ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಇರಾಳ್‌ನಲ್ಲಿ ಜೋಡಿ ಕೊಲೆ| ಅನೈತಿಕ ಸಂಬಂಧ; ಪತ್ನಿ, ಪ್ರಿಯಕರನನ್ನು ಕೊಂದ ಪತಿ| ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು| ಈ ಕುರಿತು ಪ್ರಕರಣ ದಾಖಲಾಗಿಲ್ಲ|
ಕೂಡ್ಲಿಗಿ(ಫೆ.03): ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯ ಸಂಡೂರು ತಾಲೂಕಿನ ಇರಾಳ್ ಗ್ರಾಮದ ಹೊರವಲಯದಲ್ಲಿ ಅನೈತಿಕ ಸಂಬಂಧ ವಿಚಾರವಾಗಿ ಪತಿ ತನ್ನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕೊಲೆಗೈದಿರುವ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಇರಾಳ್ ಗ್ರಾಮದ ತಬಸಮ್ (27) ಹಾಗೂ ಆಕೆಯ ಪ್ರಿಯಕರ ಫಯಾಜ್ ಅಹ್ಮದ್(25) ಕೊಲೆಯಾಗಿರುವ ದುರ್ದೈವಿಗಳಾಗಿದ್ದು ತಬಸಮ್ ಅವಳ ಪತಿ ಜಹಾಂಗೀರ್ ಕೊಲೆಮಾಡಿರುವ ಆರೋಪಿಯಾಗಿದ್ದಾನೆ.
ಉಸಿರುಗಟ್ಟಿ ಸತ್ತಳು ಪತ್ನಿ : ಪತಿಯೇ ಮಾಡಿ ಬೇರೆ ಕಥೆ ಹೇಳಿದ
ಪತ್ನಿ ಹಾಗೂ ಮಕ್ಕಳು ಜನವರಿ 6 ರಂದು ಇರಾಳ್ ನಲ್ಲಿನ ಮನೆ ಬಿಟ್ಟು ಹೋಗಿದ್ದಾರೆಂದು ಪತಿ ಜಹಾಂಗೀರ್ ಜನವರಿ 15ರಂದು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಜಹಾಂಗೀರ್ ಪತ್ನಿ -ಮಕ್ಕಳನ್ನು ಹುಡುಕುವ ಸಂದರ್ಭದಲ್ಲಿ ತನ್ನ ಪತ್ನಿ ಫಯಾಜ್ ಅಹ್ಮದ್ ಜೊತೆ ಇರುವುದನ್ನು ಅರಿತು ಮಧ್ಯಾಹ್ನದ ವೇಳೆ ಕೊಲೆ ಮಾಡಿದ್ದಾನೆ ಎಂದು ತಿಳಿದಿದೆ. ಘಟನಾ ಸ್ಥಳಕ್ಕೆ ಕೂಡ್ಲಿಗಿ ಸಿಪಿಐ ವಸಂತ ವಿ ಅಸೂದೆ ಹಾಗೂ ಪಿಎಸ್‌ಐ ತಿಮ್ಮಣ್ಣ ಚಾಮನೂರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಇಲ್ಲಿಯವರೆಗೂ ಪ್ರಕರಣ ದಾಖಲಾಗಿಲ್ಲ.