ಬೇಟೆಗೆ ಎಂದು ತೆರಳಿದ್ದ ಯುವಕರ ಗುಂಪು ಕಾಡು ಪ್ರಾಣಿ ಎಂದು ತಿಳಿದು ತಮ್ಮ ಸ್ಮೇಹಿತನಿಗೇ ಗುಂಡು ಹಾರಿಸಿ, ಈಗ ಜೈಲು ಪಾಲಾಗಿದ್ದಾರೆ,
ಕಾರವಾರ, (ಜೂನ್. 15): ಬೇಟೆಗೆ ಎಂದು ತೆರಳಿದ್ದ ಯುವಕರ ಗುಂಪು ಕಾಡು ಪ್ರಾಣಿ ಎಂದು ತಿಳಿದು ತಮ್ಮ ಸ್ಮೇಹಿತನಿಗೇ ಗುಂಡು ಹಾರಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಘಟನೆ ನಡೆದಿದ್ದು, ರಾತ್ರಿ ವೇಳೆ ಪ್ರಾಣಿ ಬೇಟೆಗೆಂದು ಐವರು ಗೆಳೆಯರು ಕಾಡಿಗೆ ಹೋಗಿದ್ದಾರೆ. ಈ ವೇಳೆ ಕಾಡು ಪ್ರಾಣಿ ಎಂದು ಹಾರಿಸಿದ ಗುಂಡು ತಂಡದಲ್ಲಿದ್ದ ಮುಷ್ತಾಕ್ ಎಂಬತನಿಗೆ ತಗುಲಿದೆ.
ಕೊರೋನಾಗೆ ಔಷದಿ ನೀಡಲಿದೆ ಪತಂಜಲಿ, ಈ ವರ್ಷ IPL ದುಬೈನಲ್ಲಿ?ಜೂ.15ರ ಟಾಪ್ 10 ಸುದ್ದಿ!
ಘಟನೆ ಸಂಬಂಧ ಸುಲೇಮಾನ್, ಇಸ್ಮಾಯಿಲ್, ಮುಕಮುಲ್, ಅಹ್ಮದ್ ಎಂಬುವವರನ್ನು ಪೊಲೀಸರು ಬಂಧಿಸಿದ್ದು, ಅವರಿಂದ ಬೇಟೆಗೆ ಬಳಸಿದ ಬಂದೂಕನ್ನು ವಶಕ್ಕೆ ಪಡೆದಿದ್ದಾರೆ.
ಏನಿದು ಘಟನೆ?
ಭಾನುವಾರ ರಾತ್ರಿ ಮಳಗಿ ಅರಣ್ಯ ಪ್ರದೇಶಕ್ಕೆ ಬೇಟೆಗೆಂದು ಸುಲೇಮಾನ್, ಇಸ್ಮಾಯಿಲ್, ಮುಕಮುಲ್, ಅಹ್ಮದ್ ಸೇರಿದಂತೆ ಐವರು ತೆರಳಿದ್ದರು. ಈ ವೇಳೆ ಪ್ರಾಣಿಗಳನ್ನು ಬೇಟೆಯಾಡಲು ಗುಂಪಿನಲ್ಲಿದ್ದವರು ಚದುರಿ ಹೋಗಿದ್ದರು.
ಆಗ ಮುಷ್ತಾಕ್ ಎಂಬಾತ ತಂಡದಿಂದ ಬೇರ್ಪಟ್ಟು ಪ್ರಾಣಿಗಳನ್ನು ಹುಡುಕುತಿದ್ದ. ಈ ವೇಳೆ ಈತನೇ ಕಾಡುಪ್ರಾಣಿ ಎಂದು ಗುಂಡು ಹಾರಿಸಿದ್ದಾರೆ. ಮುಷ್ತಾಕ್ ಎದೆಯ ಮೇಲ್ಭಾಗಕ್ಕೆ ಗಂಭೀರ ಗಾಯವಾಗಿದ್ದು, ತಕ್ಷಣ ಹುಬ್ಬಳ್ಳಿಯ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.