ಪಾಕಿಸ್ತಾನಿ ತಾಯಿ-ಮಗಳಿಗೆ ಹೈದರಾಬಾದ್‌ನಲ್ಲಿ ತಾಲಿಬಾನ್‌ ಮಾದರಿಯ ಶಿಕ್ಷೆ; ನರಕ ತೋರಿಸಿದ ಕುಟುಂಬಸ್ಥರು

By Mahmad Rafik  |  First Published Jul 1, 2024, 1:19 PM IST

ಕುಟುಂಬವೊಂದು ತಾಯಿ-ಮಗಳಿಗೆ ತಾಲಿಬಾನ್ ಮಾದರಿಯಲ್ಲಿ ಶಿಕ್ಷೆ ನೀಡಿದೆ. ಇಬ್ಬರನ್ನು ಜೀವಂತ ಸಮಾಧಿ ಮಾಡಲು ಪ್ರಯತ್ನಿಸಿದ್ದರು.


ಹೈದರಾಬಾದ್: ಇಂದು ಆಸ್ತಿಗಾಗಿ ಹೆತ್ತವರನ್ನೇ ಕೊಲೆ ಮಾಡಿರುವ ಪ್ರಕರಣಗಳು ನಮ್ಮ ಮುಂದಿವೆ. ಆಸ್ತಿಗಾಗಿ ಪಾಕಿಸ್ತಾನ ಮೂಲದ ತಾಯಿ-ಮಗಳಿಗೆ ಕುಟುಂಬಸ್ಥರು ನರಕ ತೋರಿಸಿದ್ದಾರೆ. ತಾಯಿ-ಮಗಳಿಗೆ ತಾಲಿಬಾನ್ ಮಾದರಿಯ ಶಿಕ್ಷೆಯ ನೀಡಲಾಗಿದೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ತಾಯಿ-ಮಗಳನ್ನು ಜೀವಂತ ಸಮಾಧಿಗೆ ಕುಟುಂಬವೊಂದು ಮುಂದಾಗಿತ್ತು. ಸ್ಥಳೀಯರ ಸಮಯಪ್ರಜ್ಞೆಯಿಂದ ತಾಯಿ ಮತ್ತು ಮಗಳ ಜೀವ ಉಳಿದಿದೆ. ತಾಯಿ-ಮಗಳನ್ನು ಕೋಣೆಯಲ್ಲಿ ಕೂಡಿ ಹಾಕಿ ನಂತರ ಬಾಗಿಲು ಬಳಿ ಗೋಡೆಯನ್ನು ಕಟ್ಟಲಾಗಿತ್ತು. ವಿಷಯ ತಿಳಿದ ನೆರೆಹೊರೆಯವರು ಗೋಡೆ ಬೀಳಿಸಿ ಇಬ್ಬರನ್ನು ರಕ್ಷಣೆ ಮಾಡಿ ನಂತರ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ತಾಯಿ ಮತ್ತು ಮಗಳ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ. ಇತ್ತ ಗೋಡೆ ಕಟ್ಟಿದ್ದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. 

ಹಣಕಾಸು ವ್ಯವಹಾರಕ್ಕೆ ಯುವಕನ ಅಪಹರಣ: ಕನ್ನಡಪರ ಸಂಘಟನೆ ಅಧ್ಯಕ್ಷ ಕನ್ನಡ ಪ್ರಕಾಶ್‌ ಸೇರಿ 6 ಮಂದಿ ವಿರುದ್ಧ ಕೇಸ್‌

Tap to resize

Latest Videos

ಹೈದರಾಬಾದ್ ನಗರದ ಲತೀಫಾಬಾದ್‌ನ ಮನೆಯೊಂದರಲ್ಲಿ ಪಾಕಿಸ್ತಾನ ಮೂಲದ ತಾಯಿ ಮತ್ತು ಮಗಳನ್ನು ಜೀವಂತ ಸಮಾಧಿ ಮಾಡಲು ಪ್ರಯತ್ನಿಸಲಾಗಿತ್ತು. ಮಹಿಳೆಯ ಮೈದುನ ಸುಹೈಲ್ ಎಂಬಾತನೇ ಆಸ್ತಿಗಾಗಿ ಈ ದುಷ್ಕೃತ್ಯಕ್ಕೆ ಮುಂದಾಗಿದ್ದನು ಎಂದು ತಿಳಿದು ಬಂದಿದೆ. ಈ ಸಂಬಂಧ ಮಹಿಳೆ ನೀಡಿದ ದೂರಿನಡಿ ಪ್ರಕರಣ ದಾಖಲಿಸಿಕೊಂಡಿರು ಪೊಲೀಸರು ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. 

ಮಹಿಳೆ ಮೈದುನ ಸುಹೈಲ್ ಹಾಗೂ ಕುಟುಂಬಸ್ಥರ ವಿರುದ್ಧ ದೂರು ಸಲ್ಲಿಸಿದ್ದಾರೆ. ಆಸ್ತಿಗಾಗಿ ನಮ್ಮನ್ನು ಬಂಧಿಸಿ, ಕೋಣೆಗೆ ಗೋಡೆ ನಿರ್ಮಿಸಲಾಗಿತ್ತು. ನನ್ನ ಬಳಿಯೇ ಆಸ್ತಿಗೆ ಸಂಬಂಧಿಸಿದ ದಾಖಲೆಗಳಿವೆ. ನಮ್ಮ ಹೆಸರನ್ನು ಆಸ್ತಿಯ ದಾಖಲೆ ಪತ್ರಗಳಿಂದ ತೆಗೆದು ಹಾಕುವ ಉದ್ದೇಶದಿಂದ ಜೀವಂತ ಸಮಾಧಿಗೆ ಮುಂದಾಗಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.

ಕಿಡ್ನಾಪ್ ಪ್ರಕರಣ: ಅಪಹರಣಕ್ಕೆ ಒಳಗಾದವನೇ ಮಹಾ ವಂಚಕ! ಮೋಸ ಹೋದವರಿಂದಲೇ ಅಪಹರಣ!

click me!