ಕುಡಿದ ಮತ್ತಿನಲ್ಲಿ ಪತಿ, ಪತ್ನಿ ಮಧ್ಯೆ ಜಗಳ| ಪತ್ನಿ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಪತಿ| ಬಾಗಲಕೋಟೆ ನವನಗರದ ವಾಂಬೆ ಕಾಲೋನಿಯಲ್ಲಿ ನಡೆದ ಘಟನೆ| ಕೊಲೆ ಮಾಡಿದ ಬಳಿಕ ಪರಾರಿಯಾದ ಆರೋಪಿ|
ಬಾಗಲಕೋಟೆ(ಡಿ.11): ಕುಡಿದ ಮತ್ತಿನಲ್ಲಿ ಪತಿ ಜಗಳವಾಡಿ ಪತ್ನಿ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾದ ಘಟನೆ ಬಾಗಲಕೋಟೆ ನವನಗರದ ವಾಂಬೆ ಕಾಲೋನಿಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಕೊಲೆಯಾದವರನ್ನು ರಮೀಜಾ ಬಾಂಧಾರ (35) ಎಂದು ಗುರುತಿಸಲಾಗಿದೆ. ಲಾಲಸಾಬ ಬಾಂಧಾರ(40) ಕೊಲೆ ಮಾಡಿದ ಪತಿ. ಪತಿ ಕುಡಿದು ಬಂದು ಅದೇ ಮತ್ತಿನಲ್ಲಿ ಜಗಳ ತೆಗೆದಿದ್ದಾನೆ. ಈ ವೇಳೆ ಇಬ್ಬರ ನಡುವಿನ ಜಗಳ ತಾರಕಕ್ಕೇರಿದೆ. ನಂತರ ಪತ್ನಿ ಮಲಗಿದ್ದಾಗ ಪತಿ ಲಾಲಸಾಬ ರಮೀಜಾ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಬೆಳಗ್ಗೆ ಘಟನೆ ಬೆಳಕಿಗೆ ಬಂದ ತಕ್ಷಣ ನವನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಕೊಲೆ ಮಾಡಿ ಪರಾರಿಯಾದ ಪತಿ ಲಾಲಸಾಬ ಶೋಧನೆಗೆ ಮುಂದಾಗಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮೇಲ್ನೋಟಕ್ಕೆ ಗಂಡ ಹೆಂಡರ ಜಗಳವೆಂದು ಹೇಳಲಾಗುತ್ತಿದ್ದರು ಕೊಲೆಗೀಡಾದ ಪತ್ನಿ ರಮೀಜಾ ಕುಟುಂಬದವರು ಬೇರೆ ಆರೋಪ ಮಾಡುತ್ತಿದ್ದಾರೆ. ತನಿಖೆಯ ನಂತರವೇ ಸತ್ಯ ಹೊರಬೀಳಲಿದೆ. ಈ ಸಂಬಂಧ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ದಂಪತಿಗೆ ನಾಲ್ವರು ಪುತ್ರಿಯರು ಇದ್ದಾರೆ.