ನಗರದ ಪಾಂಡೇಶ್ವರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಶ್ರೀಲತಾ(Head Constable Srilata) ಎಂಬವರನ್ನು ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಪೊಲೀಸ್ ಆಯುಕ್ತರು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಮಂಗಳೂರು (ಮಾ.3): ನಗರದ ಪಾಂಡೇಶ್ವರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಶ್ರೀಲತಾ(Head Constable Srilata) ಎಂಬವರನ್ನು ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಪೊಲೀಸ್ ಆಯುಕ್ತರು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ದಂಪತಿ ಕಲಹದ ಪ್ರಕರಣವೊಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಶ್ರೀಲತಾ ಖಾಸಗಿ ವಾಹನವೊಂದರಲ್ಲಿ ತೆರಳಿ ಸಂಧಾನ ನೆಪದಲ್ಲಿ ವ್ಯವಹಾರ ಕುದುರಿಸಿದ್ದರು. ಇದನ್ನು ದೂರುದಾರರು ಗಮನಿಸಿ ಮೊಬೈಲ್‌ನಲ್ಲಿ ವಿಡಿಯೊ ಮಾಡಿದ್ದರು. ಇದನ್ನು ಶ್ರೀಲತಾ ಗಮನಿಸಿದ್ದು, ಪಾಂಡೇಶ್ವರ ಠಾಣೆ(Pandeshwar police station)ಯಲ್ಲಿ ಕರ್ತವ್ಯಕ್ಕೆ ಅಡ್ಡಿ ದೂರು ದಾಖಲಿಸಿದ್ದರು. ಆದರೆ ದೂರುದಾರರು ತಮಗಾದ ಅನ್ಯಾಯ ಹಾಗೂ ಶ್ರೀಲತಾ ಅವರು ಲಂಚದ ಬೇಡಿಕೆಯಿರಿಸಿದ ಬಗ್ಗೆ ಡಿಸಿಪಿ ಅಂನ್ಶು ಕುಮಾರ್(DCP Anshu Kumar) ಹಾಗೂ ಈ ಹಿಂದಿನ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್(N Shashikumar IPS) ಅವರಿಗೆ ದೂರು ನೀಡಿದ್ದರು.
undefined
Mangaluru: ಲಂಚ ಸ್ವೀಕರಿಸುವಾಗ ಟ್ರ್ಯಾಪ್: ಗ್ರಾಮ ಕರಣಿಕನಿಗೆ ಜೈಲು ಶಿಕ್ಷೆ!
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಪಿ ಮತ್ತು ಕಮಿಷನರ್ ತನಿಖೆಗೆ ಆದೇಶ ಮಾಡಿದ್ದರು. ಆ ಬಳಿಕ ಶಶಿಕುಮಾರ್‌ಗೆ ವರ್ಗಾವಣೆಯಾಗಿದ್ದು, ಹೊಸದಾಗಿ ಬಂದ ಆಯುಕ್ತ ಕುಲದೀಪ್ ಆರ್.ಜೈನ್(Kuldeep R. Jain) ಅವರು ಶ್ರೀಲತಾರನ್ನು ಅಮಾನತು ಆದೇಶ ಮಾಡಿದ್ದಾರೆ.
ಶ್ರೀಲತಾ ಈ ಹಿಂದೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ… ಆಗಿದ್ದಾಗ ದಂಪತಿ ಪ್ರಕರಣವೊಂದರಲ್ಲಿ ಇದೇ ಮಾದರಿಯಲ್ಲಿ ಗಲಾಟೆಯಾಗಿ, ರಾದ್ಧಾಂತವಾಗಿತ್ತು. ಇದಾದ ಬಳಿಕ ಠಾಣೆಯಲ್ಲಿ ಸಿಸಿ ಕ್ಯಾಮೆರಾ ದಾಖಲೆಗಳನ್ನು ಡಿಲೀಟ್ ಮಾಡಿಸಿದ್ದ ಶ್ರೀಲತಾ ಅವರು ಈ ಘಟನೆಯಲ್ಲೂ ದೂರುದಾರರ ಮೇಲೆ ಕರ್ತವ್ಯಕ್ಕೆ ಅಡ್ಡಿ ದೂರು ದಾಖಲಿಸಿದ್ದರು. ಇದಲ್ಲದೆ ಹಾಸನದ ರೇವ್ ಪಾರ್ಟಿ ಪ್ರಕರಣದಲ್ಲಿ ಶ್ರೀಲತಾ ಆರೋಪಿಯಾಗಿದ್ದರು.
ಶಿಕ್ಷಕರ ತೇಜೋವಧೆ: ಎಚ್‌ಎಂ ಸಹಿತ ಸಹಶಿಕ್ಷಕರಿಂದ ಪೊಲೀಸ್ ದೂರು:
ಬುಧವಾರ ಸರ್ಕಾರಿ ನೌಕರರ ಮುಷ್ಕರದ ವೇಳೆ ಶಾಲಾ ಶಿಕ್ಷಕರು ಭಾಗಿಯಾಗುತ್ತಿರುವುದರಿಂದ ಶಾಲೆಗೆ ಮಕ್ಕಳನ್ನು ಹಾಜರಾಗಬೇಡಿ ಎಂದು ತಿಳಿಸಿದ್ದರೂ ಕೂಡಾ ಕೆಲ ಮಕ್ಕಳನ್ನು ಶಾಲೆಗೆ ಕರೆಯಿಸಿ ಬೇರೆ ಶಾಲಾ ಮಕ್ಕಳನ್ನೂ ಸೇರಿಸಿ ಮಕ್ಕಳ ಪೋಟೋವನ್ನು ಅಕ್ರಮವಾಗಿ ತೆಗೆದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಶಾಲಾ ಶಿಕ್ಷಕ ವೃಂದದ ತೇಜೋವಧೆ ಮಾಡಲಾಗುತ್ತಿದೆ ಎಂದು ಉಪ್ಪಿನಂಗಡಿಯ ಸರ್ಕಾರಿ ಮಾದರಿ ಶಾಲಾ ಮುಖ್ಯೋಪಾಧ್ಯಾಯರ ಸಹಿತ ಶಿಕ್ಷಕರು ಪೊಲೀಸ್ ಇಲಾಖೆಗೆ ದೂರು ನೀಡಿದ ಘಟನೆ ನಡೆದಿದೆ.
ಮಾ.1ರಂದು ನಡೆದ ರಾಜ್ಯ ಸರ್ಕಾರಿ ನೌಕರರ ಸಂಘ(State Government Employees Union)ದ ಸೂಚನೆಯಂತೆ ಮುಷ್ಕರದಲ್ಲಿ ಭಾಗವಹಿಸುವ ಸಲುವಾಗಿ ಮುನ್ನೆಚ್ಚರಿಕಾ ನಿಯಮ ಪಾಲಿಸಿ ಮಕ್ಕಳಿಗೆ ಶಾಲೆಗೆ ಹಾಜರಾಗದಂತೆ ಮೌಖಿಕ ಸಂದೇಶವನ್ನು ಹಾಗೂ ತರಗತಿಗಳು ನಡೆಯದಿರುವ ಬಗ್ಗೆ ಮಾಹಿತಿ ನೀಡಲಾಗಿತ್ತು. ಆದರೆ ಕೆಲ ಶಾಲಾ ಪೋಷಕರು ಕೆಲವೊಂದು ಪೋಷಕರ ಮನವೊಲಿಸಿ ಅವರ ಮಕ್ಕಳನ್ನು ಶಾಲೆಗೆ ಬರುವಂತೆ ಮಾಡಿರುವುದಲ್ಲದೆ, ಆ ಮಕ್ಕಳ ಜೊತೆ ಬೇರೆಯೇ ಶಾಲಾ ಮಕ್ಕಳನ್ನು ನಿಲ್ಲಿಸಿ ಅಕ್ರಮವಾಗಿ ಮಕ್ಕಳ ಪೋಟೋ ವಿಡಿಯೋ ತೆಗೆದಿರುತ್ತಾರೆ. ಮಾತ್ರವಲ್ಲದೆ ಈ ವಿಡಿಯೋ- ಪೋಟೋಗಳನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸಮಾಜದಲ್ಲಿ ಗೌರವಾನ್ವಿತ ಶಿಕ್ಷಕರ ವಿರುದ್ಧ ನಿಂದನಾತ್ಮಕ ಸಂದೇಶವನ್ನು ಪ್ರಕಟಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಚಿಕ್ಕಮಗಳೂರು: ಸಹೋದ್ಯೋಗಿಗಳ ವಿರುದ್ಧ ಪಿತೂರಿ ಆರೋಪ; ಕಾನ್ಸ್‌ಟೇಬಲ್ ಅಮಾನತ್ತು
ಶಿಕ್ಷಕರನ್ನು ನಿಂದಿಸಿ ಅವಮಾನಿಸಿರುವ ಕೃತ್ಯವನ್ನು ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂದು ಅಗ್ರಹಿಸಿ ಶಾಲಾ ಮುಖ್ಯ ಶಿಕ್ಷಕ ಹನುಮಂತಯ್ಯ ಐವರು ಸಹ ಶಿಕ್ಷಕರು ಮತ್ತು ಶಾಲಾ ಎಸ್ ಡಿಎಂಸಿ ಅಧ್ಯಕ್ಷರು ಸಹಿ ಹಾಕಿರುವ ದೂರಿನಲ್ಲಿ ತಿಳಿಸಿರುತ್ತಾರೆ. ಉಪ್ಪಿನಂಗಡಿ ಪೊಲೀಸರಿಂದ ತನಿಖೆ ನಡೆಯುತ್ತಿದೆ.