Chargesheet against Murughamutt Seer: ಮುರುಘಾ ಮಠದ ಶ್ರೀ ಮೇಲೆ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದು ಮಕ್ಕಳ ಮೇಲೆ ನಿರಂತರ ಅತ್ಯಾಚಾರ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. 10ಕ್ಕೂ ಹೆಚ್ಚು ಮಕ್ಕಳ ಮೇಲೆ ಅತ್ಯಾಚಾರ ಮಾಡಿರುವುದಾಗಿ ಪೊಲೀಸರು ಉಲ್ಲೇಖಿಸಿದ್ದಾರೆ.
ಚಿತ್ರದುರ್ಗ: ಮುರುಘಾ ಮಠದ ಶ್ರೀಗಳ ವಿರುದ್ಧದ ಪೋಕ್ಸೊ ಪ್ರಕರಣ ತನಿಖೆ ನಡೆಸುತ್ತಿದ್ದ ಪೊಲೀಸರ ತಂಡ ಸ್ವಾಮೀಜಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಚಾರ್ಜ್‌ಶೀಟ್‌ನಲ್ಲಿ 10ಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಗಂಭೀರವಾಗಿ ಆರೋಪಿಸಲಾಗಿದೆ. ವಿರೋಧಿಸಿದ ಮಕ್ಕಳನ್ನು ವಾರ್ಡನ್ ಬೆದರಿಸುತ್ತಿದ್ದರು. ಪ್ರತಿನಿತ್ಯ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಲಾಗುತ್ತಿತ್ತು, ಎಂದು ಚಾರ್ಚ್ ಶೀಟಿನಲ್ಲಿ ಉಲ್ಲೇಖಿಸಲಾಗಿದೆ. ಸಂತ್ರಸ್ತರ ಹೇಳಿಕೆ ಆಧರಿಸಿ ಮಕ್ಕಳ ವಿಚಾರಣೆ ನಡೆಸಲಾಗಿತ್ತು. ಇದರಲ್ಲಿ ಕಳವಳಕಾರಿ ಮಾಹಿತಿ ಹೊರಬಂದಿದೆ. ಕೇವಲ ಮೂವರು ಮಕ್ಕಳಷ್ಟೇ ಅಲ್ಲ 10ಕ್ಕೂ ಹೆಚ್ಚು ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳಲಾಗಿದೆ, ಎಂದು ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.
ಈ ಬಗ್ಗೆ ಒಡನಾಡಿ ಸಂಸ್ಥೆಯ ಮುಖ್ಯಸ್ಥ ಪರಶುರಾಮ್ ಏಷಿಯಾನೆಟ್ ನ್ಯೂಸ್ ಜತೆಗೆ ಮಾತನಾಡಿದ್ದು, ಮುರುಘಾ ಶರಣರ ವಿರುದ್ಧ ಹರಿಹಾಯ್ದಿದ್ದಾರೆ. ಮುರುಘಾ ಶರಣರಿಗೆ ಗಲ್ಲು ಶಿಕ್ಷೆ ಆಗಬೇಕು. ಮುರುಘೇಶ ಗದ್ದುಗೆ ಮೇಲೆ ನಂಬಿಕೆ ಇಟ್ಟಿದ್ದ ಜನರಿಗೆ ಹಾಗೂ ಮಕ್ಕಳಿಗೆ ಪೊಲೀಸರು ಸಲ್ಲಿಸಿರುವ ಚಾರ್ಜ್‌ಶೀಟಿನಿಂದ ಸಾಂತ್ವಾನ ಸಿಕ್ಕಂತಾಗಿದೆ. ಎಷ್ಟೇ ಒತ್ತಡಗಳು ಇದ್ದಾಗ್ಯೂ ಪೊಲೀಸರಿಂದ ಒಳ್ಳೆಯ ತನಿಖೆ ನಡೆದಿದೆ. ಪೊಲೀಸರು ಇದಕ್ಕೆ ಅಭಿನಂದನಾರ್ಹರು. ಆದಾಗ್ಯೂ ಇನ್ನೂ ವಿಸ್ತಾರವಾದ ಕೆಲಸ ಮಾಡಬೇಕಾಗಿತ್ತು. ಮಕ್ಕಳ ಮೇಲೆ ದೀರ್ಘಾವಧಿಯಲ್ಲಿ ಆಗಿರುವ ಪರಿಣಾಮಗಳನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡುವಲ್ಲಿ ಎಡವಿದ್ದಾರೆ. ಮಕ್ಕಳಿಗಾದ ನೋವನ್ನು ನೇರವಾಗಿ ನ್ಯಾಯಾಧೀಶರ ಮುಂದೆ ಹೇಳಿದ್ದಾರೆ. ನಾನು ಅವರಿಗೆ ಸಹಾಯಕನಾಗಿ ನಿಂತಿದ್ದೇನೆ. ಎಷ್ಟೋ ಮಕ್ಕಳು ಮಾನವ ಸಾಗಾಣಿಕೆಗೂ ಒಳಗಾಗಿವೆ. ಅದನ್ನೂ ಪತ್ತೆ ಹಚ್ಚಬೇಕು. ಈಗಾಗಲೇ ಕೊಲೆಯಾದ ಮಗು, ಮಠದಿಂದ ಸಾಗಿಸ್ಪಟ್ಟ ಮಗುವಿನ ಕಥೆ ಏನು ಎಂದು ದೂರು ನೀಡಲಾಗಿದೆ," ಎಂದು ಅವರು ಹೇಳಿದ್ದಾರೆ.
undefined
ಇದನ್ನೂ ಓದಿ: ಬಾಲ ನ್ಯಾಯ ಕಾಯ್ದೆ ಉಲ್ಲಂಘನೆ: ಮುರುಘಾಶ್ರೀ ವಿರುದ್ದ ಮತ್ತೊಂದು ಕೇಸ್
ಮುಂದುವರೆದ ಪರಶುರಾಮ್, "ಹಾಗಾದ್ರೆ ಕೊಲೆ ಮಾಡಿದವರು ಯಾರು. ಕೊಲೆಯಾದ ಮಗು ಗೋಡೆಗಳ ಜೊತೆ ಮಾತನಾಡುತ್ತಿತ್ತಂತೆ. ಅಪ್ಪಾಜಿ ಬಾ ಮಲ್ಕೊ. ಅಪ್ಪಾಜಿ ಏನಿದು ಗೋಡೆ. ಅಪ್ಪಾಜಿ ಏನಿದು ಬೇರೆಯವರನ್ನ ಕಟ್ಟುಕೊಂಡುಬಿಟ್ಟಲ್ಲ. ಹೀಗಂತ ಮಗು ಕೂಗುತ್ತಿತ್ತೆಂತೆ, ಹಾಗಾಗಿ ಬೇರೆಡೆ ಸ್ಥಳಾಂತರ ಮಾಡಿದ್ದಾರೆ. ಇದೆಲ್ಲವನ್ನು ಸರ್ಕಾರಿ ಅಧಿಕಾರಿಗಳು ಪರಿಶೀಲನೆ ಮಾಡಿದ್ರೆ ಈ ರೀತಿ ದುರ್ಘಟನೆಗಳು ಸಂಭವಿಸುತ್ತಿರಲಿಲ್ಲ. ಸಾಮಾನ್ಯ ಹೆಣ್ಣು ಮಗುವಿನ ತಂದೆಯಾಗಿ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು. ನಮ್ಮ ಹಣದಲ್ಲಿ ಅವರಿಗೆ ಮುಂದೆ ಊಟ ಹಾಕುವ ಕೆಲಸ ಬೇಡ," ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮುರುಘಾ ರೇಪ್ ಕೇಸ್: ನಾಲ್ಕು ಸಂತ್ರಸ್ತ ಬಾಲಕಿಯರ 161 ಹೇಳಿಕೆ ದಾಖಲಿಸಿದ ಪೊಲೀಸರು
ಚಾರ್ಜ್‌ಶೀಟ್‌ನ ಮುಖ್ಯಾಂಶ:
1. ಶ್ರೀಗಳ ಬಳಿಗೆ ಮಕ್ಕಳನ್ನು ವಾರ್ಡನ್ ರಶ್ಮಿ ಕಳುಹಿಸುತ್ತಿದ್ದಳು.
2. ಮತ್ತು ಬರುವ ಔಷಧ ನೀಡಿ ಶ್ರೀ ಲೈಂಗಿಕ ಕಿರುಕುಳ ನೀಡುತ್ತಿದ್ದರು.
3. ಒಪ್ಪದ ಮಕ್ಕಳಿಗೆ ವಾರ್ಡನ್ ರಶ್ಮಿ ಬೆದರಿಕೆ ಹಾಕುತ್ತಿದ್ದಳು.
4. ಒಟ್ಟೂ 694 ಪುಟಗಳ ದೋಷಾರೋಪ ಪಟ್ಟಿ.
5. ಮುರುಘಾ ಶ್ರೀ ಮೊದಲ ಆರೋಪಿ, ವಾರ್ಡನ್ ರಶ್ಮಿ ಎರಡನೇ ಆರೋಪಿ.
6. ಕಚೇರಿ, ಬೆಡ್‌ರೂಂ, ಬಾತ್ ರೂಂನಲ್ಲಿ ಲೈಂಗಿಕ ದೌರ್ಜನ್ಯ.
7. 10ಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ,
8. ಪೋಕ್ಸೊ, ಧಾರ್ಮಿಕ ಕೇಂದ್ರ ದುರುಪಯೋಗ, ಅಟ್ರಾಸಿಟಿಯಡಿ ದೋಷಾರೋಪ.
9. 347 ಪುಟಗಳ ಎರಡು ಸೆಟ್ ಚಾರ್ಜ್‌ಶೀಟ್.
10. ಒಪ್ಪದ ಮಕ್ಕಳಿಗೆ ಬೆದರಿಕೆ, ಮಠದಿಂದ ಸ್ಥಳಾಂತರ