ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಜಮ್ಮಿಹಾಳ ಗ್ರಾಮದಲ್ಲಿ ನಡೆದ ಘಟನೆ| ಅಣ್ಣನನ್ನು ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಿದ ತಮ್ಮ| ಜಮೀನು ವಿಚಾರವಾಗಿ ನಡೆದ ಕೊಲೆ| ಆರೋಪಿ ಪತ್ತೆಗೆ ಬಲೆ ಬೀಸಿದ ಪೊಲೀಸರು| ಈ ಸಂಬಂಧ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು|
ಕಲಘಟಗಿ(ಏ.26): ಆಸ್ತಿ ವಿಚಾರವಾಗಿ ಒಡಹುಟ್ಟಿದ ಸಹೋದರನನ್ನೇ ಕೊಲೆ ಮಾಡಿರುವ ಅಮಾನವೀಯ ಘಟನೆ ತಾಲೂಕಿನ ಜಮ್ಮಿಹಾಳ ಗ್ರಾಮದಲ್ಲಿ ನಡೆದಿದೆ. ಜಮ್ಮಿಹಾಳ ನಿವಾಸಿ ಮೈಲಾರಿ ತಿರ್ಲಾಪುರ(39) ಮೃತ ದುರ್ದೈವಿ.
ಮೈಲಾರಿಯ ಚಿಕ್ಕಪ್ಪನ ಮಗ ರವಿ ತಿರ್ಲಾಪುರ ಎಂಬವನೇ ಆಸ್ತಿ ವಿಚಾರವಾಗಿ ಅಣ್ಣನನ್ನು ಕೊಲೆ ಮಾಡಿದ ಆರೋಪಿ. ಆತನನ್ನು ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೈಲಾರಿಯನ್ನು ಶುಕ್ರವಾರ ರಾತ್ರಿ ಕಿಮ್ಸ್ ಆಸ್ಪತ್ರೆಗೆ ತರಲಾಗಿತ್ತು. ಕುತ್ತಿಗೆ, ಬೆನ್ನಿನ ಭಾಗಕ್ಕೆ ಮಾರಣಾಂತಿಕ ಪೆಟ್ಟು ಬಿದ್ದಿರುವ ಹಿನ್ನೆಲೆ ಚಿಕಿತ್ಸೆ ಫಲಿಸದೇ ಮೈಲಾರಿ ಕೊನೆಯುಸಿರೆಳೆದಿದ್ದಾನೆ.
ದಾವಣಗೆರೆ; ಸುಪನಾತಿ ಸೊಸೆ ಸರಸದ ಕಳ್ಳಾಟ, ಮಾವನಿಗೆ ಸುಪಾರಿ!
ಕಲಘಟಗಿ ಜಮ್ಮಿಹಾಳದಲ್ಲಿನ ಒಂದು ಎಕರೆ ಜಮೀನು ವಿಚಾರವಾಗಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾದ ರವಿಯ ಶೋಧಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.