ಫಲಿಸದ ವೇದಿಕಾ ಠಾಕೂರ್‌ ಹೋರಾಟ, ಬಿಜೆಪಿ ನಾಯಕ ಪ್ರಿಯಾಂಶ್‌ ವಿರುದ್ಧ ಕೊಲೆ ಕೇಸ್‌!

Published : Jun 26, 2023, 07:53 PM IST
ಫಲಿಸದ ವೇದಿಕಾ ಠಾಕೂರ್‌ ಹೋರಾಟ,  ಬಿಜೆಪಿ ನಾಯಕ ಪ್ರಿಯಾಂಶ್‌ ವಿರುದ್ಧ ಕೊಲೆ ಕೇಸ್‌!

ಸಾರಾಂಶ

ಬಿಜೆಪಿ ನಾಯಕನಿಂದ ಗುಂಡೇಟು ತಿಂದಿದ್ದ ವೇದಿಕಾ ಠಾಕೂರ್‌ ಸತತ 10 ದಿನಗಳ ಜೀವನ್ಮರಣ ಹೋರಾಟದ ಬಳಿಕ ಸೋಲು ಕಂಡಿದ್ದಾರೆ. ಬಿಜೆಪಿ ನಾಯಕ ಪ್ರಿಯಾಂಶ್‌ ವಿಶ್ವಕರ್ಮ ತಮ್ಮ ಕಚೇರಿಯಲ್ಲಿ ಈಕೆಯ ಮೇಲೆ ಗುಂಡು ಹಾರಿಸಿದ್ದರು. ವೇದಿಕಾ ಸಾವಿನ ಬೆನ್ನಲ್ಲಿಯೇ ಪ್ರಿಯಾಂಶ್‌ ವಿರುದ್ಧ ಪೊಲೀಸರು ಕೊಲೆ ಕೇಸ್‌ ದಾಖಲು ಮಾಡಿದ್ದಾರೆ.  

ಭೋಪಾಲ್‌ (ಜೂ.26): ಈ ವರ್ಷ ಚುನಾವಣೆಗೆ ಇಳಿಯಲಿರುವ ಮಧ್ಯಪ್ರದೇಶ ರಾಜ್ಯದಲ್ಲಿ ಬಿಜೆಪಿಗೆ ಮುಜುಗರಕ್ಕೆ ಈಡಾಗುವ ಸುದ್ದಿ ಸಿಕ್ಕಿದೆ. ಬಿಜೆಪಿ ನಾಯಕ ಪ್ರಿಯಾಂಶ್‌ ವಿಶ್ವಕರ್ಮನಿಂದ ಗುಂಡೇಟು ತಿಂದು ಕಳೆದ 10 ದಿನಗಳಿಂದ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದ ವೇದಿಕಾ ಠಾಕೂರ್‌ ಸೋಮುವಾರ ಸಾವು ಕಂಡಿದ್ದಾರೆ. ಅದರೊಂದಿಗೆ ಸೆನ್ಸೇಷನಲ್‌ ಪ್ರಕರಣ ಕೊಲೆ ಪ್ರಕರಣವಾಗಿ ಬದಲಾಗಿದೆ. ಕಳೆದ 10 ದಿನಗಳಿಂದ ವೇದಿಕಾ ಠಾಕೂರ್‌ ಲೈಫ್‌ ಸಪೋರ್ಟ್‌ನಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜೂನ್‌ 16 ರಂದು ಈಕೆಯ ಮೇಲೆ ಪ್ರಿಯಾಂಶ್‌ ವಿಶ್ವಕರ್ಮ ಗುಂಡಿನ ದಾಳಿ ನಡೆಸಿದ್ದ. ಆಸ್ಪತ್ರೆಯಿಂದ ಅಧಿಕೃತವಾಗಿ ವೇದಿಕಾ ಠಾಕೂರ್‌ ಸಾವಿನ ಸುದ್ದಿ ಪ್ರಕಟವಾಗುತ್ತಿದ್ದಂತೆ ಈ ಕುರಿತಾದ ಮಾಹಿತಿಯನ್ನು ಪೊಲೀಸರಿಗೆ ನೀಡಲಾಗಿತ್ತು.  ಹೆಚ್ಚುವರಿ ಎಸ್ಪಿ ಸಂಜಯ್ ಅಗರ್ವಾಲ್ ಅವರು ವೇದಿಕಾ ಸಾವಿನ ನಂತರ ಈಗ ಸೆಕ್ಷನ್ 307 ಅನ್ನು ಸೆಕ್ಷನ್ 302ಕ್ಕೆ ಏರಿಸಲಾಗುವುದು ಎಂದು ಹೇಳಿದ್ದಾರೆ. ತನ್ನ ಕಚೇರಿಯಲ್ಲಿಯೇ ವೇದಿಕಾ ಠಾಕೂರ್‌ ಮೇಲೆ ಪ್ರಿಯಾಂಶ್‌ ಗುಂಡು ಹಾರಿಸಿದ್ದ, ಇದು ವೇದಿಕಾ ಅವರ ಹೊಟ್ಟೆ ಹಾಗೂ ಬೆನ್ನುಹುರಿಗೆ ತಗುಲಿತ್ತು.

ವೇದಿಕಾ ಸಾವಿನ ನಂತರ, ವೈದ್ಯರು ಬುಲೆಟ್ ಅನ್ನು ಪೋಸ್ಟ್‌ಮಾರ್ಟಮ್ ಮಾಡಿ ಹೊರತೆಗೆದಿದ್ದಾರೆ. ಈ ಬುಲೆಟ್‌ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು ಹೆಚ್ಚಿನ ತನಿಖೆಗಾಗಿ ಎಫ್‌ಎಸ್‌ಎಲ್ ತಂಡಕ್ಕೆ ಕಳುಹಿಸಿದ್ದಾರೆ. ಇದೀಗ ವೇದಿಕಾ ಅವರ ಹೊಟ್ಟೆಯಲ್ಲಿ ಪತ್ತೆಯಾದ ಗುಂಡು ಪ್ರಿಯಾಂಶ್ ಬಳಿಯಿದ್ದ ಪಿಸ್ತೂಲ್‌ನಿಂದ ಹೊರಬಂದ ಗುಂಡಾಗಿತ್ತೇ ಎನ್ನುವ ಬಗ್ಗೆ ತಜ್ಞರು ತಿಳಿಸಲಿದ್ದಾರೆ.

ಗುಂಡು ಹಾರಿ ಆಕೆಯನ್ನು ಕೊಲ್ಲಲಾಗಿದೆಯೇ ಅಥವಾ ಇದರ ಹಿಂದೆ ಯಾವುದಾದರೂ ಸಂಚಿದೆಯೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ. ಯಾಕಾಗಿ ಪ್ರಿಯಾಂಶ್‌ ವಿಶ್ವಕರ್ಮ ಆಕೆಗೆ ಗುಂಡು ಹಾರಿಸಿದ್ದ ಎನ್ನುವುದು ಕೂಡ ಈವರೆಗೂ ಸ್ಪಷ್ಟವಾಗಿಲ್ಲ. ಇಂತಹ ಪ್ರಕರಣದ ಮೇಲೆ ನಿರಂತರ ನಿಗಾ ಇಡುವುದಲ್ಲದೆ, ಸಕಾಲದಲ್ಲಿ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಸಾಕ್ಷ್ಯ ಮತ್ತು ಸಾಕ್ಷಿಗಳನ್ನು ಹಾಜರುಪಡಿಸುವ ಮೂಲಕ ಆರೋಪಿಗಳಿಗೆ ಶಿಕ್ಷೆ ವಿಧಿಸಲು ಬಲವಾದ ಪ್ರಯತ್ನಗಳನ್ನು ಮಾಡಬೇಕಾಗಿರುತ್ತದೆ.

ಬಿಲ್ಡರ್‌ ಕೂಡ ಆಗಿರುವ ಬಿಜೆಪಿ ನಾಯಕ ಪ್ರಿಯಾಂಶ್ ವಿಶ್ವಕರ್ಮ ಅವರ ಕಚೇರಿಯಲ್ಲಿನ ಸಿಸಿಟಿವಿ ಮತ್ತು ಡಿವಿಆರ್ ಆಫ್‌ ಆಗಿರುವುದು ಸಹ ಬಹಿರಂಗವಾಗಿದೆ, ಹೀಗಾಗಿ ಪೊಲೀಸರ ಕೊನೆಯ ಭರವಸೆ ಸರ್ವರ್ ಕಂಪನಿಯ ಮೇಲಿದೆ, ಹೀಗಾಗಿ ಜಬಲ್‌ಪುರ ಪೊಲೀಸರು ಸರ್ವರ್ ಕಂಪನಿಗೆ ಪತ್ರ ಬರೆದಿದ್ದು, ಸಿಸಿಟಿವಿ ವಿಡಿಯೋ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ. ಸದ್ಯ ಪ್ರಿಯಾಂಶ್ ವಿಶ್ವಕರ್ಮ ಜೈಲಿನಲ್ಲಿದ್ದು, ಈಗ ಅವರ ಸಂಕಷ್ಟಗಳು ಹೆಚ್ಚಾಗಲಿವೆ. ಮತ್ತೊಂದೆಡೆ, ವೇದಿಕಾ ಠಾಕೂರ್ ಸಂಬಂಧಿಕರು ಮೊದಲಿನಿಂದಲೂ ಪೊಲೀಸರ ಪಾತ್ರವನ್ನು ಪ್ರಶ್ನಿಸುತ್ತಿದ್ದಾರೆ. ಈಗ ವೇದಿಕಾ ಸಾವಿನ ನಂತರವೂ ಅವರ ಕೋಪ ಇನ್ನಷ್ಟು ಹೆಚ್ಚಾಗಿದೆ.

ಬಿಳಿ ಬಿಕಿನಿಯಲ್ಲಿ ವೇದಿಕಾ ಮಾದಕ ಪೋಸ್; 'ಶಿವಲಿಂಗ' ನಟಿ ಸಖತ್ ಹಾಟ್

ಪ್ರಿಯಾಂಶ್‌ ವಿಶ್ವಕರ್ಮ ಪ್ರಭಾವಿ ವ್ಯಕ್ತಿ, ಆ ಕಾರಣದಿಂದಾಗಿ ಪೊಲೀಸರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ವೇದಿಕಾ ಠಾಕೂರ್‌ ಕುಟುಂಬದವರು ಆರೋಪಿಸಿದ್ದಾರೆ. ಇದರ ನಡುವೆ ವೇದಿಕಾ ಅವರ ಮೃತದೇಹವನ್ನು ಅಂತಿಮ ವಿಧಿವಿಧಾನಗಳಿಗೆ ಕೊಂಡೊಯ್ಯಲಾಗಿದೆ.  ವೇದಿಕಾ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಅವರು ಟ್ವಿಟ್ಟರ್‌ನಲ್ಲಿ ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಹಾಗೂ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ವಿರುದ್ಧ ಹರಿಹಾಯ್ದಿದ್ದಾರೆ. 

ಪಿಂಕ್ ಬಿಕಿನಿಯಲ್ಲಿ ಮಿಂಚಿದ ಶಿವಲಿಂಗ ಬ್ಯೂಟಿ; ವೇದಿಕಾ ಹಾಟ್ ಲುಕ್ ವೈರಲ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ