Delhi Murder: 13ನೇ ವಯಸ್ಸಿಗೆ ಲವ್, 16ನೇ ವಯಸ್ಸಿಗೆ ಮರ್ಡರ್!

By Shobha MC  |  First Published May 30, 2023, 2:38 PM IST

ಇನ್ನೂ ವಯಸ್ಸು 16. ಜೀವನದ ಆರಂಭವಷ್ಟೇ. ಹದಿವಯಸ್ಸಿನ ದುಡುಕಿನ ನಿರ್ಧಾರವೋ ಏನೋ, ಜೀವನದಲ್ಲಿ ಎಲ್ಲವೂ ಮುಗಿಸಿ, ಹತ್ತಾರು ಮಂದಿ ಮುಂದೆಯೇ ಹತ್ಯೆಯಾಗಿದ್ದಾಳೆ. 16ರ ಹರೆಯದ ಸಾಕ್ಷಿಯನ್ನು 21 ಬಾರಿ‌ ಇರಿದು ಕೊಂದ ಸಾಹಿಲ್ ‌ಕ್ರೌರ್ಯದ ಹಿಂದಿದೆ ಲವ್, ಸೆಕ್ಸ್, ದೋಖಾ ಕಥೆ! 


ಎದೆ ನಡುಗಿಸುವ ದೆಹಲಿ ಮರ್ಡರ್ ಹಿಂದೆ ಒಂದು ರೋಚಕ‌‌ ಪ್ರೇಮ ಕಥೆ ಇದೆ. ಹದಿಹರೆಯದ ಮಕ್ಕಳು ದಾರಿ ತಪ್ಪುತ್ತಿರುವುದೇ ಪ್ರೀತಿ ‌ಪ್ರೇಮದ ಹುಚ್ಚಾಟದಲ್ಲಿ. 
ಪ್ರೀತಿ ಪ್ರೇಮದ ಹುಚ್ಚಿಗೆ ಬಿದ್ದವರಲ್ಲಿ ರಾಕ್ಷಸಿ ಮನಸ್ಥಿತಿಯೂ ಇದ್ದೀತು ಅನ್ನೋದಕ್ಕೆ ಸಾಹಿಲ್ ಮಾಡಿದ ಬರ್ಬರ ಕೊಲೆಯೇ ಸಾಕ್ಷಿ.

20 ವರ್ಷದ ಸಾಹಿಲ್, 16 ವರ್ಷದ ಸಾಕ್ಷಿ ನಡುವೆ 2021ರಿಂದ ಲವ್ ಅಂತೆ. ಅಂದ್ರೆ 14 ವರ್ಷದ ಸಾಕ್ಷಿ, 18 ವರ್ಷದ ಸಾಹಿಲ್ ನಡುವೆ ಪ್ರೀತಿ (Love)ಹುಟ್ಟಿಕೊಂಡಿತ್ತು. ಇವರಿಬ್ಬರ ನಡುವೆ ಪ್ರೀತಿ ಚಿಗುರುವ ಮುಂಚೆಯೇ ಇಬ್ಬರಿಗೂ ಮತ್ತೊಬ್ಬರೊಂದಿಗೆ ಆಗಲೇ ಲವ್ ಆಗಿತ್ತಂತೆ! ಅದು ಇಬ್ಬರಿಗೂ‌‌‌ ಗೊತ್ತಿತ್ತು ಕೂಡ. ಕಳೆದ 15 ದಿನಗಳ ಹಿಂದೆ ಸಾಕ್ಷಿ, ತನ್ನ ಹಳೆಯ‌ ಗೆಳೆಯ ಪ್ರವೀಣ್‌ ಜತೆ ಮತ್ತೆ ‌ಲವ್ವಿಡವ್ವಿ ಶುರು ಹಚ್ಕೊಂಡಿದ್ದಳಂತೆ. ಇದೇ ವಿಚಾರಕ್ಕೆ ಸಾಹಿಲ್,‌ ಸಾಕ್ಷಿ ನಡುವೆ ಜಗಳ‌, ಕಿತ್ತಾಟ ನಡೆದಿತ್ತು. ಸಾಕ್ಷಿ ತನ್ನ ಕೈ ಮೇಲೆ‌ ಪ್ರವೀಣ್ ಹೆಸರು ‌ಟ್ಯಾಟೂ ಹಾಕಿಸಿಕೊಂಡಿದ್ದು‌, ಸಾಹಿಲ್ ಇನ್ನಷ್ಟು ‌ಕೆರಳುವಂತೆ‌ ಮಾಡಿತ್ತು.   ಸಾಕ್ಷಿಯೊಂದಿಗೆ ಸಾಹಿಲ್ ಶರಂಪರ‌ ಜಗಳವಾಡಿದ್ದ. ಕೊಲೆ‌ ಮಾಡುವ ಹಿಂದಿನ ದಿನವೂ ಸಾಕ್ಷಿಗೆ ‌ಕರೆ‌ ಮಾಡಿ ಕೊಲ್ಲುವ ಬೆದರಿಕೆಯೊಡ್ಡಿದ್ದನಂತೆ.

20 ಬಾರಿ ಚಾಕುವಿನಿಂದ ಇರಿದು ಗೆಳತಿ ಕೊಂದ ಆರೋಪಿ ಸಾಹಿಲ್ ಅರೆಸ್ಟ್, ಭೀಕರ ವಿಡಿಯೋ ವೈರಲ್!
 
ಮಾರನೇ ದಿನ ಭೇಟಿಗೆ ಬಂದ ಸಾಕ್ಷಿಯನ್ನು ಮಾತಿಗೆ ಮುಂಚೆಯೇ ಸಾಹಿಲ್ ಚಾಕುವಿನಿಂದ ಚುಚ್ಚ‌ ತೊಡಗಿದ್ದ. ಸಾಕ್ಷಿ ಪರಿಪರಿಯಾಗಿ ಬೇಡಿಕೊಂಡರೂ ಕ್ರೂರಿ‌ ಸಾಹಿಲ್ ಮನಸ್ಸು ಕರಗಲಿಲ್ಲ. ಯಾವುದೇ ‌ಪರಿವೆಯೇ ಇಲ್ಲದಂತೆ, ಭಯವೂ ಇಲ್ಲದೇ ಸಾಕ್ಷಿಯನ್ನು ‌ಮನಸೋ ‌ಇಚ್ಛೆ ಕೊಚ್ಚ‌ ತೊಡಗಿದ್ದ. ಆತನ ರಕ್ಕಸ‌ ಮನಸ್ಥಿತಿ ಎಷ್ಟಿತ್ತೆಂದರೆ, ಸಾಕ್ಷಿಯನ್ನು ‌21 ಬಾರಿ ಚಾಕುವಿಂದ‌ ಇರಿದಿದ್ದ. ಇಷ್ಟಕ್ಕೂ ಸಮಾಧಾನಗೊಳ್ಳದ , ಆವೇಶಭರಿತ ರಕ್ಕಸ ಸಾಹಿಲ್ ‌ಪಕ್ಕದಲ್ಲೇ ಇದ್ದ ಸಿಮೆಂಟ್ ಬ್ಲಾಕ್‌‌ನಿಂದ‌ ಸಾಕ್ಷಿಯನ್ನು ‌ನಿರ್ದಯವಾಗಿ ಜಜ್ಜಿದ್ದ. ಕ್ಷಣಾರ್ಧದಲ್ಲೇ ಜೀವ‌ಬಿಟ್ಟರೂ, ಸಾಹಿಲ್ ಬಿಡಲಿಲ್ಲ. ಆತನೊಳಗಿನ ಮೃಗೀಯ ಮನಸ್ಸಿಗೆ ಸಾಕು ಎನಿಸಿರಲಿಲ್ಲ. ಆಕೆಯ ದೇಹದ ಮೇಲೆ 34ಕ್ಕೂ ಹೆಚ್ಚು ಮಾರಣಾಂತಿಕ ಗಾಯಗಳಾಗಿತ್ತು. ಆಕೆಯ ಇಡೀ ದೇಹ ನಜ್ಜುಗುಜ್ಜಾಗಿತ್ತು, ಮುಖವಂತೂ ಗುರುತೇ ಸಿಗದಷ್ಟು ಅಪ್ಪಚ್ಚಿಯಾಗಿತ್ತು. ಸಾಹಿಲ್‌ನ ಕ್ರೌರ್ಯ ನೋಡಿ ಅಕ್ಕ ಪಕ್ಕದವರೂ, ‌ಆತನನ್ನು ತಡೆಯುವ ಗೋಜಿಗೇ ಹೋಗದೆ ಅಲ್ಲಿಂದ ಕಾಲ್ಕಿತ್ತರು. ಪೊಲೀಸರು ಸಾಕ್ಷಿಯ ದೇಹ ನೋಡಿ‌ ಕ್ಷಣ ‌ದಂಗಾದರು. ಗೆಳತಿಯನ್ನು ‌ಕೊಂದು ಸಂಬಂಧಿ‌ ಮನೆಗೆ ತೆರಳಿದ್ದ ಸಾಹಿಲ್‌ನನ್ನು ದೆಹಲಿ ಪೊಲೀಸರು ಹೆಡೆಮುರಿ ಕಟ್ಟಿ‌ ಕರೆತಂದರು. ಸಾಕ್ಷಿಯನ್ನು ಬರ್ಬರವಾಗಿ‌ ಕೊಂದಿದ್ದಕ್ಕೆ ಸಾಹಿಲ್ ಮುಖದಲ್ಲಿ ‌ಕಿಂಚಿತ್ತೂ ಅಪರಾಧಿ‌ ಪ್ರಜ್ಞೆ ಕಾಣಲಿಲ್ಲ ಅಂತಾರೆ ವಿಚಾರಣೆ ‌ಮಾಡಿದ ಪೊಲೀಸರು. ತನ್ನ ಜತೆಗಿನ ಸಂಬಂಧ ಕಡಿದುಗೊಂಡು, ಹಳೆ ಬಾಯ್ ಫ್ರೆಂಡ್ ಜತೆ ಸುತ್ತುತ್ತಿದ್ದ ಸಾಕ್ಷಿಯನ್ನು ಕೊಂದು ಬಿಡಲು ಹದಿನೈದು ‌ದಿನದ ಹಿಂದೆಯೇ ನಿರ್ಧರಿಸಿದ್ದಾಗಿ ಸಾಹಿಲ್ ತಣ್ಣಗೆ ಹೇಳಿದಾಗ ಪೊಲೀಸರು ಬೆವರಿದ್ರು.

ಬಾಯ್‌ಫ್ರೆಂಡ್‌ ಜತೆ ಸೆಕ್ಸ್‌ಚಾಟ್‌ ಬಹಿರಂಗ: ಮೊಬೈಲ್‌ ಕಸಿದುಕೊಂಡ ಸಿಟ್ಟಿಗೆ ಅತ್ತೆ - ಮಾವನನ್ನೇ ಹತ್ಯೆಗೈದ ಪಾಪಿ ಸೊಸೆ

Tap to resize

Latest Videos

ಸಾಹಿಲ್ ಕ್ರೌರ್ಯ ಕಂಡು ಇಡೀ ದೇಶವೇ‌ ಬೆಚ್ಚಿಬಿದ್ದಿದೆ. ಧರ್ಮದ ಹೆಸರಿನಲ್ಲಿ ‌ರಾಜಕೀಯ, ಕೆಸರೆರಚಾಟ ನಡೆದಿದೆ. ಇದರ ಮಧ್ಯೆ ಎಲ್ಲರೂ ಮರೆತಿರುವುದು, ಹದಿಹರೆಯದ ಮಕ್ಕಳಲ್ಲಿ ಪ್ರೀತಿಯ ಬಗೆಗಿನ ಮಹತ್ವವೇ ಮರೆಯಾಗಿರುವುದು. ಲವ್ ಅಂದ್ರೆ ಬಾಯ್ ಫ್ರೆಂಡ್, ಸುತ್ತಾಟ, ರೊಮ್ಯಾನ್ಸ್ ಅಂತ ಮೈಮರೆಯೋ ಹುಡುಗ- ಹುಡುಗಿಯರು ಅಷ್ಟೇ ಸುಲಭಕ್ಕೆ ಬ್ರೇಕ್ ಅಪ್ ಮಾಡಿಕೊಳ್ಳುವುದು ನೀರು‌ ಕುಡಿದಷ್ಟೇ ಸಲೀಸಾಗಿ ಬಿಟ್ಟಿದೆ. ಈ‌‌‌ ಮಕ್ಕಳಿಗೆ ಪ್ರೀತಿ‌ ಪ್ರೇಮದ ಮಹತ್ವ ವಿವರಿಸುವವರಾರು? ದಾರಿ ತಪ್ಪದಂತೆ ಕಾಪಾಡುವವರು ಯಾರು ?
 

click me!