* ಹೊಸ ವರ್ಷ ಹತ್ತಿರವಾಗ್ತಿದ್ದಂತೆ ಹೆಚ್ಚಾಯ್ತು ಮಾದಕವಸ್ತುಗಳಿಗೆ ಡಿಮ್ಯಾಂಡ್...!
* ಬೆಂಗಳೂರಲ್ಲಿ ಮಾದಕವಸ್ತು ಮಾರಾಟ ಜಾಲ ಆಕ್ವೀವ್ ಹಿನ್ನಲೆ
* ಬೆಂಗಳೂರು ನಗರದಾದ್ಯಂತ ಖಾಕಿ ಫುಲ್ ಅಲರ್ಟ್
* ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಒಂದೇ ದಿನ ಅಂತರಾಜ್ಯ ಹಾಗೂ ವಿದೇಶಿ ಪ್ರಜೆ ಸೇರಿ 6 ಮಂದಿ ಡ್ರಗ್ ಪೆಡ್ಲರ್ಸ್ ಅರೆಸ್ಟ್
ಬೆಂಗಳೂರು(ಡಿ. 15) ಹೊಸ ವರ್ಷ (New Year) ಹತ್ತಿರವಾಗ್ತಿದ್ದಂತೆ ಹೆಚ್ಚಾಯ್ತು ಮಾದಕವಸ್ತುಗಳಿಗೆ(Drugs) ಡಿಮ್ಯಾಂಡ್.. ಹೌದು ಪೊಲೀಸ್ (Bengaluru Police) ಮೂಲಗಳು ಅದನ್ನೇ ಹೇಳಿವೆ. ಬೆಂಗಳೂರಲ್ಲಿ (Bengaluru) ಮಾದಕವಸ್ತು ಮಾರಾಟ ಜಾಲ ಆಕ್ವೀವ್ ಹಿನ್ನಲೆ ಬೆಂಗಳೂರು ನಗರದಾದ್ಯಂತ ಖಾಕಿ ಫುಲ್ ಅಲರ್ಟ್ ಆಗಿದೆ.
ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಒಂದೇ ದಿನ ಅಂತರ್ ರಾಜ್ಯ ಹಾಗೂ ವಿದೇಶಿ ಪ್ರಜೆ ಸೇರಿ 6 ಮಂದಿ ಡ್ರಗ್ ಪೆಡ್ಲರ್ಸ್ ಅರೆಸ್ಟ್ ಮಾಡಲಾಗಿದ ನ್ಯೂ ಇಯರ್ ಗೆ ನಶೆಯ ಮತ್ತೆರಿಸಲು ಸಜ್ಜಾಗಿದ್ದ ಗ್ಯಾಂಗ್ ಅಂದರ್ ಆಗಿದೆ ಡಿಸಿಪಿ ಹರೀಶ್ ಪಾಂಡೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಕೋಣನಕುಂಟೆ ಕೆ.ಎಸ್.ಲೇಔಟ್ ಹಾಗೂ ಗಿರಿನಗರ ಪೊಲೀಸರನ್ನೊಳಂಡ ಸ್ಪೆಷಲ್ ಟೀಂ ಮಾದಕ ವಸ್ತು ದಂಧೆಕೋರರ ಮೇಲೆ ದಾಳಿ ಮಾಡಿದೆ. ದಕ್ಷಿಣ ವಿಭಾಗದಲ್ಲಿ ಡ್ರಗ್ ಪೆಡ್ಲಿಂಗ್ ಮಾಡಲು ಯತ್ನಿಸಿದ್ದ ಮೂವರು ಅಂತರಾಜ್ಯ ಪೆಡ್ಲರ್ ಹಾಗೂ ಮೂವರು ವಿದೇಶಿ ಪ್ರಜೆಗಳ ಬಂಧನ ಮಾಡಲಾಗಿದೆ. ನ್ಯೂ ಇಯರ್ ಹಿನ್ನಲೆ ಬೆಂಗಳೂರಲ್ಲಿ ಮಾದಕವಸ್ತುಗಳಿಗೆ ಹೆಚ್ಚಿನ ಬೇಡಿಕೆ ಇರೋದು ವಿಚಾರಣೆ ವೇಳೆ ಬೆಳಕಿಗೆ ಬಂದಿತ್ತು.
ಕೋಣನಕುಂಟೆ ಪೊಲೀಸರಿಂದ ನಗರದಲ್ಲಿ ಡ್ರಗ್ ಸರಬರಾಜು ಮಾಡುತ್ತಿದ್ದ ಮಣಿಪುರಿ ಗ್ಯಾಂಗ್ ಬಂಧನವಾಗಿದೆ. ಹೆರಾಯಿನ್ ಮಾರಾಟ ಮಾಡಲು ಯತ್ನಿಸ್ತಿದ್ದ ಮೂವರು ಸೆರೆ ಸಿಕ್ಕಿದ್ದಾರೆ. ಮೊಯಿನ್ ಅಲಾಂ, ಮೊಹದ್ ಸಯಿದುರ್, ವಾಕೀಮ್ ಯೂನಸ್ ಬಂಧಿತ ಮಣಿಪುರಿ ಪೆಡ್ಲರ್ ಗಳು.
Heroin Seized: ಮಾದಕ ವಸ್ತು ಕಳ್ಳಸಾಗಣೆಗೆ ಭಾರತವೇ ಹೆದ್ದಾರಿ: ಹೆರಾಯಿನ್ ಜಪ್ತಿ 4 ವರ್ಷದಲ್ಲಿ ಶೇ.37000 ಏರಿಕೆ!
ಬಂಧಿತರಿಂದ 20 ಲಕ್ಷಕ್ಕೂ ಅಧಿಕ ಮೌಲ್ಯದ 111 ಗ್ರಾಂ ಹೆರಾಯಿನ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಒಂದು ಗ್ರಾಂ ಹೆರಾಯಿನ್ ನನ್ನ ಇಪ್ಪತ್ತರಿಂದ ಇಪ್ಪತೈದು ಸಾವಿರಕ್ಕೆ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಮೇಲೆ ದಾಳಿ ಮಾಡಲಾಗಿದೆ.
ಬಂಧಿತ ಮಣಿಪುರಿ ಗ್ಯಾಂಗ್ ವಿರುದ್ದ ಕೋಣನಕುಂಟೆಯಲ್ಲಿ ಪ್ರಕರಣ ದಾಖಲಾಗಿದೆ. ಕೆ.ಎಸ್.ಲೇಔಟ್ ಠಾಣೆ ಪೊಲೀಸರಿಗೆ ನೈಜೀರಿಯಾ ಡ್ರಗ್ ಪೆಡ್ಲರ್ ಸೆರೆ ಸಿಕ್ಕಿದ್ದಾನೆ. ಮೂಲದ ಡೊಲೊಬಥ್ಲೆಮಿ ಬಂಧಿತ ಆರೋಪಿ. ನಗರದ ಎಚ್ ಆರ್ ಬಿ ಆರ್ ಲೇಔಟ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಈತ ಡ್ರಗ್ಸ್ ಸರಬರಾಜು ಕೆಲಸ ಮಾಡುತ್ತಿದ್ದ. ಪೂರ್ವ ವಿಭಾಗದಲ್ಲಿ ವಾಸವಿದ್ದು ದಕ್ಷಿಣ ವಿಭಾಗದಲ್ಲಿ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ. ತಾನು ವಾಸವಿದ್ದ ಎಚ್ ಆರ್ ಬಿ ಆರ್ ಲೇಔಟ್ ನಲ್ಲಿ ಸಭ್ಯಸ್ಥನಂತೆ ಇದ್ದ ಆರೋಪಿ ಡ್ರಗ್ ಪೆಡ್ಲಿಂಗ್ ನಿಂದ ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ.
ಬಂಧಿತನಿಂದ 1.30 ಲಕ್ಷ ಮೌಲ್ಯದ 20 ಗ್ರಾಂ ಎಂಡಿಎಂಎ ಸಿಂಥೆಟಿಕ್ ಡ್ರಗ್ ವಶಕ್ಕೆ ಪಡೆಯಲಾಗಿದೆ. ಬಂಧಿತ ಡ್ರಗ್ ಪೆಡ್ಲರ್ ವಿರುದ್ದ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬನಶಂಕರಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ನೈಜೀರಿಯಾ ಮೂಲದ ಇಬ್ಬರು ಡ್ರಗ್ ಪೆಡ್ಲರ್ ಗಳ ಬಂಧಿಸಿದ್ದಾರೆ. ಆಪರೇಷನ್ ಮಾಡಿಸಿಕೊಳ್ಬಂಳಲು ಬಂದವ ಡ್ರಗ್ ಪೆಡ್ಲರ್ ಆಗಿ ಬದಲಾಗಿದ್ದ. ಗಂಟಲ ಶಸ್ತ್ರಚಿಕಿತ್ಸೆಗೆಂದು ಬಂದು ಡ್ರಗ್ ಪೆಡ್ಲಿಂಗ್ ಗೆ ಇಳಿದಿದ್ದ. ನೈಜೀರಿಯಾ ಮೂಲದ ಪ್ರಿನ್ಸ್ ಅನಿ ಚಿಡೋಜಿಯನ್ನು ಬಂಧಿಸಲಾಗಿದೆ. ಫೊಫಾನ ಅಹಮದ್ ಬಂಧಿತ. ವೀಸಾ ಅವಧಿ ಮುಕ್ತಾಯವಾಗಿದ್ದರೂ ಇಲ್ಲಿಯೇ ವಾಸವಿದ್ದರು.
ಬಂಧಿತರಿಂದ 1.80 ಲಕ್ಷ ಮೌಲ್ಯದ ಎಂಡಿಎಂಎ ಸಿಂಥೆಟಿಕ್ ಡ್ರಗ್, 7 ಸಾವಿರ ನಗದು ಹಣ 1 ಮೊಬೈಲ್ 1 ಬೈಕ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಟೆಕ್ಕಿಗಳಿಗೆ ಸಿಂಥೆಟಿಕ್ ಡ್ರಗ್ ಸಪ್ಲೈ ಮಾಡುತ್ತಿದ್ದರು.
ಗಾಂಜಾ ಮಾರಾಟ ಮಾಡ್ತಿದ್ದ ಅರೋಪಿಗಳ ಬಂಧನ: ಅನ್ನಪೂರ್ಣೇಶ್ವರಿ ನಗರ ಪೊಲೀಸರಿಂದ ಇಬ್ಬರು ಗಾಂಜಾ ಪೆಡ್ಲರ್ ಗಳ ಬಂಧನವಾಗಿದೆ. ಶಬ್ಬಿರ್ ಮತ್ತು ಅನಿಲ್ ಬಂಧಿತ ಅರೋಪಿಗಳು. ಒಡಿಶಾ ದಿಂದ ತಮಿಳುನಾಡಿನ ಮೂಲಕ ಬೆಂಗಳೂರಿಗೆ ತಂದಿದ್ದ ಗಾಂಜಾ ಮಾರಾಟ ಮಾಡಲು ಯತ್ನಿಸಿದ್ದರು. ಅರೋಪಿಗಳಿಂದ ಎಂಟು ಕೆ ಜಿ ಹದಿನಾರು ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ಹೊಸ ವರ್ಷದ ಆಚರಣೆಯನ್ನು ಟಾರ್ಗೆಟ್ ಮಾಡಿಕೊಂಡು ಮಾರಾಟ ಮಾಡುತ್ತಿದ್ದವರು ಸೆರೆ ಸಿಕ್ಕಿದ್ದಾರೆ.