
ಬೆಂಗಳೂರು(ಜ.10): ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ತಂಗಿ ಎಂದು ಹೇಳಿಕೊಂಡು ವೈದ್ಯೆಯೊಬ್ಬರ ಬಳಿ 2.52 ಕೋಟಿ ಹಣ ಮತ್ತು 2 ಕೆ.ಜಿ. 350 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿ, ಬೆದರಿಕೆ ಹಾಕಿರುವ ಆರೋಪದಡಿ ದಾಖಲಾಗಿರುವ ಎಫ್‌ಐಆರ್ ಸಂಬಂಧ ಆರೋಪಿಗಳಾದ ಐಶ್ವರ್ಯಾ ಗೌಡ ಮತ್ತು ಆಕೆಯ ಪತಿ ಕೆ.ಎನ್.ಹರೀಶ್ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ರಾಜೇಶ್ವರಿನಗರ ಪೊಲೀಸರಿಗೆ ಹೈಕೋರ್ಟ್ ಸೂಚಿಸಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧ ರಾಜ ರಾಜೇಶ್ವರಿ ಠಾಣೆಯಲ್ಲಿ ಎರಡನೇ ದಾಖಲಾ ಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಐಶ್ವರ್ಯಾ ಗೌಡ ಮತ್ತು ಆಕೆಯ ಪತಿ ಕೆ.ಎನ್.ಹರೀಶ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಆರ್.ಕೃಷ್ಣಮೂರ್ತಿ ಅವರ ಪೀಠ ಈ ಆದೇಶ ಮಾಡಿದೆ. ಕೆಲ ಕಾಲ ಅರ್ಜಿದಾರರ ಪರ ವಾದ ಆಲಿ ಸಿದ ನ್ಯಾಯಪೀಠ, ಅರ್ಜಿಯ ಮುಂದಿನ ವಿಚಾರಣೆ ವರೆಗೂ ಪೊಲೀಸರು ಅರ್ಜಿದಾ ರರ ಪರ ಯಾವುದೇ ಬಲವಂತದ ಕ್ರಮ ಕೈ ಗೊಳ್ಳಬಾರದು ಎಂದು ಸೂಚಿಸಿದೆ. ಅಲ್ಲದೆ, ಪ್ರತಿವಾದಿಗಳಾಗಿ ರುವ ಆರ್.ಆರ್.ನಗರ ಠಾಣೆಯ ಪೊಲೀಸರು ಮತ್ತು ದೂರುದಾರೆ ಡಾ| ಮಂಜುಳಾ ಎ.ಪಾಟೀಲ್‌ಗೆ ನೋಟಿಸ್ ಜಾರಿಗೊಳಿಸಿ, ಅರ್ಜಿ ಕುರಿತು ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ.
ಡಿಕೆ ಬ್ರದರ್ಸ್ ಹೆಸರೇ ಬಂಡವಾಳ, ಶ್ರೀಮಂತರಿಗೆ ಗಾಳ: ಬಗೆದಷ್ಟು ಬಯಲಾಗ್ತಿದೆ ಐಶ್ವರ್ಯ ವಂಚನೆ ಪುರಾಣ
ಡಾ| ಮಂಜುಳಾ ಎ.ಪಾಟೀಲ್ ಅವರು ದೂರು ನೀಡಿ, ಗೋಲ್ಡ್ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿದರೆ ಒಳ್ಳೆಯ ಲಾಭ ಬರಲಿದೆ ಎಂದು ತಿಳಿಸಿ 2022ರ ಮಾರ್ಚ್ ನಿಂದ 2024ರ ಡಿಸೆಂಬರ್ ವರೆಗೆ ವಿವಿಧ ಹಂತಗಳಲ್ಲಿ ನನ್ನಿಂದ ₹2.52 2.2.350 ಗ್ರಾಂ ಚಿನ್ನಾಭರಣ ಪಡೆದ ಐಶ್ವರ್ಯಾ ಗೌಡ ಮತ್ತು ಆಕೆ ಪತಿ ಹರೀಶ್ ನಂತರ ವಾಪಾಸ್ ಹಣ ಹಾಗೂ ಚಿನ್ನ ಹಿಂದಿರು ಗಿಸದೆ ವಂಚಿಸಿದ್ದಾರೆ ಎಂದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ