Chikkamagaluru: ವಸತಿ ಶಾಲೆ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ; ಮೂವರ ಬಂಧನ

By Govindaraj S  |  First Published Nov 11, 2023, 11:30 PM IST

ಪ್ರೀತಿಗೋಸ್ಕರ ಯಾರ್ಯಾರೋ... ಏನೇನೋ... ಮಾಡಿದ್ದಾರೆ. ಹಲವರು ಇತಿಹಾಸದ ಪುಟ ಸೇರಿದ್ದಾರೆ. ಮತ್ತಲವರು ಮಣ್ಣು ಸೇರಿದ್ದಾರೆ. ಆದ್ರೆ, ತಾನೊಂದು ಹೆಣ್ಣಾಗಿ, ಮದುವೆಯಾಗಿದ್ರು ಕೂಡ ಪ್ರಿಯಕರನಿಗಾಗಿ ಅಪ್ರಾಪ್ತ ಹುಡುಗಿಯರಿಗೆ ಅಮಲು ಪದಾರ್ಥ ನೀಡಿ ಲವ್ವರ್ ಜೊತೆ ಬಿಡುತ್ತಿದ್ದ ನರ್ಸ್‍ಗೆ ಪೊಲೀಸರು ಶ್ರೀಕೃಷ್ಣನ ಜನ್ಮಸ್ಥಳದ ದರ್ಶನ ಮಾಡಿಸಿದ್ದಾರೆ.


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ  ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ನ.11): ಪ್ರೀತಿಗೋಸ್ಕರ ಯಾರ್ಯಾರೋ... ಏನೇನೋ... ಮಾಡಿದ್ದಾರೆ. ಹಲವರು ಇತಿಹಾಸದ ಪುಟ ಸೇರಿದ್ದಾರೆ. ಮತ್ತಲವರು ಮಣ್ಣು ಸೇರಿದ್ದಾರೆ. ಆದ್ರೆ, ತಾನೊಂದು ಹೆಣ್ಣಾಗಿ, ಮದುವೆಯಾಗಿದ್ರು ಕೂಡ ಪ್ರಿಯಕರನಿಗಾಗಿ ಅಪ್ರಾಪ್ತ ಹುಡುಗಿಯರಿಗೆ ಅಮಲು ಪದಾರ್ಥ ನೀಡಿ ಲವ್ವರ್ ಜೊತೆ ಬಿಡುತ್ತಿದ್ದ ನರ್ಸ್‍ಗೆ ಪೊಲೀಸರು ಶ್ರೀಕೃಷ್ಣನ ಜನ್ಮಸ್ಥಳದ ದರ್ಶನ ಮಾಡಿಸಿದ್ದಾರೆ. ಆಕೆ ಕಾಫಿನಾಡ ಕಡೂರಿನವಳು. ಆತ ಶಿವಮೊಗ್ಗದ ಆನವಟ್ಟಿಯವನು. ಈಕೆ ಬಾ ಅಂದ ಕೂಡಲೇ ಆತ ಕಂಡವರ ಮನೆ ಮಕ್ಕಳನ್ನ ಹಾಳು ಮಾಡಲು ಬರ್ತಿದ್ದ. ಆ ಪ್ರೇಮಿಗಳ ಆಸೆಗೆ ಸಾಥ್ ನೀಡಿದ್ಯಾರು ಗೊತ್ತಾ.

Tap to resize

Latest Videos

undefined

ಸರ್ಕಾರಿ ಅಧಿಕಾರಿಯಿಂದ್ಲೇ ದಂಧೆ: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ವಸತಿ ಶಾಲೆಯೊಂದರ ಪಕ್ಕದ ಹಳ್ಳಿಯಲ್ಲಿ ನರ್ಸ್ ವೃತ್ತಿ ಮಾಡುತ್ತಿದ್ದ ಚಂದನ  ನರ್ಸ್ ವೃತ್ತಿ ಹಾಗೂ ಹೆಣ್ಣಿನ ಕುಲಕ್ಕೆ ಮಸಿ ಬಳಿದವಳು. ಇನ್ನು ನರ್ಸ್ ಲವ್ವರ್ ವಿನಯ್ ,ಈತ ಶಿವಮೊಗ್ಗ ಜಿಲ್ಲೆ ಆನವಟ್ಟಿಯಲ್ಲಿ ಫ್ಯಾನ್ಸಿ ಸ್ಟೋರ್ ಇಟ್ಟುಕೊಂಡಿದ್ದಾನೆ. ಈಕೆ ಅದ್ಯಾವ ಸೀಮೆ ಹೆಣ್ಣೋ... ಮತ್ಯಾವ ಸೀಮೆಯೋ ಪ್ರೇಮಿಯೋ ಗೊತ್ತಿಲ್ಲ. ತನ್ನ ಪ್ರೇಮಿ ತನಗೇ ಮಾತ್ರ ಪ್ರೇಮಿಯಾಗಿರಬೇಕು ಅನ್ನೋದು ಹೆಣ್ಣು ಮಕ್ಕಳ ಆಸೆ. ಆದ್ರೆ, ಈಕೆಗೆ ಮದುವೆಯಾಗಿದೆಯಂತೆ. ಮದುವೆಯಾಗಿದ್ರು ಈಕೆಗೊಬ್ಬರ ಲವರ್. ಆತನಿಗೆ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳೇ ಬೇಕಂತೆ. 

ಇವಿ ನೀತಿ ಕ್ಲೀನ್‌ ಮೊಬಿಲಿಟಿ ನೀತಿಯಾಗಿ ಮಾರ್ಪಾಟು: ಸಚಿವ ಎಂ.ಬಿ.ಪಾಟೀಲ್‌

ಅದಕ್ಕೆ ಈಕೆ ನರ್ಸ್ ಕೆಲಸ ಮಾಡ್ತಿದ್ದ ಆಸ್ಪತ್ರೆ ಪಕ್ಕದ ವಸತಿ ಶಾಲೆಯ ಅಪ್ರಾಪ್ತ ಹೆಣ್ಣು ಮಕ್ಕಳನ್ನ ನರ್ಸ್ ಟ್ರೈನಿಂಗ್ ಇದೆ. ಟ್ರೈನಿಂಗ್ ಮಾಡಿದ್ರೆ ಬೇಗ ಕೆಲಸ ಸಿಗುತ್ತೆ ಅಂತ ಕರೆದುಕೊಂಡು ಬಂದು ರಾತ್ರಿ ಜೊತೆಯಲ್ಲೇ ಉಳಿಸಿಕೊಳ್ಳುತ್ತಿದ್ದಳು. ಆಗ ಅವರಿಗೆ ಅಮಲು ಪದಾರ್ಥ ನೀಡಿ ಅರೆಪ್ರಜ್ಞಾವಸ್ಥೆಯಲ್ಲಿದ್ದ ಹೆಣ್ಣು ಮಕ್ಕಳನ್ನ ಪ್ರಿಯಕರನ ಜೊತೆ ಬಿಡುತ್ತಿದ್ದಳು. ಇದೀಗ, ವಿಷಯ ಹೊರಬಂದು ರೀತಿ-ನೀತಿ ಇಲ್ಲದ ಈ ಪ್ರೇಮಿಗಳು ಜೈಲು ಹಕ್ಕಿಯಾಗಿದ್ದಾರೆ.  ಇನ್ನು ವಸತಿ ಶಾಲೆಯ ಡಿ ದರ್ಜೆ ನೌಕರ ಸುರೇಶನ ಕಥೆ ಹೇಳ್ತೀವಿ ಕೇಳಿ. ಪ್ರೀತಿಯ ಅರ್ಥವೇ ಗೊತ್ತಿಲ್ಲದ ಆ ಶೋಕಿ ಪ್ರೇಮಿಗಳ ಪಾಪದ ಕೆಲಸದಲ್ಲಿ ಇವನದ್ದೇ ಸಿಂಹಪಾಲು. 

ಯಾಕಂದ್ರೆ, ಈತ ಅದೇ ವಸತಿ ಶಾಲೆಯಲ್ಲಿ ಡಿ.ದರ್ಜೆ ನೌಕರನಾಗಿ ಕೆಲಸ ಮಾಡುತ್ತಿದ್ದ. ಅಪ್ರಾಪ್ತ ಹೆಣ್ಣು ಮಕ್ಕಳನ್ನ ಆ ನರ್ಸ್ ಚಂದನ ಬಳಿಕ ಕರೆದುಕೊಂಡು ಬರುತ್ತಿದ್ದದ್ದೇ ಈ ಮನೆಹಾಳ. ವಸತಿ ಶಾಲೆಯ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರಿಗೆ ಸುಳ್ಳು ಹೇಳಿ, ಪುಸಲಾಯಿಸಿ ನಿಮ್ಮ ಮಗಳಿಗೆ ನರ್ಸ್ ಟ್ರೈನಿಂಗ್ ಇದೆ. ಅದನ್ನು ಮಾಡಿದರೆ ಮುಂದೆ ಬಹಳ ಅನುಕೂಲವಾಗುತ್ತೆ. ಬೇಗ ಕೆಲಸ ಸಿಗುತ್ತೆ ಎಂದು ನಂಬಿಸಿ ಇಬ್ಬರು ವಿದ್ಯಾರ್ಥಿನಿಯರನ್ನ ವಸತಿ ಗೃಹಕ್ಕೆ ಕರೆದುಕೊಂಡು ಬಂದಿದ್ದನು. 

ಅಲ್ಲಿ ಅವರಿಗೆ ತಂಪು ಪಾನೀಯದಲ್ಲಿ ಅಮಲು ಪದಾರ್ಥ ನೀಡಿ ಅವರು ಪ್ರಜ್ಞಾಶೂನ್ಯ ಅಥವ ಅರೆಪ್ರಜ್ಞಾವಸ್ಥೆಯಲ್ಲಿದ್ದಾಗ ವಿನಯ್ ಜೊತೆ ಬಿಡುತ್ತಿದ್ದರು. ವಿನಯ್ ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತು ವಸತಿ ಶಾಲೆಯ ಪ್ರಾಂಶುಪಾಲರು ಕಡೂರು ಠಾಣೆಗೆ ದೂರು ನೀಡಿದ್ದರು. ವಿಷಯ ಕೇಳಿ ಶಾಕ್ ಆದ ಕಡೂರು ಖಾಕಿಗಳು ಪೊಕ್ಸೋ ಪ್ರಕರಣ ದಾಖಲಿಸಿ ಮೂವರನ್ನ ಜೈಲಿಗಟ್ಟಿದ್ದಾರೆ.ಪೋಕ್ಸೋ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ: ಡಿ.ವಿ.ಸದಾನಂದಗೌಡ

ಒಟ್ಟಾರೆ, ನಿಜಕ್ಕೂ ನಾಗರೀಕ ಸಮಾಜ ತಲೆತಗ್ಗಿಸುವಂತಹಾ ಘಟನೆ ಇದು. ಮಕ್ಕಳು ಓದಿನ ಜೊತೆ ಬದುಕಿನ ಶಿಸ್ತನ್ನ ಕಲಿಯಲಿ ಎಂದು ಬಡ ಹಾಗೂ ಮಧ್ಯಮ ವರ್ಗದ ಜನ ಮಕ್ಕಳನ್ನ ವಸತಿ ಶಾಲೆಗಳಲ್ಲಿ ಬಿಟ್ಟು ಓದಿಸ್ತಾರೆ. ಮಕ್ಕಳ ಬದುಕಿಗೆ ಯಾರಾದ್ರು ಸಹಾಯ ಮಾಡ್ತಾರೆ ಅಂದ್ರೆ ನಂಬುತ್ತಾರೆ. ಆದ್ರೆ, ಆ ನಂಬಿಕೆಯನ್ನೇ ಬಂಡವಾಳ ಮಾಡಿಕೊಳ್ಳುವ ಇಂತಹಾ ಕಿಡಿಗೇಡಿಗಳು ಕಂಡವರ ಮಕ್ಕಳ ವ್ಯಕ್ತಿತ್ವ ಹಾಗೂ ಬದುಕಿನ ಜೊತೆ ಆಟವಾಡ್ತಾರೆ. ಇದೀಗ, ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಪ್ರಕರಣ ಮತ್ತಷ್ಟು ಬೆನ್ನು ಬಿದ್ದಿದ್ದಾರೆ. ಮತ್ತಿನ್ನೇನು ವಿಷಯ ಹೊರಬರುತ್ತೋ ಗೊತ್ತಿಲ್ಲ.

click me!