
ಮೀರತ್ (ಡಿ. 10) ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ಜಾರಿ ಮಾಡಲಾಗಿದೆ. ಆದರೆ ಇಲ್ಲಿ ಯಾವುದೇ ದೂರು ದಾಖಲಾಗಿದ್ದರೂ ಯುವಕನ ಬಂಧನವಾಗಿದೆ.
27 ವರ್ಷದ ಮುಸ್ಲಿಂ ಯುವಕ 24 ವರ್ಷದ ಹಿಂದು ಯುವತಿ ನಡುವೆ ಪ್ರೇಮಾಂಕುರವಾಗಿದೆ. ಮನೆಯಿಂದ ಹೊರಹೋದ ಅವರು ಲಿವಿಂಗ್ ಸಂಸಾರ ಶುರು ಮಾಡಿದ್ದಾರೆ. ಪಾಲಕರು ಇದಕ್ಕೆ ಬೆಂವಲ ನೀಡದೆ ಇದ್ದರೂ ಯಾವ ದೂರು ದಾಖಲಿಸುವ ಕೆಲಸ ಮಾಡಿಲ್ಲ. ಆದರೆ ಇದೀಗ ಬಲಪಂಥೀಯ ಸಂಘಟನೆಗಳು ಇದನ್ನು ಲವ್ ಜಿಹಾದ್ ಎಂದು ಹೇಳುತ್ತ ಒತ್ತಾಯಪೂರ್ವಕವಾಗಿ ದೂರು ನೀಡಿಸಲು ಮುಂದಾಗಿವೆ.
ಪೋಷಕರ ಒಪ್ಪಿಗೆ ಮೇರೆಗೆ ನಡೆಯುತ್ತಿದ್ದ ಹಿಂದೂ-ಮುಸ್ಲಿಂ ಮದುವೆಗೆ ಬ್ರೇಕ್!
ಪೊಲೀಸರು ಮುಸ್ಲಿಂ ಯುವಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನೊಂದು ಕಡೆ ಯುವತಿಯನ್ನು ಪಾಲಕರ ಬಳಿಗೆ ಕಳುಹಿಸಲಾಗಿದೆ.
ಮುಸ್ಲಿಂ ಯುವಕ ಈ ಪ್ರಕರಣದಲ್ಲಿ ತನ್ನ ಗುರುತನ್ನು ಮರೆಮಾಚಿರಲಿಲ್ಲ. ಈ ಬಗ್ಗೆ ಎಫ್‌ಐಆರ್ ದಾಖಲಾಗಿದೆಯೋ..ಇಲ್ಲವೋ ಎಂಬುದರ ಬಗ್ಗೆಯೂ ಸ್ಪಷ್ಟತೆ ಇಲ್ಲ.
ಇಷ್ಟಪಟ್ಟವರೊಂದಿಗೆ ಪ್ರಾಪ್ತ ವ್ಯಕ್ತಿ ಮದುವೆಯಾಗಬಹುದು, ವಾಸಮಾಡಬಹುದು ಎಂದು ಒಂದು ಕಡೆ ಅಲಹಾಬಾದ್ ಕೋರ್ಟ್ ಹೇಲೀದೆ. ಇನ್ನೊಂದು ಕಡೆ ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ಜಾರಿಯಲ್ಲಿದೆ. ಒಟ್ಟಿನಲ್ಲಿ ನಾಗರಿಕರು, ಪ್ರೇಮಿಗಳು ಗೊಂದಲದ ಪರಿಸ್ಥಿತಿಯಲ್ಲಿ ಇದ್ದಾರೆ.
ಪೊಲೀಸರೆ ಮುಂದಾಗಿ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ. ಯಾವ ಕುಟುಂಬದ ಕಡೆಯಿಂದಲೂ ದೂರು ದಾಖಲಾಗಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ