ರವೀಂದ್ರ ಜಡೇಜಾ ಮೇಲೆ ಸ್ವತಃ ತಂದೆ ಅನಿರುದ್ಧ್ ಸಿನ್ಹ ಮಾಡಿರುವ ಗಂಭೀರ ಆರೋಪ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಈ ಕುರಿತು ಸ್ವತಃ ಜಡೇಜಾ ಪ್ರತಿಕ್ರಿಯೆ ನೀಡಿದರೂ ಭಾರಿ ಕೋಲಾಹಲ ಸೃಷ್ಟಿಸಿದೆ. ಇಂಗ್ಲೆಂಡ್ ಬೆಂಬಲಿತ ಕೆಲ ಟ್ವಿಟರ್ ಖಾತೆಗಳು ಇದೇ ವಿಚಾರ ಮುಂದಿಟ್ಟು ಜಜೇಜಾ ಪತ್ನಿ, ಬಿಜೆಪಿ ಶಾಸಕಿ ವಿರುದ್ಧವೂ ಮುಗಿಬಿದ್ದಿದೆ.
ರಾಜ್‌ಕೋಟ್(ಫೆ.09) ರವಿಂದ್ರ ಜಡೇಜಾನನ್ನು ಕ್ರಿಕೆಟಿಗನಾಗಿ ಮಾಡಿದೆ. ಆದರೆ ಆತನಿಗೆ ರಿವಾಬಾ ಜೊತೆ ಮದುವೆ ಮಾಡಿಸಬಾರದಿತ್ತು. ಇದೀಗ ಜಡೇಜಾ ಪತ್ನಿ ಮಾತು ಕೇಳಿ ನನ್ನನ್ನುತೊರೆದಿದ್ದಾನೆ. ಈ ವಯಸ್ಸಿನಲ್ಲಿ ನಾನು ಏಕಾಂಗಿಯಾಗಿದ್ದೇನೆ ಎಂದು ಟೀಂ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾ ತಂದೆ ಅನಿರುದ್ಧ್ ಸಿನ್ಹ ಗಂಭೀರ ಆರೋಪ ಕೋಲಾಹಲ ಸೃಷ್ಟಿಸಿದೆ. ಅನಿರುದ್ಧ್ ಸಿನ್ಹ ಆರೋಪದಿಂದ ಕೌಟುಂಬಿಕ ಕಲಹ ಇದೀಗ ಜಗಜ್ಜಾಹಿರಾಗಿದೆ. ಜಡೇಜಾ ಬಾಳಿನಲ್ಲಿ ರಿವಾಬಾ ಆಗಮನದ ಬಳಿಕ ಮನೆಯ ಪರಿಸ್ಥಿತಿ ಹದಗೆಟ್ಟಿದೆ ಎಂದು ಅನಿರುದ್ಧ್ ಸಿನ್ಹ ಆರೋಪಿಸಿದ ಸಂದರ್ಶನವೊಂದು ಖಾಸಗಿ ಮಾಧ್ಯಮದಲ್ಲಿ ಪ್ರಕಟಗೊಂಡಿದೆ. ಆದರೆ ಈ ಆರೋಪದ ಕುರಿತು ಪ್ರತಿಕ್ರಿಯೆ ನೀಡಿರುವ ಜಡೇಜಾ, ಈ ರೀತಿಯ ಪೂರ್ನಿಯೋಜಿತ ಬರಹಗಳ ಸಂದರ್ಶನದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಇದು ನನ್ನ ಹಾಗೂ ಪತ್ನಿ ತೇಜೋವಧೆಗಾಗಿ ಮಾಡಿದ ಸಂದರ್ಶನ ಎಂದು ಜಡೇಜಾ ಹೇಳಿದ್ದಾರೆ.
ದಿವ್ಯ ಭಾಸ್ಕರ್ ಪ್ರಕಟಿಸಿದ ಸಂದರ್ಶನದಲ್ಲಿ ರವೀಂದ್ರ ಜಡೇಜಾ ತಂದೆ ಅನಿರುದ್ಧ್ ಸಿನ್ಹ ತಮ್ಮ ಕೌಟುಂಬಿಕ ವಿಚಾರಗಳ ಕುರಿತು ಮಾತನಾಡಿದ್ದಾರೆ. ನಾನು ಒಂದು ವಿಚಾರವನ್ನು ಇಲ್ಲಿ ಹೇಳಬಯಸುತ್ತೇನೆ. ನಾನು ನನ್ನ ಪುತ್ರ ರವೀಂದ್ರ ಜಡೇಜಾ, ಸೊಸೆ ರಿವಾಬ ಜೊತೆ ಯಾವುದೇ ಮಾತುಕತೆ ಇಲ್ಲ. ನಾನು ಅವರಿಗೆ ಫೋನ್ ಕರೆ ಮಾಡುವುದಿಲ್ಲ. ಅವರೂ ಮಾಡುತ್ತಿಲ್ಲ. 2016ರಲ್ಲಿ ರವೀಂದ್ರ ಜಡೇಜಾ ,ರಿವಾಬಾ ಮದುವೆಯಾದ ಕೆಲವೇ ತಿಂಗಳಲ್ಲಿ ಸಮಸ್ಯೆ ಆರಂಭಗೊಂಡಿದೆ. ಅಲ್ಲೀವರೆಗೆ ಉತ್ತಮ ಸಂಬಂಧವಿತ್ತು. ಆದರೆ ಪತ್ನಿ ಮಾತು ಕೇಳಿ ನನ್ನ ಜೊತೆ ಮಗ ಮಾತನಾಡುತ್ತಿಲ್ಲ ಎಂದು ಕ್ರಿಕೆಟಿಗನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಕ್ರಿಕೆಟ್ ಮಾತ್ರವಲ್ಲ ಹೋಟೆಲ್ ಉದ್ಯಮದಲ್ಲೂ ಈ ಆಟಗಾರರು ಸಕ್ಸಸ್..!
ಆತನಿಗೆ ನಾನು ಮದುವೆ ಮಾಡಿಸಬಾರದಿತ್ತು, ಆತನನ್ನು ಕ್ರಿಕೆಟಿಗ ಮಾಡದಿದ್ದರೆ ನನ್ನ ಬದುಕು ಚೆನ್ನಾಗಿರುತ್ತಿತ್ತು. ಮದುವೆಯಾದ ಮೂರೇ ತಿಂಗಳಿಗೆ ರಿವಾಬ ನನ್ನಲ್ಲಿ ಎಲ್ಲಾ ಆಸ್ತಿಗಳನ್ನು ಆಕೆಯ ಹೆಸರಿಗೆ ಬರೆದುಕೊಡುವಂತೆ ಒತ್ತಾಯಿಸಿದ್ದಳು. ರಿವಾಬಾ ಆಗಮನದ ಬಳಿಕ ನಮ್ಮ ಕುಟುಂಬದಲ್ಲಿ ಜಗಳ ಶುರುವಾಯಿತು. ನನ್ನ ಪುತ್ರಿ ಆರೋಪಗಳು ಈಗಾಗಲೇ ಸುದ್ದಿಯಾಗಿತ್ತು. ಜಡೇಜಾ ತಂಗಿಯ ಆರೋಪವನ್ನು ನೀವು ಕಡೆಗಣಿಸಬಹುದು, ಆದರೆ ನಮ್ಮ ಕುಟುಂಬದ ಸುಮಾರು 50 ರಷ್ಟು ಮಂದಿ ಜಡೇಜಾ ಹಾಗೂ ರಿವಾಬಾ ಜೊತೆ ಮಾತುಕತೆ ಇಲ್ಲ. ನಾನು, ನನ್ನಪುತ್ರಿ ತಪ್ಪಾಗಿರಬಹುದು. ಆದರೆ ಕುಟುಂಬ 50ಕ್ಕೂ ಹೆಚ್ಚು ಮಂದಿಗೆ ಇದೇ ಸಮಸ್ಯೆ ಎಂದರೆ ತಪ್ಪು ಯಾರದ್ದು? ಎಂದು ಅನಿರುದ್ಧ ಸಿನ್ಹ ಪ್ರಶ್ನಿಸಿದ್ದಾರೆ.
"Forever Crush" ಜತೆಗಿನ ಫೋಟೋ ಹಂಚಿಕೊಂಡ ಕ್ರಿಕೆಟಿಗ ರವೀಂದ್ರ ಜಡೇಜಾ..! ಇದು ಪತ್ನಿ ಫೋಟೋವಲ್ಲ
5 ವರ್ಷದಿಂದ ನಾನು ನನ್ನ ಮೊಮ್ಮಗಳ ಮುಖ ನೋಡಿಲ್ಲ. ರವೀಂದ್ರ ಜಡೇಜಾ ಅತ್ತೆ ಮಾವ ಆಕೆಯನ್ನು ನೋಡಿಕೊಳ್ಳುತ್ತಿದ್ದಾರೆ. ಈ ವಯಸ್ಸಿನಲ್ಲಿ ನಾವು ಏಕಾಂಗಿಯಾಗಿದ್ದೇವೆ. ಪತ್ನಿಯ ಮಾತಿನಿಂದ ಮಗ ನಮ್ಮನ್ನು ತೊರೆದಿದ್ದಾನೆ ಎಂದು ಅನಿರುದ್ಧ ಸಿನ್ಹ ಸಂದರ್ಶನದಲ್ಲಿ ಹೇಳಿದ್ದಾರೆ. ಆದರೆ ಈ ಕುರಿತು ಟ್ವೀಟ್ ಮಾಡಿರುವ ರವೀಂದ್ರ ಜಡೇಜಾ, ಈ ರೀತಿ ಸ್ಕ್ರಿಪ್ಟೆಡ್ ಸಂದರ್ಶನದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ದಿವ್ಯ ಭಾಸ್ಕರ್ ಸಂದರ್ಸನದಲ್ಲಿ ಆಡಿರುವ ಮಾತುಗಳು ಅರ್ಥವಿಲ್ಲದ ಹಾಗೂ ಸುಳ್ಳು ಹೇಳಿಕೆ. ಇದು ಒಂದು ಭಾಗದ ಅಭಿಪ್ರಾಯವಾಗಿದ್ದು, ಈ ಆರೋಪವನ್ನು ನಾನು ಅಲ್ಲಗೆಳೆಯುತ್ತೇನೆ. ಈ ಸಂದರ್ಶನ ನನ್ನ ಹಾಗೂ ಪತ್ನಿಯನ್ನು ತೇಜೋವಧೆ ಮಾಡಲು ಬಳಸಿದ ತಂತ್ರವಾಗಿದೆ. ಇದನ್ನು ಖಂಡಿಸುತ್ತೇನೆ. ನನಗೂ ತುಂಬಾ ಹೇಳಲು ಇದೆ, ಆದರೆ ಸಾರ್ವಜನಿಕರ ಮುಂದೆ ಬಹಿರಂಗಪಡಿಸುವುದು ಉಚಿತವಲ್ಲ ಎಂದು ಜಡೇಜಾ ಹೇಳಿದ್ದಾರೆ.