
ಬೆಂಗಳೂರು [ಜ.10]: ಬೆಂಗಳೂರು ಪೊಲೀಸ್ ಆಯುಕ್ತರ ಹೆಸರಿನಲ್ಲಿ ವಂಚನೆ ಮಾಡಿರುವ ಪ್ರಕರಣ ಒಂದು ಬೆಳಕಿಗೆ ಬಂದಿದೆ. ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೆಸರಿನಲ್ಲಿ ದೋಖಾ ಮಾಡಲಾಗಿದೆ.
ವ್ಯವಸ್ಥಿತ ಓಎಲ್ಎಕ್ಸ್ ಸ್ಕ್ಯಾಮ್ ಆಗಿದ್ದು, ಭಾಸ್ಕರ್ ರಾವ್ ಹೆಸರು ಹೇಳಿ ಸಾವಿರಾರು ರೂಪಾಯಿ ವಂಚನೆ ಮಾಡಲಾಗಿದೆ. ಬೇಕಾದ ವಸ್ತುಗಳ ಖರೀದಿ ಮತ್ತು ಮಾರಾಟದ ನೆಪದಲ್ಲಿ ongc ನಿವೃತ್ತ ಜಿಎಂ ಶ್ರೀಧರ್ ಎನ್ನುವವರಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೆಸರಿನಲ್ಲಿ OLX ನಲ್ಲಿ ದೋಖಾ ಮಾಡಲಾಗಿದೆ.
ಬೆಂಗಳೂರಿನ ಆರಕೆರೆ ನಿವಾಸಿ ಶ್ರೀಧರ್ ಮನೆಯಲ್ಲಿದ್ದ ಟ್ರೇಡ್ಮಿಲ್ ಮಾರಾಟ ಮಾಡಲು ಮುಂದಾಗಿದ್ದರು. OLXಲ್ಲಿ ಟ್ರೇಡ್ಮಿಲ್ ಪೋಟೊ ಹಾಕಿ ಮಾಹಿತಿ ಹಾಕಿದ್ದರು. ಈ ವೇಳೆ ಓರ್ವ ವ್ಯಕ್ತಿ ತಾನು ಟ್ರೇಡ್ಮಿಲ್ ಖರೀದಿಗೆ ಯತ್ನಿಸಿದ್ದು, ತನ್ನ ನಂಬರ್ ಕೂಡ ಕೊಟ್ಟಿದ್ದಾನೆ.
ದೇಶದಲ್ಲಿ ದಿನಕ್ಕೆ 80 ಕೊಲೆ, 289 ಕಿಡ್ನ್ಯಾಪ್, 91 ರೇಪ್!...
ಈ ವೇಳೆ ತಾನು ಬೆಂಗಳೂರು ನಗರದ ಹಿರಿಯ ಅಧಿಕಾರಿ. ತನ್ನ ಜೊತೆ ಗೌರವಯುತವಾಗಿ ಮಾತಾಡಿ ಎಂದು, ಟ್ರೇಡ್ಮಿಲ್ ತೆಗೆದುಕೊಳ್ಳುತ್ತೇನೆ ಎಂದು ಒಪ್ಪಿಗೆ ಕೊಟ್ಟಿದ್ದ. ಟ್ರೂ ಕಾಲರ್ ನಲ್ಲಿ ಭಾಸ್ಕರ್ ರಾವ್ IPS ಎಂದು ಹೆಸರು ನಮೂದು ಮಾಡಿದ್ದ. ಆತನ ಪೋನ್ ಡಿಪಿಯಲ್ಲಿ ಕಮೀಷನರ್ ಭಾಸ್ಕರ್ ರಾವ್ ಪೋಟೊ ಹಾಕಿದ್ದ.
ಶ್ರೀಧರ್ ಈತನ ಬಳಿ ಗೂಗಲ್ ಪೇಯಲ್ಲಿ ಹಣ ಹಾಕಲು ತಿಳಿಸಿದ್ದು, ವೇಳೆ ಆತ ಕ್ಯೂ ಆರ್ ಕೋಡ್ ಒಂದನ್ನು ಕಳಿಸಿದ್ದ. ಈ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಲು ತಿಳಿಸಿದ್ದು, ಇದನ್ನು ಸ್ಕ್ಯಾನ್ ಮಾಡಿದಾಗ 49 ಸಾವಿರ ರು. ಖಾತೆಯಿಂದ ಹೋಗಿದೆ. ಬಳಿಕ ಫೋನ್ ಸ್ವಿಚ್ ಆಫ್ ಮಾಡಿದ್ದಾನೆ.
ಫೇಸ್‌ಬುಕ್‌ನಲ್ಲಿ ಹುಡುಗಿ ಎಂದು ಚಾಟ್ ಮಾಡಿದ್ರೆ ಬೀಳುತ್ತೆ ಪಂಗನಾಮ!...
ಈತನ ವಂಚನೆ ಅರಿತ ಶ್ರೀದರ್ ಕಮೀಷನರ್ ಹೆಸರಲ್ಲಿ ವಂಚನೆ ಮಾಡಿದ್ದಾಗಿ HSR ಲೇ ಔಟ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದೀಗ ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆ ಇಳಿದಿದ್ದಾರೆ.
ಹರಿಯಾಣದಿಂದ ಕರೆ ಮಾಡಿ ವಂಚಿಸಿರುವ ಬಗ್ಗೆ ಸದ್ಯ ಮಾಹಿತಿ ತಿಳಿದು ಬಂದಿದ್ದು, ವಂಚಕರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ