ಕಳ್ಳರು ಕದ್ದೊಯ್ದ ಹಣದ ಪೆಟ್ಟಿಗೆ ಕ್ಷಣಾರ್ಧದಲ್ಲಿ ಪತ್ತೆ ಮಾಡಿದ ಪೊಲೀಸ್‌ ಶ್ವಾನ ರೂಬಿ

Published : May 30, 2023, 03:55 PM ISTUpdated : May 30, 2023, 03:58 PM IST
ಕಳ್ಳರು ಕದ್ದೊಯ್ದ ಹಣದ ಪೆಟ್ಟಿಗೆ ಕ್ಷಣಾರ್ಧದಲ್ಲಿ ಪತ್ತೆ ಮಾಡಿದ ಪೊಲೀಸ್‌ ಶ್ವಾನ ರೂಬಿ

ಸಾರಾಂಶ

ವಿಜಯಪುರದ ನಾಲ್ಕು ಕಾರು ಶೋರೂಂಗಳಲ್ಲಿ ಒಂದೇ ದಿನ ಕಳ್ಳರು ಕದ್ದೊಯ್ದಿದ್ದ ಹಣದ ಪೆಟ್ಟಿಗೆಗಳನ್ನು ಕೆಲವೇ ಗಂಟೆಗಳಲ್ಲಿ ಪೊಲೀಸರ ನಾಯಿ ರೂಬಿ ಪತ್ತೆಹಚ್ಚಿದೆ.

ವರದಿ- ಷಡಕ್ಷರಿ ಕಂಪೂನವರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್ 

ವಿಜಯಪುರ (ಮೇ 30) : ವಿಜಯಪುರದಲ್ಲಿ ಕಾರ್‌ ಶೋ ರೂಂಗಳಲ್ಲಿ ಸರಣಿ ಕಳ್ಳತನವಾಗಿದೆ. ನಗರದ ಹೊರವಲಯದಲ್ಲಿರುವ ವಿಜಯಪುರ ಬೆಂಗಳೂರು ಹೈವೇ ಪಕ್ಕದಲ್ಲಿರುವ 4 ಕಾರ್‌ ಶೋರೂಂಗಳಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಈ ಸರಣಿ ಕಳ್ಳರ ಬಗ್ಗೆ ಪೊಲೀಸರು ಕೈಗೊಂಡಿದ್ದ ತನಿಖೆ ವೇಳೆ ಅಚ್ಚರಿಯ ಘಟನೆಯೊಂದು ನಡೆದಿದ್ದು, ಪೊಲೀಸ್‌ ಶ್ವಾನವೊಂದು ಕೆಲವೇ ಗಂಟೆಗಳಲ್ಲಿ ಶೋರೋಂ ನಿಂದ ಕಳ್ಳತನವಾಗಿದ್ದ ಹಣದ ಪೆಟ್ಟಿಗೆಯನ್ನ ಪತ್ತೆ ಹಚ್ಚಿದೆ.

ಹಣದ ಪೆಟ್ಟಿಗೆ ಪತ್ತೆ ಹಚ್ಚಿದ ಪೊಲೀಸ್‌ ಡಾಗ್: 
ವಿಜಯಪುರ ಶ್ವಾನ ದಳದಲ್ಲಿರೋ ರೂಬಿ ಶೋರುಂನಿಂದ ಕಳ್ಳತನವಾಗಿದ್ದ ಹಣದ ಪೆಟ್ಟಿಗೆ (ಬೀರೂ) ಪತ್ತೆ ಹಚ್ಚಿದೆ. ನಿನ್ನೆ ತಡರಾತ್ರಿ ವಿಜಯಪುರ ನಗರದ ಹೊರಭಾಗದಲ್ಲಿರುವ 4 ಕಾರ್‌ ಶೋರೂಂ ಗಳಲ್ಲಿ ಕಳ್ಳರು ಕೈ ಚಳಕ ತೋರಿಸಿದ್ದರು. ಈ ಪೈಕಿ ಒಂದು ಶೋರೂಂ ನಿಂದ ಹಣದ ಬೀರೂವನ್ನು ಸಹ ಕಳ್ಳರು ಹೊತ್ತೊಯ್ದಿದ್ದರು. ಬಳಿಕ ಕಬ್ಬಿಣದ ಬಿರುವನ್ನ ಶೋರೂಂ ನಿಂದ 1 ಕಿ.ಮೀ ದೂರದಲ್ಲಿ ಬಿಸಾಕಿದ್ದರು. ಕಳ್ಳತನವಾದ ಹಿನ್ನೆಲೆಯಲ್ಲಿ ರೂಬಿಯನ್ನ ಪೊಲೀಸರು ಶೋರೂಮ್‌ಗೆ ಕರೆತಂದಿದ್ದರು. ಈ ವೇಳೆ ಕಳ್ಳರ ವಾಸನೆ ಗ್ರಹಿಸಿದ ರೂಬಿ ಟೋಯೋಟಾ ಮಳಿಗೆಯಿಂದ ಕಳ್ಳತನವಾಗಿ 1 ಕಿ.ಮೀ ದೂರದಲ್ಲಿ ಬಿದ್ದಿದ್ದ ಬೀರೂ ಪತ್ತೆ ಮಾಡಿದೆ. ದುರಾದೃಷ್ಟವಶಾತ್‌ ಬಿರೂ ಒಡೆದಿದ್ದ ಕಳ್ಳರು, ಬಿರೂ ಒಳಗಿದ್ದ ಹಣವನ್ನ ದೋಚಿಕೊಂಡು ಹೋಗಿದ್ದಾರೆ.

Mysuru Accident: ಸಾವಿನ ದವಡೆಯಲ್ಲಿದ್ದರೂ ಅಪ್ಪನನ್ನು ಕೇಳುತ್ತಿರುವ ಮಗು, ಅನಾಥನಾದ ಅರಿವೇ ಇಲ್ಲ

ಪೊಲೀಸ್‌ ಇಲಾಖೆಯ ಚಾಣಾಕ್ಷ ಶ್ವಾನ ರೂಬಿ 007: 
ಜಿಲ್ಲಾ ಪೊಲೀಸ್‌ ಶ್ವಾನ ದಳದಲ್ಲಿರುವ ರೂಬಿ ಈವರೆಗು ಹಲವು ಪ್ರಕರಣಗಳನ್ನ ಭೇದಿಸಿದೆ. 2020ರಲ್ಲಿ ನಿಡಗುಂದಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬನ ಮರ್ಡರ್‌ ಆಗಿತ್ತು. ರಸ್ತೆ ಬದಿಗೆ ವ್ಯಕ್ತಿಯನ್ನ ಹತ್ಯೆ ಮಾಡಿ ಬೀಸಾಕಲಾಗಿತ್ತು. ಈ ಪ್ರಕರಣ ನಿಡಗುಂದಿ ಪೊಲೀಸರಿಗೆ ಕ್ಲಿಷ್ಟಕರವಾಗಿತ್ತು. ಆಗ ಇದೆ ರೂಬಿ ಡಾಗ್‌ ಆರೋಪಿಯನ್ನ ಪತ್ತೆ ಹಚ್ಚಿ, ಪ್ರಕರಣವನ್ನ ಬಯಲಿಗೆಳೆದಿತ್ತು. ಇನ್ನು 2021ರಲ್ಲಿ ಇಂಡಿ ತಾಲೂಕಿನ ಅವರಸಂಗ ಗ್ರಾಮದಲ್ಲಿ ನಡೆದಿದ್ದ ಹತ್ಯೆಯನ್ನ ಭೇದಿಸಿದ್ದೆ ಇದೆ ರೂಬಿ ಪೊಲೀಸ್‌ ಡಾಗ್.‌ ಅವರಸಂಗ ಗ್ರಾಮದಲ್ಲಿ ನಡೆದಿದ್ದ ಅದೊಂದು ಕೊಲೆ ಪ್ರಕರಣ ಪೊಲೀಸರಿಗೆ ಸವಾಲಾಗಿತ್ತು. ಆಗ ಪೀಲ್ಡಿಗಿಳಿದ ರೂಬಿ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನ ಪತ್ತೆ ಹಚ್ಚಲು ಸಹಕಾರಿಯಾಗಿತ್ತು. ಇದಷ್ಟೆ ಅಲ್ಲದೆ ಹಲವು ಕಳ್ಳತನ ಪ್ರಕರಣಗಳನ್ನ ಭೇದಿಸಿದ ಕೀರ್ತಿ ಇದೆ ರೂಬಿಗಿದೆ.

ಮದುವೆಯಾದ್ರೆ ನೀವಿಬ್ರೂ ಉಳಿಯಲ್ಲ, ಹೆಂಗ್‌ ಮದ್ವೆ ಆಗ್ತೀರೋ ಆಗ್ರಿ

ಬೆಂಗಳೂರಿನ ಆಡುಗೋಡಿಯಲ್ಲಿ ರೂಬಿಗೆ ಟ್ರೇನಿಂಗ್:
‌2019ರಲ್ಲಿ ರೂಬಿಯನ್ನ ಚಿತ್ರದುರ್ಗದ ಡಾಗ್‌ ಬ್ರೀಡರ್‌ ಬಳಿ 20 ಸಾವಿರ ರೂಪಾಯಿಗೆ ಖರೀದಿ ಮಾಡಲಾಗಿತ್ತು. ಅಲ್ಲಿಂದ 6 ತಿಂಗಳ ಕಾಲ ಬೆಂಗಳೂರಿನ ಆಡಗೋಡಿ ಶ್ವಾನ ದಳ ತರಬೇತಿ ಕೇಂದ್ರದಲ್ಲಿ ರೂಬಿ ಟ್ರೇನಿಂಗ್‌ ಪಡೆದುಕೊಂಡಿದೆ. ಬಳಿಕ ವಿಜಯಪುರ ಜಿಲ್ಲಾ ಶ್ವಾನದಳಕ್ಕೆ ರೂಬಿ ಸೇರ್ಪಡೆಯಾಗಿದೆ. ಈ ಚಾನಾಕ್ಷ ರೂಬಿಯನ್ನ ನೋಡಿಕೊಳ್ಳೊದು ವಿಜಯಪುರದ ಮೀಸಲು ಪಡೆಯ ಇಬ್ಬರು ಪೊಲೀಸ್‌ ಪೇದೆಗಳು. ರೂಬಿ ನಿತ್ಯದ ದಿನಚರಿಯನ್ನ ರಾಜಕುಮಾರ್‌ ಮಾಳೆದ ಹಾಗೂ ಚೇತನ ಕರಡಿ ನೋಡಿಕೊಳ್ತಾರೆ. ರೂಬಿಗೆ ಏನು ಬೇಕು? ಏನು ಬೇಡು ಅನ್ನೋದನ್ನ ಇವರೆ ನೋಡಿಕೊಳ್ತಾರೆ. ಇನ್ನು ರೂಬಿಯು ಸಹ ರಾಜಕುಮಾರ್‌ ಹಾಗೂ ಚೇತನ್‌ ರನ್ನ ತುಂಬಾ ಹಚ್ಚಿಕೊಂಡಿದೆ. ರೂಬಿ ಕುರಿತಾಗಿ ಪಾಲಕರಾದ ರಾಜ್‌ ಕುಮಾರ್‌, ಚೇತನ ಹೆಮ್ಮೆಯ ಮಾತುಗಳನ್ನಾಡ್ತಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!