ಬೊಲೆರೋ ವಾಹನದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ, ಜಾನುವಾರು ಸಮೇತ ಆರೋಪಿಗಳನ್ನು ಬಂಧಿಸಿದ ಘಟನೆ ಹೊನ್ನಾವರ ಪಟ್ಟಣದ ಪ್ರತಿಭೋದಯ ಹಾಲ್ ಮುಂಭಾಗದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ.
ಕಾರವಾರ, ಉತ್ತರಕನ್ನಡ (ಜ.27): ಬೊಲೆರೋ ವಾಹನದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ, ಜಾನುವಾರು ಸಮೇತ ಆರೋಪಿಗಳನ್ನು ಬಂಧಿಸಿದ ಘಟನೆ ಹೊನ್ನಾವರ ಪಟ್ಟಣದ ಪ್ರತಿಭೋದಯ ಹಾಲ್ ಮುಂಭಾಗದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ.
ರೆಹಮಾನ್ ಸಾಬ್, ರಾಜೇಸಾಬ್ ರಿತ್ತಿ, ನವೀದ್ ರಾಜೇಸಾಬ್ ರಿತ್ತಿ, ಯಲ್ಲಪ್ಪ ಬಂಕಪ್ಪ ಶಿವಣ್ಣನವರ ಬಂಧಿತರು. ಆರೋಪಿಗಳೆಲ್ಲರೂ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬಿಂಗಾಪುರ ಬೆಳಗಾಲಪೇಟೆ ನಿವಾಸಿಗಳಾಗಿದ್ದಾರೆ. ಆರೋಪಿಗಳಿಂದ 70,000 ರೂ.ಮೌಲ್ಯದ 2 ಎತ್ತು ಹಾಗೂ 2 ಹೋರಿ ವಶಕ್ಕೆ ಪಡೆದಿರುವ ಪೊಲೀಸರು. ಜಾನುವಾರುಗಳನ್ನು ಎಲ್ಲಿಂದ ತರಲಾಗುತ್ತಿತ್ತು ಎಂಬ ಬಗ್ಗೆ ಮಾಹಿತಿ ತಿಳಿಯಲು ಆರೋಪಿಗಳನ್ನು ವಿಚಾರಣೆ ಮುಂದುವರಿಸಿದ ಪೊಲೀಸರು.
undefined
ಅಕ್ರಮ ಗೋವು ಸಾಗಾಟ; ಶ್ರೀರಾಮಸೇನೆ ಕಾರ್ಯಕರ್ತರಿಂದ 11 ಗೋವುಗಳ ರಕ್ಷಣೆ
ಮಾಂಸಕ್ಕಾಗಿ ವಧೆ ಮಾಡುವ ಉದ್ದೇಶದಿಂದ ಬೊಲೆರೋ ವಾಹನದಲ್ಲಿ ಅತಿ ಹಿಂಸಾತ್ಮಕವಾಗಿ ತುಂಬಿ ಸಾಗಿಸಲಾಗುತ್ತಿತ್ತು. ಜಾನುವಾರುಗಳಿಗೆ ಯಾವುದೇ ಸೂಕ್ತ ದಾಖಲೆ ಇಲ್ಲ. ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ಬಂದಿದ್ದ ಆರೋಪಿಗಳು. ಗೋಹತ್ಯೆ ನಿಷೇಧವಿದ್ದರೂ ರಾಜ್ಯಾದ್ಯಂತ ಅವ್ಯಾಹತವಾಗಿ ಗೋ ಕಳ್ಳಸಾಗಣೆ ನಡೆಯುತ್ತಿವೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸದಿರುವುದು ಸಹ ಅಕ್ರಮ ಗೋ ಸಾಗಾಟಕ್ಕೆ ಪ್ರೇರಣೆ ನೀಡಿದೆ.
'ಅನುಬ್ರತ್‌ನನ್ನು ರಿಲೀಸ್ ಮಾಡಿ...' ಸಿಬಿಐ ನ್ಯಾಯಮೂರ್ತಿಗೆ ಬಂತು ಬೆದರಿಕೆ ಪತ್ರ!