ಬೆಂಗಳೂರಿನಲ್ಲಿ KSRTC ಅಧಿಕಾರಿಯೊಬ್ಬರ ಬ್ಯಾಂಕ್ ಖಾತೆಗೆ ಕನ್ನ ಹಾಹಲಾಗಿದೆ. ಲಕ್ಷಾಂತರ ರು. ಖಾತೆಯಿಂದ ಡ್ರಾ ಮಾಡಲಾಗಿದೆ.
ಬೆಂಗಳೂರು[ಡಿ.14]: ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರ ಬ್ಯಾಂಕ್ ಖಾತೆಗೆ ಕನ್ನ ಹಾಕಿದ ಸೈಬರ್ ವಂಚಕರು, ಅಧಿಕಾರಿ ಎಟಿಎಂ ಕಾರ್ಡ್ ಬಳಸಿ 1 ಲಕ್ಷ ಹಣ ದೋಚಿರುವ ಘಟನೆ ನಡೆದಿದೆ.
ಶಾಂತಿನಗರದ ಕೆಎಸ್‌ಆರ್‌ಟಿಸಿ ಕೇಂದ್ರಿಯ ವಿಭಾಗದ ಕಿರಿಯ ಸಹಾಯಕ ಸುರೇಶ್ ಎಂಬುವರೇ ವಂಚನೆಗೊಳಗಾಗಿದ್ದು, ಎರಡು ದಿನಗಳ ಹಿಂದೆ ಯಲಹಂಕದ ಕೋಗಿಲು ಕ್ರಾಸ್ ಸಮೀಪ ಎಟಿಎಂ ಕಾರ್ಡ್ ಬಳಿಸಿ ದುಷ್ಕರ್ಮಿಗಳು ಹಣ ಪಡೆದಿದ್ದಾರೆ. ಈ ಬಗ್ಗೆ ಬಾಗಲುಗುಂಟೆ ಠಾಣೆಯಲ್ಲಿ ಗುರುವಾರ ಸುರೇಶ್ ದೂರು ದಾಖಲಿಸಿದ್ದಾರೆ.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಶಾಂತಿನಗರದ ಕೆ.ಎಚ್.ರಸ್ತೆಯ ಕಾರ್ಪೋರೇಶನ್ ಬ್ಯಾಂಕ್‌ನಲ್ಲಿ ಸುರೇಶ್ ಖಾತೆ ಹೊಂದಿದ್ದಾರೆ. ಇದೇ ವರ್ಷದ ಆಗಸ್ಟ್‌ನಲ್ಲಿ ದಿನವೊಂದಕ್ಕೆ ಒಂದು ಲಕ್ಷ ಹಣವನ್ನು ಡ್ರಾ ಮಾಡುವ ವಿಶೇಷ ಸೌಲಭ್ಯ ಪಡೆದಿದ್ದರು. ಗೃಹ ಸಾಲ ಪಡೆದಿದ್ದ ಅವರು, ತಮ್ಮ ಖಾತೆಯಲ್ಲಿ 5,79,985 ರು. ನಗದು ಹೊಂದಿದ್ದರು.
ಬುಧವಾರ ಸುರೇಶ್ ಅವರ ಬ್ಯಾಂಕ್ ಖಾತೆಗೆ ಕನ್ನ ಹಾಕಿದ ದುಷ್ಕರ್ಮಿಗಳು, ಡಿ.11 ರಂದು ಸಂಜೆ 4.54ರಲ್ಲಿ ಕೋಗಿಲು ಕ್ರಾಸ್‌ನಲ್ಲಿರುವ ಕಾರ್ಪೋರೇಷನ್ ಬ್ಯಾಂಕ್ ಎಟಿಎಂ ಮೂಲಕ ಹಣ ಡ್ರಾ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.