ಲಾಕ್‌ಡೌನ್‌: ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ನೇಕಾರ ಆತ್ಮಹತ್ಯೆ

By Kannadaprabha News  |  First Published Oct 2, 2020, 3:30 PM IST

ಆತ್ಮಹತ್ಯೆಗೆ ಶರಣಾದ ವ್ಯಕ್ತಿ| ಬೆಳಗಾವಿ ತಾಲೂಕಿನ ವಡಗಾವಿಯಲ್ಲಿ ನಡೆದ ಘಟನೆ| ಲಾಕ್‌ಡೌನ್‌ನಿಂದಾಗಿ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದ ಮೃತನ ಕುಟುಂಬ| ಈ ಸಂಬಂಧ ವಡಗಾವಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು| 


ಬೆಳಗಾವಿ(ಅ.02): ಕೋವಿಡ್‌​-19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ನೇಕಾರನೊಬ್ಬ ನೇಣಿಗೆ ಶರಣಾಗಿರುವ ಘಟನೆ ಗುರುವಾರ ಬೆಳಗಿನ ಜಾವ ಬೆಳಗಾವಿ ತಾಲೂಕಿನ ವಡಗಾವಿಯಲ್ಲಿ ನಡೆದಿದೆ. 

ಸಂತೋಷ ಢಗೆ(35) ಆತ್ಮಹತ್ಯೆ ಮಾಡಿಕೊಂಡ ನೇಕಾರ. ಕೊರೋನಾ ಸೋಂಕು ಹರಡುವಿಕೆ ತಡೆಗೆ ಕೇಂದ್ರ ಸರ್ಕಾರ ಲಾಕ್‌ಡೌನ್‌ ಜಾರಿಗೊಳಿಸಿತ್ತು. 

Tap to resize

Latest Videos

ಹುಬ್ಬಳ್ಳಿ: ಹಣದಾಸೆ ತೋರಿಸಿ ಕೈಕೊಟ್ಟ ಬಿಜೆಪಿ ಮುಖಂಡ, ಗೃಹಿಣಿ ಆತ್ಮಹತ್ಯೆ

ಇದರಿಂದಾಗಿ ಇವರ ಕುಟುಂಬ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿತ್ತು. ಆರ್ಥಿಕ ಸಂಕಷ್ಟದಿಂದ ಹೊರಬಾರದೇ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ವಡಗಾವಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!