ಸಹಚರರನ್ನು ಬಳಸಿ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ಕಿರಾತಕ/ ಪೊಲೀಸ್ ಎನ್ ಕೌಂಟರ್ ಗೆ ಬಲಿ/ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಅಪಾರ್ಟ್ ಮೆಂಟ್ ನಲ್ಲಿ ಅಡಗಿ ಕುಳಿತಿದ್ದ
ನವದೆಹಲಿ ( ಮಾ. 28) ಕುಖ್ಯಾತ ಗೋಗಾ ಗ್ಯಾಂಗ್ ಗೆ ಸೇರಿದ ನಟೋರಿಯಸ್ ಕ್ರಿಮಿನಲ್ ಪೊಲೀಸರ ಗುಂಡಿಗೆ ಹತನಾಗಿದ್ದಾನೆ. ಭಾನುವಾರ ಬೆಳಿಗ್ಗೆ ದೆಹಲಿ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ. ಎರಡು ದಿನಗಳ ಹಿಂದೆ ಈತ ಆಸ್ಪತ್ರೆಯಿಂದ ಪರಾರಿಯಾಗಿದ್ದ.
ಮಾರ್ಚ್ 25 ರಂದು ಕುಲದೀಪ್ ಫಜ್ಜಾ ಜಿಟಿಬಿ ಆಸ್ಪತ್ರೆಯಿಂದ ಪರಾರಿಯಾಗಿದ್ದು, ರೋಹಿಣಿಯ ಸೆಕ್ಟರ್ 14 ರ ಫ್ಲ್ಯಾಟ್‌ನಲ್ಲಿ ಅಡಗಿಕೊಂಡಿದ್ದ ಮಾಹಿತಿ ಬಂದಿತ್ತು. ಗುಂಡಿನ ಚಕಮಕಿ ನಡೆದಿದ್ದು ಈತನನ್ನು ಆಸ್ಪತ್ರೆಗೆ ಸಾಗಿಸುವ ಯತ್ನ ಮಾಡಿದರೂ ಹತನಾದ.
ಮೇಲ್ಸೇತುವೆ ಕುಸಿತ; ಮೂವರು ಕಾರ್ಮಿಕರ ಸ್ಥಿತಿ ಗಂಭೀರ
ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಪರಾರಿಯಾಗಲು ಈತನಿಗೆ ಸಹಚಚರು ಸಹಾಯ ಮಾಡಿದ್ದರು. ಗುರುವಾರ ಪೊಲೀಸರು ಮತ್ತು ಗ್ಯಾಂಗ್ ನಡುವೆ ಸರ್ಕಾರಿ ಆಸ್ಪತ್ರೆಯಲ್ಲೇ ಗುಂಡಿನ ಚಕಮಕಿ ನಡೆದಿತ್ತು.
ಪೊಲೀಸರ ಮೇಲೆ ಖಾರದ ಪುಡಿ ಎರಚಿದ ತಂಡ ದಾಳಿಗೆ ಮುಂದಾಗಿತ್ತು. ಪೊಲೀಸರು ಘಟನೆಯಲ್ಲಿ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿದ್ದ ಜನರು ತಪ್ಪಿಸಿಕೊಳ್ಳುವ ವೇಳೆ ಆಸ್ಪತ್ರೆಯ ಸಿಬ್ಬಂದಿ ಒಬ್ಬರು ಸಾವನ್ನಪ್ಪಿದ್ದರು.
ಆರೋಪಿ ವಾಯುವ್ಯ ದೆಹಲಿಯ ರೋಹಿಣಿಯ ಫ್ಲ್ಯಾಟ್‌ನಲ್ಲಿ ತಲೆಮರೆಸಿಕೊಂಡಿದ್ದ ಮಾಹಿತಿ ಸಿಕ್ಕಿತ್ತು. ಪೊಲೀಸರು ಆತನನ್ನು ಪತ್ತೆ ಹಚ್ಚಿ, ಕಟ್ಟಡವನ್ನು ಸುತ್ತುವರೆದು ಶರಣಾಗುವಂತೆ ಹೇಳಿದರು. ಆದರೆ, ಆತ ಪೊಲೀಸರ ಮೇಲೆ ಗುಂಡು ಹಾರಿಸಿದ. ಈ ವೇಳೆ ನಡೆದ ದಾಳಿಯಲ್ಲಿ ಹತನಾಗಿದ್ದಾನೆ. ಕಳೆದ ವರ್ಷ ಫಜ್ಜಾ ನನ್ನು ಬಂಧಿಸಿ ಕರೆತರಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಇನ್ನಿಬ್ಬರನ್ನು ಬಂಧಿಸಲಾಗಿದೆ.