
ಸ್ಯಾನ್ ಫ್ರಾನ್ಸಿಸ್ಕೋ (ಜುಲೈ 27, 2023): ಹೆದ್ದಾರಿ ರಸ್ತೆ ಅಂದ್ರೆ ವಾಹನಗಳು ಸಾಲುಗಟ್ಟಿರುತ್ತವೆ. ಅದ್ರಲ್ಲೂ, ಸಂಜೆಯ ವೇಳೆ ಅಂದ್ರ ವಾಹನಗಳ ಸಂಖ್ಯೆ ಸಾಮಾನ್ಯವಾಗಿ ಹೆಚ್ಚೇ ಇರುತ್ತದೆ ಅಲ್ವೇ. ಇಂತಹ ಟೈಮಲ್ಲಿ ದಿಢೀರನೇ ಬೆತ್ತಲೆ ಮಹಿಳೆ ಸಿಕ್ಕ ಸಿಕ್ಕ ವಾಹನಗಳಿಗೆ ಗುಂಡು ಹಾರಿಸಿದ್ರೆ ಏನಾಗುತ್ತೆ? ಅಂತಹ ಅಚ್ಚರಿಯ ಘಟನೆಯೊಂದು ಅಮೆರಿಕದಲ್ಲಿ ನಡೆದಿದೆ ನೋಡಿ..
ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ-ಓಕ್ಲ್ಯಾಂಡ್ ಬೇ ನಲ್ಲಿ ಬ್ಯುಸಿ ಟ್ರಾಫಿಕ್ ಇದ್ದ ಸಮಯದಲ್ಲಿ ಇಂತಹ ವಿಲಕ್ಷಣ ದೃಶ್ಯ ನಡೆದಿದೆ. ಬೆತ್ತಲೆ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ತನ್ನ ಕಾರಿನಿಂದ ಇಳಿದು ಬಂದೂಕು ಇಟ್ಟುಕೊಂಡು ಆ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಕಾರುಗಳ ಮೇಲೆ ಶೂಟ್ ಮಾಡಲು ಪ್ರಾರಂಭಿಸಿದ್ದಾರೆ. ಆದರ ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಮತ್ತು ಮಹಿಳೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.
ಇದನ್ನು ಓದಿ: ಡೇಟಿಂಗ್ ಆ್ಯಪ್‌ನಲ್ಲಿ ಸ್ನೇಹ: ಮಹಿಳೆಗೆ ಮತ್ತು ಬರಿಸಿ ಗ್ಯಾಂಗ್‌ರೇಪ್; ಕೃತ್ಯ ಸೆರೆ ಹಿಡಿದ ಪಾಪಿಗಳು
ಕ್ಯಾಲಿಫೋರ್ನಿಯಾ ಹೈವೇ ಪ್ಯಾಟ್ರೋಲ್‌ಗೆ ಅಜಾಗರೂಕ ಚಾಲಕಿಯೊಬ್ಬರು ಇತರ ಚಾಲಕರ ಮೇಲೆ ಬಂದೂಕು ತೋರಿಸಿ ಗುಡು ಹಾರಿಸುತ್ತಿರುವ ಬಗ್ಗೆ ಇಂಟರ್‌ಸ್ಟೇಟ್ 80 ರಲ್ಲಿ ಸಂಜೆ 4.40 ಕ್ಕೆ ಈ ಬಗ್ಗೆ ಕರೆ ಮೂಲಕ ದೂರು ನೀಡಲಾಗಿದೆ. ಮಹಿಳೆ ರಸ್ತೆಯ ತನ್ನ ಲೇನ್ ಮಧ್ಯದಲ್ಲಿ ನಿಲ್ಲಿಸಿ, ಚಾಕುವಿನಿಂದ ತನ್ನ ಕಾರಿನಿಂದ ಇಳಿದು ಕೂಗಲು ಪ್ರಾರಂಭಿಸಿದಳು. ನಂತರ ಮಹಿಳೆ ಕಾರನ್ನು ಪ್ರವೇಶಿಸಿ ಟೋಲ್ ಪ್ಲಾಜಾವರೆಗೆ ಸ್ವಲ್ಪ ದೂರ ಓಡಿಸಿ, ವಿವಸ್ತ್ರಳಾಗಿ ಮತ್ತೆ ಗನ್ ಹಿಡಿದು ತನ್ನ ಕಾರಿನಿಂದ ಇಳಿದಳು ಎಂದೂ ತಿಳಿದುಬಂದಿದೆ.
‘’ಅವಳು ಇತರ ವಾಹನಗಳಲ್ಲಿದ್ದವರ ಮೇಲೆ ಕೂಗಾಡುತ್ತಿದ್ದಳು, ಗಾಳಿಯಲ್ಲಿ ಗುಂಡು ಹಾರಿಸಲು ಪ್ರಾರಂಭಿಸಿದಳು, ಮತ್ತು ನಂತರ ಇತರ ವಾಹನಗಳು ಇದನ್ನು ಗಮನಿಸದೆ ಏನಾಗುತ್ತಿದೆ ಎಂದು ಗೊಂದಲಕ್ಕೊಳಗಾದರು. ಬಹುಶಃ ಅಪಘಾತ ಸಂಭವಿಸಿದೆ ಎಂದು ಸುತ್ತಲೂ ವಾಹನ ಓಡಿಸಲು ಪ್ರಾರಂಭಿಸಿದರು. "ಅವರು ಓಡಿಸಲು ಪ್ರಯತ್ನಿಸುತ್ತಿರುವಾಗ, ಆ ಮಹಿಳೆ ಆ ಇತರ ವಾಹನಗಳ ಕಡೆಗೆ ಗುಂಡು ಹಾರಿಸಲು ಪ್ರಾರಂಭಿಸಿದಳು’’ ಎಂದು ಕ್ಯಾಲಿಫೋರ್ನಿಯಾ ಹೈವೇ ಪ್ಯಾಟ್ರೋಲ್‌ನ ವಕ್ತಾರ ಆಂಡ್ರ್ಯೂ ಬಾರ್ಕ್ಲೇ ಎಬಿಸಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: Manipur: ಬಿಎಸ್‌ಎಫ್ ಯೋಧನಿಂದ ಮಹಿಳೆಗೆ ಲೈಂಗಿಕ ಕಿರುಕುಳ ; ಸಿಸಿ ಕ್ಯಾಮರಾದಲ್ಲಿ ಸೆರೆ
ನಂತರ ಮಹಿಳೆ ಆಕ್ರಮಿತ ಕಾರುಗಳ ಮೇಲೆ ಸಿಕ್ಕ ಸಿಕ್ಕ ಹಾಗೆ ಗುಂಡು ಹಾರಿಸಲು ಪ್ರಾರಂಭಿಸಿದಳು. ಬಳಿಕ, ಕ್ಯಾಲಿಫೋರ್ನಿಯಾ ಹೈವೇ ಪ್ಯಾಟ್ರೋಲ್ ಸ್ಥಳವನ್ನು ತಲುಪಿತು ಮತ್ತು ಗನ್ ಕೆಳಗೆ ಹಾಕಲು ಮಹಿಳೆಯನ್ನು ಕೇಳಿತು. ಆರಂಭದಲ್ಲಿ ಹಾಗೆ ಮಾಡಲು ನಿರಾಕರಿಸಿದ ನಂತರ, ಮಹಿಳೆ ಸ್ವಲ್ಪ ಸಮಯದ ಬಳಿಕ ತನ್ನ ಬಂದೂಕನ್ನು ಕೆಳಗೆ ಹಾಕಿದಳು ಮತ್ತು ಆಕೆಯನ್ನು ಪೊಲೀಸ್ ಕಸ್ಟಡಿಗೆ ಹಾಕಲಾಯಿತು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಸ್ಥಳೀಯ ಆಸ್ಪತ್ರೆಯಲ್ಲಿ ಮಹಿಳೆಯನ್ನು ಮಾನಸಿಕ ಆರೋಗ್ಯ ಸಮಸ್ಯೆ ಹಿನ್ನೆಲೆ ದಾಖಲಿಸಲಾಗಿದೆ ಎಂದು ಮಾಧ್ಯಮವು ವರದಿ ಮಾಡಿದೆ. ಬಿಡುಗಡೆಯಾದ ನಂತರ ಆಕೆಯನ್ನು ಅನಿರ್ದಿಷ್ಟ ಆರೋಪಗಳ ಮೇಲೆ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ವರ್ಷಕ್ಕೆ ಸುಮಾರು 40 ಮಿಲಿಯನ್ ಜನರನ್ನು ಹೊತ್ತೊಯ್ಯುವ ಈ ಸೇತುವೆ ಈ ಘಟನೆಯಿಂದಾಗಿ ಒಂದು ಗಂಟೆಗೂ ಹೆಚ್ಚು ಕಾಲ ಸ್ತಬ್ಧವಾಗಿತ್ತು. ಇದರಿಂದ ಸಂಜೆಯವರೆಗೆ ಸಂಚಾರದಲ್ಲಿ ಅಸ್ತವ್ಯಸ್ತವಾಗಿತ್ತು ಎಮೂ ಹೇಳಲಾಗಿದೆ.
ಇದನ್ನೂ ಓದಿ: Love Jihad: ಹಿಂದೂ ಮಹಿಳೆಯೊಂದಿಗೆ ಫೇಸ್‌ಬುಕ್ ಲವ್: ರೇಪ್ ಮಾಡಿ ಗರ್ಭಪಾತ ಮಾಡಿಸಿ ಇಸ್ಲಾಂಗೆ ಮತಾಂತರ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ