ಬಣ್ಣದ ಮಾತಿನಿಂದ Auntyಯನ್ನು ಪಟಾಯಿಸಿದ: ಲೈಂಗಿಕವಾಗಿ ಬಳಸಿ, ಬ್ಲ್ಯಾಕ್‌ಮೇಲ್ ಮಾಡಿದಾತ ಅಂದರ್!

By Govindaraj S  |  First Published Sep 29, 2023, 4:00 AM IST

ಬಣ್ಣದ ಮಾತಿನಿಂದ ವಿವಾಹಿತ ಮಹಿಳೆಯನ್ನು ಲೈಂಗಿಕವಾಗಿ ಬಳಸಿ, ಬ್ಲ್ಯಾಕ್‌ಮೇಲ್ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಆರ್ಲಪದವು ಮೂಲದ ಪ್ರಶಾಂತ ಭಟ್ ಮಾಣಿಲ ಬಂಧಿತ ಆರೋಪಿ.


ಉತ್ತರ ಕನ್ನಡ (ಸೆ.29): ಬಣ್ಣದ ಮಾತಿನಿಂದ ವಿವಾಹಿತ ಮಹಿಳೆಯನ್ನು ಲೈಂಗಿಕವಾಗಿ ಬಳಸಿ, ಬ್ಲ್ಯಾಕ್‌ಮೇಲ್ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಆರ್ಲಪದವು ಮೂಲದ ಪ್ರಶಾಂತ ಭಟ್ ಮಾಣಿಲ ಬಂಧಿತ ಆರೋಪಿ. ಮಹಿಳೆಯನ್ನು ಲೈಂಗಿಕವಾಗಿ ಬಳಸಿದ್ದಲ್ಲದೇ ಲಕ್ಷಗಟ್ಟಲೆ ಹಣಕ್ಕೆ ಬೇಡಿಕೆಯಿಟ್ಟು ಆರೋಪಿಯು ಬ್ಲ್ಯಾಕ್ ಮೇಲ್ ಮಾಡಿದ್ದ. 

ಸಂತ್ರಸ್ತ ಮಹಿಳೆಗೆ ಸಂಗೀತದಲ್ಲಿ ಆಸಕ್ತಿಯಿದ್ದು, ಕ್ಲಬ್ ಹೌಸ್ ಆ್ಯಪ್‌ನಲ್ಲಿ ಹಾಡುತ್ತಿದ್ದಳು. 2020 ರಲ್ಲಿ ಆ್ಯಪ್ ಮೂಲಕವೇ ಆರೋಪಿಯ ಪರಿಚಯವಾಗಿ, ಪರಿಚಯ ಸ್ನೇಹಕ್ಕೆ ತಿರುಗಿ ಕ್ರಮೇಣ ಪರಸ್ಪರ ಇಷ್ಟಪಟ್ಟಿದ್ದರು. 2023ರ ಜನವರಿ ತಿಂಗಳಲ್ಲಿ ಆರೋಪಿಯು ಮಹಿಳೆಯನ್ನು ಭೇಟಿಯಾಗಲು ಬಂದು ಖಾಸಗಿ ಲಾಡ್ಜ್ ಒಂದರಲ್ಲಿ ರೂಂ ಮಾಡಿದ್ದ. ಈ ಲಾಡ್ಜ್‌ನಲ್ಲೇ ಆರೋಪಿಯು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ. ಅಲ್ಲದೇ, ಅದೇ ಲಾಡ್ಜಿನಲ್ಲಿ ಫೆಬ್ರುವರಿಯಲ್ಲೂ ಅತ್ಯಾಚಾರ ಎಸಗಿದ್ದ ಆರೋಪಿಯು ಬಳಿಕ ಮಹಿಳೆಯೊಂದಿಗಿರುವ ಖಾಸಗಿ ಕ್ಷಣಗಳ ಫೋಟೋ ಕ್ಲಿಕ್ಕಿಸಿಕೊಂಡಿದ್ದ. 

Tap to resize

Latest Videos

undefined

ಲೋಕಸಭೆಗೆ ಪತ್ನಿ ಡಾ.ಪ್ರಭಾ ಸ್ಪರ್ಧೆ ಚರ್ಚೆ ಆಗಿಲ್ಲ: ಸಚಿವ ಎಸ್.ಎಸ್‌.ಮಲ್ಲಿಕಾರ್ಜುನ

ವಿಡಿಯೋ ಕಾಲ್ ಮಾಡಿ ನಗ್ನ ದೃಶ್ಯಗಳನ್ನೂ ಸೆರೆ ಹಿಡಿದಿದ್ದಾನೆ ಎಂದು ದೂರು ನೀಡಲಾಗಿದ್ದು, ಮಹಿಳೆಯಲ್ಲಿ ಹಣಕ್ಕೂ ಬೇಡಿಕೆ ಇಟ್ಟು ಒಮ್ಮೆ 25 ಸಾವಿರ ರೂ. ಪಡೆದಿದ್ದಾನೆ. ಬಳಿಕ ಮಹಿಳೆಯ ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವುದಾಗಿ ಬೆದರಿಸಿ 7 ಲಕ್ಷ ರೂ.ಗೆ ಗಳಿಗೆ ಬೇಡಿಕೆ ಇಟ್ಟಿದ್ದ. ಅಲ್ಲದೇ, ಮಹಿಳೆಯ ತಾಯಿ ಹಾಗೂ ಸ್ನೇಹಿತರಿಗೂ ಖಾಸಗಿ ಕ್ಷಣಗಳ ಚಿತ್ರಗಳನ್ನು ಕಳುಹಿಸಿದ್ದ. ಮಹಿಳೆ ಹಾಗೂ ಆಕೆಯ ಪತಿಯ ದೂರಿನ ಹಿನ್ನೆಲೆ ಕಾರವಾರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿಯು ನ್ಯಾಯಾಂಗ ಬಂಧನದಲ್ಲಿದ್ದಾನೆ.

click me!