ಮೂರನೇ ಅತ್ಯಾಚಾರ ಪ್ರಕರಣ: ಮತ್ತೆ ಪ್ರಜ್ವಲ್ ನ್ಯಾಯಾಂಗ ಬಂಧನ, ಜುಲೈ 8ರವರೆಗೆ ಪರಪ್ಪನ ಅಗ್ರಹಾರ

By Gowthami K  |  First Published Jun 24, 2024, 4:01 PM IST

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮೂರನೇ ಅತ್ಯಾಚಾರ ಪ್ರಕರಣ ವಿಚಾರಣೆ ನಡೆಸಿದ ಕೋರ್ಟ್  ಜುಲೈ 8ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ  ಆದೇಶ ಹೊರಡಿಸಿದೆ.


ಬೆಂಗಳೂರು (ಜೂ.24): ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣದ ಮೂರನೇ ಕೇಸ್‌ ನಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪೊಲೀಸ್ ಕಸ್ಟಡಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಇಂದು ಮತ್ತೆ ಕೋರ್ಟ್ ಮುಂದೆ ಹಾಜರು ಪಡಿಸಲಾಯಿತು. ವಿಚಾರಣೆ ನಡೆಸಿದ ಕೋರ್ಟ್  ಜುಲೈ 8ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ 42ನೇ ಎಸಿಎಂಎಂ ಕೋರ್ಟ್‍ ಆದೇಶ ಹೊರಡಿಸಿದೆ.

ಮೂರನೇ ಅತ್ಯಾಚಾರ ಪ್ರಕರಣದ ವಿಚಾರಣೆ ಇದಾಗಿದ್ದು, ಈ ಕೇಸ್‌ನಲ್ಲಿ  ಎಸ್‍ಐಟಿ ಅಧಿಕಾರಿಗಳ   5 ದಿನಗಳ ಕಸ್ಟಡಿ ಮುಕ್ತಾಯ ಹಿನ್ನೆಲೆ ಕೋರ್ಟ್ ಗೆ ಹಾಜರುಪಡಿಸಿದರು. ಜಿಲ್ಲಾ ಪಂಚಾಯತ್ ಸದಸ್ಯೆ ನೀಡಿದ ಅತ್ಯಾಚಾರ ಪ್ರಕರಣ ಪ್ರಜ್ವಲ್‌ರ ಮೂರನೇ ಪ್ರಕರಣವಾಗಿದೆ.

Latest Videos

undefined

ಪತ್ನಿ, ಮಗ ಜೈಲು ಭೇಟಿ ವೇಳೆ ದರ್ಶನ್ ಕಣ್ಣೀರ ಧಾರೆ: ಮಗನನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತ ನಟ

ಈಗಾಗಲೇ 2ನೇ ಕೇಸ್‍ನಲ್ಲಿ 14 ದಿನಗಳ ನ್ಯಾಯಾಂಗ ಬಂಧನದಲ್ಲಿ ಪ್ರಜ್ವಲ್ ಇದ್ದಾನೆ. ಈ ಪ್ರಕರಣದಲ್ಲಿ ಜಾಮೀನು ಕೋರಿ ಪ್ರಜ್ವಲ್ ಅರ್ಜಿ ಸಲ್ಲಿಸಿದ್ದು ಜೂನ್ 24ಕ್ಕೆ ಕೋರ್ಟ್ ವಿಚಾರಣೆ ನಡೆಯಲಿದೆ. ಅಂದರೆ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಲ್ಲಿ ನಡೆಯಲಿದೆ. ಜೂನ್  19ರಂದು ಎಸ್‌ಐಟಿ ಮೂರನೇ ಪ್ರಕರಣದಲ್ಲಿ ವಶಕ್ಕೆ ಪಡೆದಿತ್ತು, ಇಂದು ಮೂರನೇ ಪ್ರಕರಣದಲ್ಲಿ ನ್ಯಾಯಾಂಗ ಬಂಧನವಾಗಿದ್ದು, ಈ ಪ್ರಕರಣದಲ್ಲಿ ಜುಲೈ 8ವರೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿರಲಿದ್ದಾರೆ.

ರಾಜಕೀಯ ಲಾಭಕ್ಕೆ ದರ್ಶನ್‌ರನ್ನು ಬಳಸಿಕೊಂಡ ಸುಮಲತಾ ಇವಾಗ ಮೌನವೇಕೆ?

ಹಾಸನದಲ್ಲಿ ಸ್ಥಳ ಮಹಜರು ಹೇಗಿತ್ತು:
ಅತ್ಯಾಚಾರ ಆರೋಪದ ಹಿನ್ನೆಲೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು  ಎಸ್‌ಐಟಿ ಅಧಿಕಾರಿಗಳು ವಿಚಾರಣೆಗಾಗಿ ಹಾಸನ ನಗರದ ಸಂಸದರ ನಿವಾಸಕ್ಕೆ ಕಳೆದ ಶುಕ್ರವಾರ ಅಂದರೆ ಜೂನ್ 21ರಂದು ಬೆಂಗಳೂರಿನಿಂದ ಕರೆತಂದು ಸ್ಥಳ ಮಹಜರು ನಡೆಸಿದ್ದರು.   ಲೋಕಸಭಾ ಸದಸ್ಯರಾಗಿದ್ದಾಗ ಸಂಸದರ ನಿವಾಸದಲ್ಲಿ ತನ್ನ ಮೇಲೆ ಅತ್ಯಾಚಾರ ನಡೆದಿತ್ತು ಎಂದು ಸಂತ್ರಸ್ಥೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ನೀಡಿದ ದೂರಿನ ಆಧಾರದ ಮೇರೆಗೆ ಕರೆತಂದು ಸುಮಾರು 4 ಗಂಟೆಗಳ ಕಾಲ ಸ್ಥಳ ಪರಿಶೀಲನೆ ಮಾಡಿದ್ದರು. ಕಳೆದ ಮೇ 4 ರಂದು ಸಂತ್ರಸ್ತ ಮಹಿಳೆ ಕರೆತಂದು ಎಸ್‌ಐಟಿ ಇದೇ ಸ್ಥಳದಲ್ಲಿ ಮಹಜರ್ ನಡೆಸಿತ್ತು. ಇದೇ ಸಂತ್ರಸ್ತೆ ಅಪಹರಣದಲ್ಲಿ ಪ್ರಜ್ವಲ್ ಅವರ ತಂದೆ ಮಾಜಿ ಸಚಿವ ರೇವಣ್ಣ ಸಹ ಜೈಲು ಸೇರಿ ಹೊರಬಂದಿದ್ದರೆ, ಅವರ ತಾಯಿ ಭವಾನಿ ರೇವಣ್ಣ ಅವರಿಗೆ ಎಸ್‌ಐಟಿ ತನಿಖೆ ಎದುರಾಗಿದೆ.

click me!