
ಮುಂಬೈ (ಡಿ.11): ಡ್ರಗ್ಸ್ ಪ್ರಕರಣ ಸಂಬಂಧ ನಟಿ ಭಾರ್ತಿ ಸಿಂಗ್ ಬಂಧನ, ಬಿಡುಗಡೆ ಬೆನ್ನಲ್ಲೇ, ಮತ್ತೊಬ್ಬ ಬಾಲಿವುಡ್‌ಗೆ ಸಂಬಂಧಿಸಿದ ವ್ಯಕ್ತಿಯನ್ನು ಮಾದಕವಸ್ತು ನಿಯಂತ್ರಣ ದಳ ಬಂಧಿಸಿದೆ.
ಡ್ರಗ್ಸ್ ಇಟ್ಟುಕೊಂಡಿದ್ದ ಬಾಲಿವುಡ್ ಕೇಶ ವಿನ್ಯಾಸಕ ಸೂರಜ್ ಗೊಡಂಬೆಯನ್ನು ಮಾದಕವಸ್ತು ನಿಯಂತ್ರಣ ದಳ ಮಾಲು ಸಮೇತ ಬಂಧಿಸಿದೆ. ಪಶ್ಚಿಮ ಅಂಧೇರಿಯಲ್ಲಿರುವ ಒಶಿವಾರದಲ್ಲಿರುವ ಗೊಡಂಬೆ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, 11 ಗ್ರಾಂ ತೂಕದ 16 ಕೊಕೇನ್ ಪೊಟ್ಟಣ ಹಾಗೂ 56000 ನಗದು ವಶಪಡಿಸಿಕೊಂಡಿದ್ದಾರೆ.
ಚಳಿಗಾಲ, ಆಸ್ತಮಾ ಇದೆ ಜಾಮೀನು ಕೊಡಿ ಎಂದ ಸಂಜನಾಗೆ ಸಿಕ್ಕ ಉತ್ತರ! ...
ಜತೆಗೆ ಓರ್ವ ಆಟೋ ಡ್ರೈವರ್ ಅನ್ನು ಕೂಡ ದಸ್ತಗಿರಿ ಮಾಡಲಾಗಿದೆ. ಇಬ್ಬರನ್ನು ಕೋರ್ಟ್‌ಗೆ ಹಾಜರು ಪಡಿಸಲಾಗಿದ್ದು, ಡಿ.16ರ ವರೆಗೆ ಎನ್‌ಸಿಬಿ ಕಸ್ಟಡಿಗೆ ಒಪ್ಪಿಸಲಾಗಿದೆ.
ಈಗಾಗಲೇ ಹಲವು ಮಂದಿ ಸ್ಟಾರ್‌ಗಳು ಡ್ರಗ್ಸ್ ಜಾಲದಲ್ಲಿ ಸಿಲುಕಿದ್ದು ಇದೀಗ ಮತ್ತೋರ್ವ ಕಲಾವಿದನ ಅರೆಸ್ಟ್ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ