
ಕ್ಯಾಮರಾಮ್ಯಾನ್ ನವೀನ್ ಜೊತೆಗೆ ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು.
ಮೈಸೂರು (ಜ.30): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಾದಕ ದ್ರವ್ಯದ ವಿರುದ್ಧ ಪೊಲೀಸರು ಸಮರ ಸಾರಿದ್ದಾರೆ. ಶತಾಯ ಗತಾಯ ಮಾದಕ ದ್ರವ್ಯ ಜಾಲಾವನ್ನ ಬಂದ್ ಮಾಡಲು ಪಣತೊಟ್ಟಿರುವ ಪೊಲೀಸರು. ಯಾವ ರೀತಿ ಕಾರ್ಯಾಚರಣೆ ನಡೆಯುತ್ತಿದೆ ಅಂತೀರಾ ಈ ಸ್ಟೋರಿ ನೋಡಿ.
ಇಂಚಿಂಚು ಪರಿಶೀಲನೆ ಮಾಡಿದ ಸೋಕೊ ತಂಡ.
ಎಸ್, ಸಾಂಸ್ಕೃತಿಕ ನಗರಿ ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಇಂದು ಕೆಮಿಕಲ್ ಫ್ಯಾಕ್ಟರಿಗಳ ತಪಾಸಣೆ ನಡೆಸಲಾಯಿತು. ಮಾದಕ ದ್ರವ್ಯ ಜಾಲಾವನ್ನ ಪತ್ತೆಹಚ್ಚಲು ಮೈಸೂರು ಪೊಲೀಸರು ಶ್ವಾನದಳದ ಮೊರೆ ಹೋಗಿದ್ದಾರೆ. ಈ ಹಿನ್ನಲೆ ಇಂದು ಒಂದಲ್ಲಾ ಎರಡಲ್ಲಾ ಬರೋಬ್ಬರಿ ಆರು ಪೊಲೀಸ್ ಡಾಗ್ ಗಳನ್ನ ಬಳಸಿ ಕಾರ್ಯಾಚರಣೆ ನಡೆಸಲಾಯಿತು.
ಹೆಬ್ಬಾಳು ಕೈಗಾರಿಕಾ ಪ್ರದೇಶದ ಕೆಮಿಕಲ್ ಫ್ಯಾಕ್ಟರಿಯಲ್ಲಿ ಜೋಡಿಸಿಟ್ಟಿದ್ದ ಕೆಮಿಕಲ್ ಗಳ ಡಬ್ಬವನ್ನಶ್ವಾನ ದಳ ಹಾಗೂ ಸೋಕೊ ತಂಡ ಜಂಟಿಯಾಗಿ ಪರಿಶೀಲನೆ ನಡೆಸಿತ್ತು.
ಎನ್ ಸಿಬಿ ಎಂಟ್ರಿಯಿಂದ ಅಲರ್ಟ್ ಆದ ಮೈಸೂರು ಪೊಲೀಸರು.
ಹಗಲು ರಾತ್ರಿ ಕಾರ್ಯಾಚರಣೆ. ಯಾವಗ ಎನ್ ಸಿಬಿ ತಂಡ ಮೈಸೂರಿಮ ಹೆಬ್ಬಾಳು ಕೈಗಾರಿಕಾ ಪ್ರದೇಶದ ಗಣಪತ್ ಲಾಲ್ ಫಿನಾಯಿಲ್ ಫ್ಯಾಕ್ಟರಿಗೆ ಎಂಟ್ರಿ ಕೊಟ್ಟು ತಪಾಸಣೆ ನಡೆಸಿದ್ದು ಮಾತ್ರ ಅಲ್ಲ ಗಣಪತ್ ಲಾಲಗ ಅವರನ್ನ ವಶಕ್ಕೆ ತೆಗೆದುಕೊಂಡಿದ್ರು. ಗಣಪತ್ ಲಾಲ್ ಸಂಬಂಧಿ ಗುಜರಾತ್ನ ಅಹಮದ್ ನಲ್ಲಿ ಡ್ರಗ್ಸ್ ಜಾಲಾದಾಲ್ಲಿ ಸಿಲುಕಿದ. ಈ ಆಧಾರದ ಮೇಲೆ ಎನ್ ಸಿಬಿ ಮೈಸೂರಿಗೆ ಎಂಟ್ರಿ ಕೊಟ್ಟಿತ್ತು. ಇದರಿಂದ ಅಲರ್ಟ್ ಆದ ಮೈಸೂರು ಪೊಲೀಸರು ಮೈಸೂರಿನ ಸಂಪೂರ್ಣ ಕೈಗಾರಿಕೆ ಪ್ರದೇಶದಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ.
ಒಟ್ಟಾರೆ ಸಾಂಸ್ಕೃತಿಕ ನಗರಿ ಮೈಸೂರಿನತ್ತ ಎಲ್ಲರ ಚಿತ್ತ ನೆಟ್ಟಿದ್ದು ಪಿಂಚಣಿದಾರರ ಸ್ವರ್ಗ ಮೈಸೂರು ಡ್ರಗ್ ತಯಾರಿಕ ಕೇಂದ್ರವಾಗಿ ಮಾರ್ಪಟಿದ್ಯಾ ಎಂಬ ಚರ್ಚೆ ಜೋರಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ