ಪಂಗನಾಮ: 300 ರು. ಸರ ಖರೀದಿಸಲು ಹೋಗಿ 1 ಲಕ್ಷ ರೂ ಕಳೆದುಕೊಂಡ ಯುವತಿ!

By Kannadaprabha NewsFirst Published Jun 18, 2020, 10:03 AM IST
Highlights

300 ರು. ಸರ ಖರೀದಿಸಲು ಹೋಗಿ 1 ಲಕ್ಷ ಕಳೆದುಕೊಂಡ ಯುವತಿ!| ಆನ್‌ಲೈನ್‌ನಲ್ಲಿ ಸರ ಖರೀದಿಸಲು ಹೋದ ಯುವತಿಗೆ ಪಂಗನಾಮ

 

ಬೆಂಗಳೂರು(ಜೂ.18): ಆನ್‌ಲೈನ್‌ನಲ್ಲಿ ಮುನ್ನೂರು ರುಪಾಯಿ ಮೌಲ್ಯದ ಸರ ಖರೀದಿಸಲು ಯತ್ನಿಸಿದ ಯುವತಿಯೊಬ್ಬಳು ಸೈಬರ್‌ ವಂಚಕ ಬಲೆಗೆ ಬಿದ್ದು 1 ಲಕ್ಷ ಕಳೆದುಕೊಂಡಿದ್ದಾಳೆ. ಗಂಗೋಡನಹಳ್ಳಿ ನಿವಾಸಿ ಮೋಸಕ್ಕೊಳಗಾಗಿದ್ದು, ಕೆಲ ದಿನಗಳ ಹಿಂದೆ ಆನ್‌ಲೈನ್‌ ಶಾಪಿಂಗ್‌ ವೆಬ್‌ಸೈಟ್‌ನಲ್ಲಿ ಸರ ಖರೀದಿಗೆ ಯತ್ನಿಸಿ ಪಂಗನಾಮ ಹಾಕಿಸಿಕೊಂಡಿದ್ದಾರೆ.

ವೆಬ್‌ಸೈಟ್‌ನಲ್ಲಿ ಸರವನ್ನು ಬುಕ್‌ ಮಾಡಿದ ಸಂತ್ರಸ್ತೆ, ತನ್ನ ಮೊಬೈಲ್‌ ನಂಬರ್‌ ಮತ್ತು ವಿಳಾಸ ನಮೂದು ಮಾಡಿದ್ದರು. ಇದಾದ ಮೇಲೆ ಅಪರಿಚಿತ ವ್ಯಕ್ತಿ, ಕರೆ ಮಾಡಿ ನಿಮ್ಮ ಬುಕ್ಕಿಂಗ್‌ ಸರಿಯಿಲ್ಲ. ಅದಕ್ಕಾಗಿ ನಿಮ್ಮ ಹಣವನ್ನು ಆನ್‌ಲೈನ್‌ ಮೂಲಕ ಮರಳಿಸಲಾಗುತ್ತದೆ. ಬ್ಯಾಂಕ್‌ ಖಾತೆ ಲಿಂಕ್‌ ಆಗಿರುವ ಮೊಬೈಲ್‌ ನಂಬರ್‌ ತಿಳಿಸುವಂತೆ ಸೂಚಿಸಿದ್ದ.

ಇದನ್ನು ನಂಬಿದ ಆಕೆ, ತಮ್ಮ ನಂಬರ್‌ ಕೊಟ್ಟಿದ್ದಾರೆ. ಅದಕ್ಕೆ ಸೈಬರ್‌ ಕಳ್ಳರು ಲಿಂಕ್‌ ಕಳುಹಿಸಿದ್ದಾನೆ. ನಂತರ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ಮೊದಲು .5 ರು. ವರ್ಗಾವಣೆ ಮಾಡಿ. ಬ್ಯಾಂಕ್‌ ಖಾತೆ ಖಚಿತವಾದ ಕೂಡಲೇ .305 ರು. ವರ್ಗಾವಣೆ ಮಾಡುತ್ತೇವೆ ಎಂದಿದ್ದಾನೆ. ಅಂತೆಯೇ ಯುವತಿ, ತನ್ನ ಮೊಬೈಲ್‌ಗೆ ಬಂದ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ .5 ವರ್ಗಾವಣೆ ಮಾಡಿದ್ದಾರೆ. ಕೆಲವೇ ಕ್ಷಣದಲ್ಲಿ ದುಷ್ಕರ್ಮಿ, ಯುವತಿ ಬ್ಯಾಂಕ್‌ ಖಾತೆಯಿಂದ 1 ಲಕ್ಷ ದೋಚಿದ್ದಾನೆ ಎಂದು ಸೈಬರ್‌ ಪೊಲೀಸರು ತಿಳಿಸಿದ್ದಾರೆ.

ರಿಯಾಯಿತಿ ಹೆಸರಲ್ಲಿ ಧೋಖಾ

ಆನ್‌ಲೈನ್‌ ಶಾಂಪಿಂಗ್‌ನಲ್ಲಿ ಮತ್ತೊಬ್ಬರಿಗೆ ಸೈಬರ್‌ ವಂಚಕರು ಮೋಸ ಮಾಡಿದ್ದಾರೆ. ಪ್ರತಿಷ್ಠಿತ ಕಂಪನಿಯ ಶೇ.50 ರಿಯಾಯಿತಿ ದರದಲ್ಲಿ ಸೊಂಟದ ಬೆಲ್ಟ್‌ ಖರೀದಿಗೆ ಮುಂದಾಗಿ ಸಂಪಂಗಿ ರಾಮನಗರದ 40 ವರ್ಷದ ವ್ಯಕ್ತಿಯೊಬ್ಬರು, 25 ಸಾವಿರ ರೂ ಕಳೆದುಕೊಂಡಿದ್ದಾರೆ. ಈ ಸಂಬಂಧ ಕೇಂದ್ರ ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!