ಹಳೆ ವಿಡಿಯೋ ಇಟ್ಗೊಂಡು ಅವಾಚ್ಯ ಶಬ್ದಗಳಿಂದ ಪೊಲೀಸರ ಬೈದ ಕೈ ನಾಯಕಿ ಅರೆಸ್ಟ್!

Published : May 12, 2021, 09:09 PM ISTUpdated : May 12, 2021, 09:18 PM IST
ಹಳೆ ವಿಡಿಯೋ ಇಟ್ಗೊಂಡು ಅವಾಚ್ಯ ಶಬ್ದಗಳಿಂದ ಪೊಲೀಸರ ಬೈದ ಕೈ ನಾಯಕಿ ಅರೆಸ್ಟ್!

ಸಾರಾಂಶ

* ಲಾಕ್ ಡೌನ್ ಸಂದರ್ಭ ಪೊಲೀಸರನ್ನು ಅವಹೇಳನ ಮಾಡಿದ್ದ ಕೈ ನಾಯಕಿ! * ವ್ಯಕ್ತಿಯೊಬ್ಬರ ಮೇಲೆ ಹಿಗ್ಗಾ ಮುಗ್ಗಾ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದರು * ಅವಾಚ್ಯ ಶಬ್ದಗಳಿಂದ ಪೊಲೀಸರನ್ನು ನಿಂದಿಸಿದ್ದ ಕಾಂಗ್ರೆಸ್ ನಾಯಕಿ * ಬೆಂಗಳೂರು ದಕ್ಷಿಣ ಪೊಲೀಸರ ವಶದಲ್ಲಿ ಪದ್ಮಾ ಹರೀಶ್

ಬೆಂಗಳೂರು (ಮೇ 12) ಕೊರೋನಾ ಸಂಕಷ್ಟದ ಸಮಯದಲ್ಲಿ  ಹಳೆಯ ವಿಡಿಯೋ  ಒಂದಕ್ಕೆ ಅಶ್ಲೀಲ ಶಬ್ದಗಳನ್ನು ಬಳಸಿ ಧ್ವನಿ ನೀಡಿದ್ದ ಕಾಂಗ್ರೆಸ್ ನಾಯಕಿಯ ಬಂಧನವಾಗಿದೆ. ಕರ್ನಾಟಕ ಪೊಲೀಸರಿಗೆ ಛೀಮಾರಿ ಹಾಕುವ ರೀತಿ ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿದ್ದ ಕಾಂಗ್ರೆಸ್ ನಾಯಕಿ ಪದ್ಮಾ ಹರೀಶ್ ರನ್ನು ಅರೆಸ್ಟ್ ಮಾಡಲಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ.

ದಕ್ಷಿಣ ವಿಭಾದ ಸೈಬರ್ ಪೊಲೀಸರು ಪದ್ಮಾ ಹರೀಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ವೃದ್ಧ ವ್ಯಕ್ತಿಯೊಬ್ಬರಿಗೆ ನಾಲ್ವರು ಪೊಲೀಸರು ಬೀದಿಯಲ್ಲಿ ಲಾಠಿಯಿಂದ ಥಳಿಸುವ ವಿಡಿಯೋ ಹಿಂದೆ ವೈರಲ್ ಆಗಿತ್ತು. 2020 ಏಪ್ರಿಲ್‌ನಲ್ಲಿ ಲಾಕ್ ಡೌನ್ ಸಮಯದ ಮುಂಬೈ ವಿಡಿಯೋವನ್ನು ಬೆಂಗಳೂರಿನದ್ದು ಎಂದು ಬಿಂಬಿಸಿ ಕೈ ನಾಯಕಿ ಪೊಲೀಸರನ್ನು ನಿಂದಿಸಿದ್ದರು.

ಪ್ರತಿಭಟನೆಗೆ ಇಳಿದ ಕಾಂಗ್ರೆಸ್, ಗಾಂಧಿ ಪ್ರತಿಮೆ ಬಳಿ ಧರಣಿ

ಈ ಬಗ್ಗೆ ಟ್ವೀಟ್ ಮಾಡಿ ಅಸಲಿತನವನ್ನು ಮುಂದೆ ಇಟ್ಟಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸುಳ್ಳು ಸುದ್ದಿ ಹಬ್ಬಿಸುವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಜರುಗಿಸಲಿದ್ದೇವೆ ಎಂದಿದ್ದರು.

ಲಾಕ್ ಡೌನ್ ಸಂದರ್ಭ ನಿಯಮ ಮುರಿದ ಜನರ ಮೇಲೆ ಪೊಲೀಸರು ಅಲ್ಲಿಲ್ಲಿ ಲಘುವಾಗಿ ಲಾಠಿ ಬೀಸಿದ್ದು ಇದೆ. ಆದರೆ ಈ ವಿಡಿಯೋದಲ್ಲಿ ಇರುವ ರೀತಿ ಹೀನಾಯವಾಗಿ ನಡೆದುಕೊಂಡಿಲ್ಲ. ಪೊಲೀಸರ ಅವಹೇಳನ ಮಾಡಿದ ಕೈನಾಯಕಿ ಈಗ ವಿಚಾರಣೆ ಎದುರಿಸಲೇಬೇಕಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!