ

ಇತ್ತ ರಾಮ್ ಗೋಪಾಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಹಲವು ಪ್ರಕರಣಗಳು ರಾಮ್ ಗೋಪಾಲ್ ಮೇಲೆ ದಾಖಲಾಗಿದೆ. ಇತ್ನ ಸುಮನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ನಿಧನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ರಾಮ್ ಗೋಪಾಲ್ ಕುಟುಂಬಸ್ಥರು ಸೊಸೆ ಸುಮನಾ ಪರವಾಗಿ ನಿಂತಿದ್ದಾರೆ. 

ಕುಡಿತದ ದಾಸನಾಗಿರುವ ಪತ್ನಿ ಪೊಲೀಸರ ವಿಚಾರಣೆ ಎದುರಿಸುತ್ತಿದ್ದಾನೆ. ಸುಮನಾ ಸಹೋದರ ನೀಡಿದ ದೂರಿನ ಆಧಾರದಲ್ಲಿ ದೈಹಿಕ ಹಲ್ಲೆ, ಮಾನಸಿಕ ಕಿರುಕುಳ, ಕೊಲೆ ಯತ್ನ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದೆ. ಹೀಗಾಗಿ ರಾಮ್ ಗೋಪಾಲ್ ಜೈಲಿನಿಂದ ಹೊಬರವುದುದು ಸದ್ಯಕ್ಕೆ ಸಾಧ್ಯವಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ