ಸೋಶಿಯಲ್ ಮೀಡಿಯಾದಲ್ಲಿ ನಟಿಯ ಬೆತ್ತಲೆ ದೃಶ್ಯ/ ವೆಬ್ ಸೀರಿಸ್ ಗಾಗಿ ಶೂಟ್ ಮಾಡಿದ್ದರು/ ಅನುಮತಿ ಇಲ್ಲದೆ ಹಾಕಿದ್ದಾರೆ/ ನನ್ನ ಬಳಿ ಎರಡು ಲಕ್ಷ ರೂ. ಸುಲಿಗೆ ಮಾಡಲಾಗಿದೆ.
ಮುಂಬೈ(ಆ. 21) ವೆಬ್ ಸೀರಿಸ್ ನಲ್ಲಿ ಅಭಿನಯಿಸಿದ್ದ 20 ವರ್ಷದ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಓಟಿಟಿ ಆಪ್ ಮುಖ್ಯಸ್ಥರೊಬ್ಬರ ವಿರುದ್ಧ ಮೊಕದ್ದಮೆ ದಾಖಲಿಸಿದ್ದು ಪರಿಹಾರ ನೀಡುವಂತೆ ಕೇಳಿಕೊಂಡಿದ್ದಾರೆ.
ಶೂಟ್ ಮಾಡಿದ್ದ ಬೆತ್ತಲೆ ದೃಶ್ಯಗಳನ್ನು ನನ್ನ ಅನುಮತಿ ಇಲ್ಲದೆ ಸೋಶಿಯಲ್ ಮೀಡಿಯಾ ಫ್ಲಾಟ್ ಫಾರ್ಮ್ ಗೆ ಹಾಕಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು ಎಂದು ಒತ್ತಾಯ ಮಾಡಿದ್ದಾರೆ.
undefined
ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ವಿಹಾರ್ ಫಾರ್ಮ್ ಹೌಸ್ ನಲ್ಲಿ ಶೂಟಿಂಗ್ ನಡೆದಿದ್ದು. ಪ್ರಕರಣಕ್ಕೆ ಸಂಬಂಧಿಸಿ ಐದು ಜನರ ಮೇಲೆ ದೂರು ದಾಖಲಾಗಿದ್ದು ಇಲ್ಲಿಯವರೆಗೆ ಯಾರನ್ನು ಬಂಧಿಸಲಾಗಿಲ್ಲ. ಅಂಧೇರಿ ಮೂಲದ ಮಹಿಳೆ ಒಶ್ವಿರಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಕೇಸ್ ಅನ್ನು ವಿಹಾರ್ ಪೊಲೀಸರಿಗೆ ವರ್ಗಾವಣೆ ಮಾಡಲಾಗಿದೆ.
ಅಬ್ಬಬ್ಬಾ ಪೂನಂ ಪಾಂಡೆಯ ಬೆತ್ತಲೆ ಅವತಾರ
ವೆಬ್ ಸೀಸಿರಸ್ ನಲ್ಲಿ ನಟನೆ ಮಾಡಿದರೆ ಮುಂದೆ ಸಿನಿಮಾದಲ್ಲಿ ಅವಕಾಶ ಸಿಗುತ್ತದೆ ಎಂಬ ಕಾರಣಕ್ಕೆ ಮಹಿಳೆ ಒಪ್ಪಿಕೊಂಡಿದ್ದರು. ಮಾರ್ಚ್ 6 ರಂದು ಶೂಟಿಂಗ್ ಗೆ ತೆರಳಿದಾಗ ಅಲ್ಲಿ ಕೆಲ ನ್ಯೂಡ್ ಸೀನ್ ಗಳನ್ನು ತೆಗೆದುಕೊಳ್ಳಲಾಯಿತು. ಇದನ್ನು ಯಾವ ಕಾರಣಕ್ಕೂ ಸೀರಿಸ್ ಗೆ ಮುನ್ನ ಬಿಡುಗಡೆ ಮಾಡಲ್ಲ, ಪ್ರಚಾರಕ್ಕೆ ಬಳಸಿಕೊಳ್ಳಲ್ಲ ಎಂದು ನಿರ್ಮಾಪಕರು ಆ ವೇಳೆ ಮಾತು ಕೊಟ್ಟಿದ್ದರು.
ಆದರೆ ಪ್ರಚಾರದ ದೃಷ್ಟಿಯಿಂದ ಅದೇ ದೃಶ್ಯ ಹರಿಯಬಿಟ್ಟು ಅದು ಎಲ್ಲ ಕಡೆ ವೈರಲ್ ಆಗಿತು. ನಾನು ಅವನ್ನು ಡಿಲೀಟ್ ಮಾಡಿ ಎಂದಾಗ ನನ್ನ ಬಳಿಯೇ ಎರಡು ಲಕ್ಷ ರೂ. ಗೆ ಬೇಡಿಕೆ ಇಟ್ಟರು. ನಾನು ಹಣ ಕೊಟ್ಟ ಮೇಲೆಯೂ ಡಿಲೀಟ್ ಮಾಡಿಲ್ಲ. ಇದೀಗ ಅನಿವಾರ್ಯವಾಗಿ ಪೊಲೀಸರ ಮೊರೆ ಹೋಗಿದ್ದೇನೆ ಎಂದು ನಟಿ ತಿಳಿಸಿದ್ದಾರೆ.