
ಚಿಕ್ಕಮಗಳೂರು (ಜೂ.26) : ಶಾರ್ಟ್ ಸರ್ಕ್ಯೂಟ್ ನಿಂದ ಓಮಿನಿ ಕಾರೊಂದು ನಡುರಸ್ತೆಯಲ್ಲಿ ಹೊತ್ತಿ ಉರಿದ ಘಟನೆ ಚಿಕ್ಕಮಗಳೂರು ತಾಲ್ಲೂಕು, ಆಲ್ದೂರು ಸಮೀಪದ ದೊಡ್ಡನಗುಡ್ಡದಲ್ಲಿ ನಡೆದಿದೆ.
ಓಮಿನಿ ಕಾರೊಂದು ಶಾರ್ಟ್ ಸರ್ಕ್ಯೂಟ್ ನಿಂದ ನಡುರಸ್ತೆಯಲ್ಲಿಯೇ ಹೊತ್ತಿ ಉರಿದಿದೆ. ಕಾಫಿ ಎಸ್ಟೇಟ್‌ವೊಂದಕ್ಕೆ ಕಳೆ ತೆಗೆಯಲೆಂದು ಯಂತ್ರಗಳ ಸಮೇತ ಓಮಿನಿ ಕಾರಿನಲ್ಲಿ ಏಳು ಮಂದಿ ಪ್ರಯಾಣಿಸಿತ್ತಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ದೊಡ್ಡನಗುಡ್ಡ ಬಳಿ ಏಕಾಏಕಿ ಕಾರಿನೊಳಗೆ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಕಾರಿನ ತುಂಬಾ ಆವರಿಸಿಕೊಂಡಿದೆ.
25 ಪ್ರಯಾಣಿಕರ ಹೊತ್ತು ಸಾಗುತ್ತಿದ್ದ ಖಾಸಗಿ ಬಸ್ ಬೆಂಕಿಗಾಹುತಿ, ಹೆದ್ದಾರಿಯಲ್ಲೇ ದುರ್ಘಟನೆ!
ಕಾರಿನಲ್ಲಿದ್ದ ಏಳು ಮಂದಿ ಹೊರನಗೆದು ಜೀವ ಉಳಿಸಿಕೊಂಡಿದ್ದಾರೆ. ಕಾರು ಮತ್ತು ಕಾರಿನ ಮೇಲೆ ಇರಿಸಿದ್ದ ನಾಲ್ಕೈದು ಕಳೆ ತೆಗೆಯುವ ಯಂತ್ರಗಳು ಸೇರಿ ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಲು ಪ್ರಯತ್ನಸಿದ್ದು, ಕಾರು ಅಷ್ಟೊತ್ತಿಗಾಗಲೇ ಸಂಪೂರ್ಣ ಸುಟ್ಟು ಕರಕಲಾಗಿದೆ.
ಕಾರು ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರನ ಕುಟುಂಬಕ್ಕೆ 24.90 ಲಕ್ಷರೂ. ಪರಿಹಾರಕ್ಕೆ ಆದೇಶ
ಚಿಕ್ಕೋಡಿ: ರಸ್ತೆ ಅಪಘಾತದಲ್ಲಿ ಮೃತಪಟ್ಟವ್ಯಕ್ತಿಯ ಕುಟುಂಬಕ್ಕೆ ವಿಮಾ ಕಂಪನಿ . 24.90 ಲಕ್ಷ ಪರಿಹಾರ ನೀಡುವಂತೆ ಚಿಕ್ಕೋಡಿ ನ್ಯಾಯಾಲಯ ಆದೇಶಿಸಿದೆ.
2020ರಲ್ಲಿ ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ ರಾಹುಲ್ ಜಾಧವ ಪತ್ನಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಶೇಡಬಾಳ ಕಡೆಯಿಂದ ಕಾಗವಾಡ ಕಡೆಗೆ ಬರುವಾಗ ಕಾರು ಮತ್ತು ದ್ವಿಚಕ್ರ ವಾಹನ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ರಾಹುಲಾ ಜಾಧವ ಸ್ಥಳದಲ್ಲೇ ಮೃತಪಟ್ಟಿದ್ದರು.
ಉಡುಪಿಯಲ್ಲಿ ಅಪಘಾತ ಹೆಚ್ಚಳ : ಪ್ರತಿ ಮೂರು ದಿನಕ್ಕೆ ಇಬ್ಬರ ಸಾವು
ಗಂಭೀರ ಗಾಯಗೊಂಡಿದ್ದ ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಮೃತನ ಕುಟುಂಬ ಸೂಕ್ತ ಪರಿಹಾರ ಕೋರಿ ಚಿಕ್ಕೋಡಿ ನ್ಯಾಯಾಲಯದ ಮೋರೆ ಹೋಗಿದ್ದು, ನ್ಯಾಯಾಧೀಶ ಟಿ.ಶ್ರೀಕಾಂತ ಅವರು ಪ್ರಕರಣದ ವಿಚಾರಣೆ ನಡೆಸಿ ವಿಮಾ ಕಂಪನಿಯಿಂದ ಮೃತನ ಕುಟುಂಬಕ್ಕೆ . 24.90 ಪರಿಹಾರ ಘೋಷಿಸಿ ಆದೇಶ ನೀಡಿದ್ದಾರೆ.
ಅರ್ಜಿದಾರರ ಪರ ನ್ಯಾಯವಾದಿ ಮುದ್ದಸರ ಜಮಾದಾರ ವಕಾಲತ್ತು ವಹಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ