ತರಕಾರಿಬುಟ್ಟಿಯಲ್ಲಿ ನವಜಾತ ಶಿಶು ಪತ್ತೆ: ಮಂಡ್ಯದಲ್ಲಿ ಮನಕಲುಕುವ ಘಟನೆ

By Ravi JanekalFirst Published Jan 28, 2023, 3:08 PM IST
Highlights

ಒಂಭತ್ತು ತಿಂಗಳು ಹೊತ್ತು, ಹೆತ್ತ ತಾಯಿಯೇ ಹಸಿ ಹಸಿಯಾದ ಎಳೆಮಗುವನ್ನು ಪೊದೆಯೊಳಗೆ, ಗುಡಿಯಲ್ಲಿ, ಕಸದಬುಟ್ಟಿಯಲ್ಲಿ ಎಸೆದುಹೋದ ಘಟನೆಗಳು ನೋಡಿದಾಗ, ಆ ತಾಯಿಯದು ಕರಳೆಂಬುದು ಕರಳೋ, ಕಬ್ಬಿಣದ ಸರಳೋ ಎಂಬ ಪ್ರಶ್ನೆಗಳು ನಿಮ್ಮೊಳಗೆ ಹುಟ್ಟದಿರಲಾರವು.

ಮಂಡ್ಯ (ಜ.28) : ಒಂಭತ್ತು ತಿಂಗಳು ಹೊತ್ತು, ಹೆತ್ತ ತಾಯಿಯೇ ಹಸಿ ಹಸಿಯಾದ ಎಳೆಮಗುವನ್ನು ಪೊದೆಯೊಳಗೆ, ಗುಡಿಯಲ್ಲಿ, ಕಸದಬುಟ್ಟಿಯಲ್ಲಿ ಎಸೆದುಹೋದ ಘಟನೆಗಳು ನೋಡಿದಾಗ, ಆ ತಾಯಿಯದು ಕರಳೆಂಬುದು ಕರಳೋ, ಕಬ್ಬಿಣದ ಸರಳೋ ಎಂಬ ಪ್ರಶ್ನೆಗಳು ನಿಮ್ಮೊಳಗೆ ಹುಟ್ಟದಿರಲಾರವು.

ಒಂದೆಡೆ ಮಗು ಪಡೆಯಲು ತಾಯಂದಿರು ಕಂಡಕಂಡ ದೇವರಿಗೆ ಹರಕೆ ಹೊರುತ್ತಿದ್ದಾರೆ. ಇನ್ನೊಂದೆಡೆ ಆತುರಕ್ಕೆ ಬಿದ್ದು ಮಕ್ಕಳಿಗೆ ಜನ್ಮ ನೀಡುವ ಇಂಥ ಆತುರಗೇಡಿಗಳು ಸಮಾಜಕ್ಕೆ ಹೆದರಿಯೋ, ಹೆಣ್ಣುಮಗುವೆಂದೋ ಹೆತ್ತಮಕ್ಕಳನ್ನು ಕಸದಬುಟ್ಟಿಗೆ ಎಸೆದು ಹೊರಟುಬಿಡುತ್ತಾರೆ.

ಪ್ಲಾಸ್ಟಿಕ್ ಕವರ್‌ನಲ್ಲಿ ನವಜಾತ ಗಂಡು ಮಗು ಪತ್ತೆ: ರಕ್ಷಣೆ ಮಾಡಿದ ಶಿವಮೊಗ್ಗ ಆರೋಗ್ಯ ಇಲಾಖೆ

ಇಲ್ಲೊಬ್ಳು ಮಹಾತಾಯಿ ಹೆತ್ತ ಮಗುವನ್ನು ತರಕಾರಿ ಬುಟ್ಟಿಯಲ್ಲಿ ಇಟ್ಟು ಬೀದಿಯಲ್ಲಿ ಬಿಟ್ಟು ಹೋಗಿದ್ದಾಳೆ! ಇಂಥದೊಂದು ಮನಕಲುಕುವ ಘಟನೆಗೆ ಸಕ್ಕರೆ ನಾಡು ಮಂಡ್ಯ ಸಾಕ್ಷಿಯಾಗಿದೆ.

 ಮಂಡ್ಯ‌ ಪಾಂಡವಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹತ್ತು ದಿನದ ಗಂಡು ಮಗುವನ್ನು ತರಕಾರಿಬುಟ್ಟಿಯಲ್ಲಿ ಬಿಟ್ಟು ಹೋಗಿದ್ದಾಳೆ. ಚಿಕ್ಕಮರಳಿ ಗೇಟ್ ಬಳಿ ಬೆಳ್ಳಂ ಬೆಳಗ್ಗೆ ಪತ್ತೆಯಾಗಿರುವ ಮಗು. ಮಗುವಿನ ಅಳುವ ಸದ್ದು ಕೇಳಿ ದಾರಿಹೋಕರು ಪ್ಲಾಸ್ಟಿಕ್ ಬುಟ್ಟಿ ತೆಗೆದು ನೋಡಿದ. ಬುಟ್ಟಿಯಲ್ಲಿ ಹತ್ತು ದಿನದ ಹಸುಳೆ ಒದ್ದಾಡುತ್ತಿರುವುದು ಕಂಡು ಶಾಕ್ ಆಗಿದ್ದಾರೆ. 

ದಂಪತಿ ಜಗಳ: 6 ತಿಂಗಳ ಮಗುವನ್ನು ಮೋರಿಗೆಸೆದ ತಾಯಿ

ರಸ್ತೆಯ ಪಕ್ಕದಲ್ಲಿ ಪ್ಲಾಸ್ಟಿಕ್ ಬುಟ್ಟಿಯಲ್ಲಿ ಮಗುವನ್ನು ಮುಚ್ಚಿಟ್ಟುಹೋಗಿರುವ ತಾಯಿ. ಇಂದು ಬೆಳಗ್ಗೆ ಮಗುವಿನ ಅಳು ಸುದ್ದಿ ಕೇಳಿ ಜನರು ಬುಟ್ಟಿ ತೆಗೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಪಾಂಡವಪುರ ಪೊಲೀಸರಿಗೆ ಮಾಹಿತಿ ನೀಡಿರುವ ಜನರು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಗುವನ್ನು ರಕ್ಷಿಸಿದ್ದಾರೆ. ಸದ್ಯ ಮಗುವಿಗೆ ಪಾಂಡವಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

click me!