ಬ್ರಾಹ್ಮಣ ಬಾಲಕಿಯರ ರೇಟ್ 20 ಲಕ್ಷ, ಮೊಬೈಲ್ ತೋರಿಸಿ ಬಲತ್ಕಾರ ! ತಪ್ಪೊಪ್ಪಿಕೊಂಡ ಆರೋಪಿಗಳಿಂದ ಶಾಕಿಂಗ್ ವಿಷ್ಯ ಬಹಿರಂಗ

Published : Feb 19, 2025, 12:38 PM ISTUpdated : Feb 19, 2025, 12:53 PM IST
ಬ್ರಾಹ್ಮಣ ಬಾಲಕಿಯರ ರೇಟ್ 20 ಲಕ್ಷ, ಮೊಬೈಲ್ ತೋರಿಸಿ ಬಲತ್ಕಾರ ! ತಪ್ಪೊಪ್ಪಿಕೊಂಡ ಆರೋಪಿಗಳಿಂದ ಶಾಕಿಂಗ್ ವಿಷ್ಯ ಬಹಿರಂಗ

ಸಾರಾಂಶ

ಬೀವರ್‌ನಲ್ಲಿ ಶಾಲಾ ಬಾಲಕಿಯರ ಮೇಲೆ ಸಾಮೂಹಿಕ ಲೈಂಗಿಕ ದೌರ್ಜನ್ಯ ನಡೆದಿದೆ. ಆರೋಪಿಗಳು ಹುಡುಗಿಯರನ್ನು ಆಮಿಷವೊಡ್ಡಿ, ದೈಹಿಕವಾಗಿ ಶೋಷಿಸಿ, ಮತಾಂತರಕ್ಕೆ ಒತ್ತಾಯಿಸುತ್ತಿದ್ದರು. ಜಾತಿ ಆಧರಿಸಿ ಹುಡುಗಿಯರಿಗೆ 'ರೇಟ್' ನಿಗದಿಪಡಿಸಲಾಗುತ್ತಿತ್ತು. ಆರು ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಶೋಧ ನಡೆಯುತ್ತಿದೆ. ಪ್ರಕರಣ ಬೆಳಕಿಗೆ ಬಂದ ನಂತರ ವ್ಯಾಪಕ ಪ್ರತಿಭಟನೆಗಳು ನಡೆದಿವೆ.

ರಾಜಸ್ಥಾನದ ಅಜ್ಮೀರ್ (Rajasthan Ajmer) ಜಿಲ್ಲೆಯಲ್ಲಿ 33 ವರ್ಷಗಳ ಹಿಂದೆ ನಡೆದ ಶಾಲಾ ಬಾಲಕಿ (school girl)ಯರ ಮೇಲೆ ಸಾಮೂಹಿಕ ಬಲತ್ಕಾರ ಘಟನೆ ಮತ್ತೆ ಮರುಕಳಿಸಿದೆ. ಬೀವರ್ ಜಿಲ್ಲೆಯಲ್ಲಿ ಬಾಲಕಿಯರ ಮೇಲೆ ಸಾಮೂಹಿಕ ಬಲತ್ಕಾರ ನಡೆದಿದೆ. ದಿನ ದಿನಕ್ಕೂ ಇದಕ್ಕೆ ಸಂಬಂಧಿಸಿದ ಹೊಸ ಹೊಸ ವಿಷ್ಯಗಳು ಹೊರಗೆ ಬರ್ತಿದ್ದು, ಆತಂಕ ಸೃಷ್ಟಿಸಿದೆ. ಬಂಧಿತ ಆರೋಪಿಗಳು ಸತ್ಯ ಬಾಯ್ಬಿಟ್ಟಿದ್ದು, ಶೋಷಣೆಗೊಳಗಾದ ಹುಡುಗಿಯರಿಗೆ ಮೊದಲೇ ರೇಟ್ ಫಿಕ್ಸ್ ಆಗ್ತಿತ್ತು ಎಂಬುದು ಬಹಿರಂಗಗೊಂಡಿದೆ. 

ದೈಹಿಕ ಕಿರುಕುಳ (physical abuse) ಹಾಗೂ ಮತಾಂತರ ಮಾಡಲು ಮುಂದಾಗಿದ್ದ ಆರೋಪಿಗಳಾದ ಸೊಹೈಲ್ ಹುಸೇನ್ ಮತ್ತು ಮೊಹಮ್ಮದ್ ಲುಕ್ಮಾನ್  ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ವಿದ್ಯಾರ್ಥಿನಿಯರಿಗೆ ಮೊಬೈಲ್ ಫೋನ್ ನೀಡುವ ಆಮಿಷವೊಡ್ಡಿ  ದೈಹಿಕ ಸಂಬಂಧ ಬೆಳೆಸುತ್ತಿದ್ದರು ಎಂಬುದು ಈಗ ತಿಳಿದುಬಂದಿದೆ.

ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು : ಮಗುವನ್ನು ಕೊಂದು ನೇಣಿಗೆ ಶರಣಾದ ಗೃಹಿಣಿ!

ಬಾಲಕಿಯರಿಗೆ ಆಮಿಷ : ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಲ್ಲರ ವಯಸ್ಸು 19 -20 ವರ್ಷ ಎಂದು ಅಂದಾಜಿಸಲಾಗಿದೆ. ಉಳಿದ 9 ಮಂದಿ ಬಂಧನಕ್ಕೆ ಬಲೆ ಬೀಸಲಾಗಿದ್ದು, 50ಕ್ಕೂ ಹೆಚ್ಚು ಕಡೆ ಪೊಲೀಸರು ದಾಳಿ ನಡೆದಿದ್ದಾರೆ. ಈ ಪ್ರಕರಣದ  ಆರೋಪಿ ಕರೀಮ್, ಮೊದಲು ಹುಡುಗಿಯರ ಸ್ನೇಹ ಬೆಳೆಸುತ್ತಿದ್ದ. ಇದಾದ್ಮೇಲೆ ಸೊಹೈಲ್ ಮತ್ತು ಮೊಹಮ್ಮದ್ ರೇಟ್ ಫಿಕ್ಸ್ ಮಾಡ್ತಿದ್ರು. ಬೇರೆ ಬೇರೆ ವಾಹನ, ಮೊಬೈಲ್ ಆಸೆ ತೋರಿಸಿ ಹುಡುಗಿಯರನ್ನು ಕರೆದುಕೊಂಡು ಹೋಗ್ತಿದ್ದರು. ಹುಡುಗಿಯರಿಗೆ ದೈಹಿಕ ಶೋಷಣೆ ನೀಡಿ, ಅವರ ಬ್ರೈನ್ ವಾಶ್ ಮಾಡಿ, ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ಪೀಡಿತ ಬಾಲಕಿ ಪಾಲಕರು ಆರೋಪಿಸಿದ್ದಾರೆ. ಇದನ್ನು ನಿರಾಕರಿಸಿದ್ರೆ ಹುಡುಗಿಯರನ್ನು ಥಳಿಸುತ್ತಿದ್ದರು. ಅನೇಕ ಹುಡುಗಿಯರ ದೇಹದ ಮೇಲೆ ಗಾಯದ ಗುರುತಿದೆ.

ಹುಡುಗಿಯರಿಗೆ ರೇಟ್ ಫಿಕ್ಸ್ : ಹುಡುಗಿಯರ ಜಾತಿ ನೋಡಿ ಅವರ ರೇಟ್ ಫಿಕ್ಸ್ ಆಗ್ತಿತ್ತು ಎಂದು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಬ್ರಾಹ್ಮಣ ಹುಡುಗಿಯರ ಬೆಲೆ 20 ಲಕ್ಷವಾದ್ರೆ, ದಲಿತ ಹುಡುಗಿಯರ ಬೆಲೆ 10 ಲಕ್ಷ. ನಾಲ್ಕರಿಂದ ಐದು ಹುಡುಗಿಯರ ಪಾಲಕರು ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮರ್ಯಾದೆಗೆ ಹೆದರಿ ಅನೇಕ ಪಾಲಕರು ಈ ವಿಷ್ಯವನ್ನು ಪೊಲೀಸ್ ಠಾಣೆಗೆ ತಂದಿಲ್ಲ ಎಂಬ ಅನುಮಾನ ಪೊಲೀಸರಲ್ಲಿದೆ. 

ಪರೀಕ್ಷೆಯಲ್ಲಿ ಔಟ್ ಆಫ್ ಔಟ್ ಬರ್ಬೇಕು ಅಂದ್ರೆ ಆನ್ಸರ್ ಶೀಟ್ ಹೀಗಿರ್ಬೇಕು

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ? : ಎರಡು ತಿಂಗಳಿಂದ ಈ ಗ್ಯಾಂಗ್ ತನ್ನ ಕೆಲಸ ಮಾಡ್ತಿತ್ತು. ಬಾಲಕಿಯೊಬ್ಬಳನ್ನು ಮೊದಲು ಬಲೆಗೆ ಬೀಳಿಸಿಕೊಳ್ಳಲಾಗಿತ್ತು. ನಂತ್ರ ಆಕೆಯನ್ನು ಗ್ಯಾಂಗ್ ಸದಸ್ಯರು ಬ್ಲಾಕ್ ಮೇಲ್ ಮಾಡಿದ್ದರು. ಅಶ್ಲೀಲ ವಿಡಿಯೋ ವೈರಲ್ ಮಾಡುವ ಬೆದರಿಕೆ ಹಾಕಿ, ಬೇರೆ ಹುಡುಗಿಯರ ಸ್ನೇಹ ಬೆಳೆಸುವಂತೆ ಒತ್ತಾಯಿಸಿದ್ದರು. ಆ ಹುಡುಗಿ ಬೇರೆ ಹುಡುಗಿಯರನ್ನು ಕರೆದುತರ್ಬೇಕಿತ್ತು. ವಿಡಿಯೋ ಡಿಲಿಟ್ ಮಾಡಲು ಹಣ ನೀಡುವಂತೆ ಹುಡುಗಿಯರಿಗೆ ಬೆದರಿಸಲಾಗ್ತಿತ್ತು. ಬಾಲಕಿಯೊಬ್ಬಳು ಮನೆಯಿಂದ 2 ಸಾವಿರ ಕದ್ದೊಯ್ಯುವಾಗ ಸಿಕ್ಕಿ ಬಿದ್ದಿದ್ದಾಳೆ. ಆಕೆ ವರ್ತನೆಯಿಂದ ಅನುಮಾನಗೊಂಡ ಪಾಲಕರು, ಆಕೆಯನ್ನು ಹಿಂಬಾಲಿಸಿದ್ದಾರೆ. ಈ ವೇಳೆ ಫೋನ್ ನಲ್ಲಿ ಹುಡುಗಿ ಮಾತನಾಡುವುದು ತಿಳಿದು ಬಂದಿದೆ. ಅನುಮಾನಗೊಂಡ ಪಾಲಕರು, ಹುಡುಗಿಯನ್ನು ವಿಚಾರಿಸಿದಾಗ ಆಕೆ ಎಲ್ಲವನ್ನು ಬಾಯ್ಬಿಟ್ಟಿದ್ದಾಳೆ. ಪೊಲೀಸರಿಗೆ ದೂರು ಬರ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಸತ್ಯವನ್ನು ಬಾಯ್ಬಿಟ್ಟಿದ್ದಾರೆ. ಪ್ರಕರಣ ಹೊರಗೆ ಬರ್ತಿದ್ದಂತೆ ಬೀವರ್ ಜಿಲ್ಲೆಯಲ್ಲಿ ಗೊಂದಲದ ವಾತಾವರಣ ಮನೆ ಮಾಡಿದೆ. ಆರೋಪಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಸಾರ್ವಜನಿಕರು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ.   
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ