
ಮುಂಬೈ(ಆ. 09) ಮುಂಬೈ ಲೋಕಲ್ ಟ್ರೇನ್ ನಲ್ಲಿ 14 ವರ್ಷದ ಹಿಂದೆ ಕಳೆದುಕೊಂಡಿದ್ದ ಪರ್ಸ್ ಪತ್ತೆಯಾಗಿದೆ. 2006 ರಲ್ಲಿ 900 ರೂ. ಇದ್ದ ಪರ್ಸ್ ಕಳ್ಳತನವಾಗಿತ್ತು.
ಹೇಮಂತ್ ಪಡಲ್ಕರ್ ಎಂಬುವರು ಪರ್ಸ್ ಕಳೆದುಕೊಂಡು ವರ್ಷಗಳೆ ಉರುಳಿ ಹೋಗಿದ್ದವು. ಹದಿನಾಲ್ಕು ವರ್ಷದ ನಂತರ ಪೊಲೀಸರು ಕರೆ ಮಾಡಿ ನಿಮ್ಮ ಪರ್ಸ್ ಸಿಕ್ಕಿದೆ ಎಂದಿದ್ದಾರೆ.
ಶಿವಾಜಿ ಟರ್ಮಿನಲ್ ನಿಂದ ಪನೆವಲ್ ಲೋಕಲ್ ಟ್ರೇನ್ ನಲ್ಲಿ ಹೇಮಂತ್ ಪ್ರಯಾಣ ಮಾಡುತ್ತಿದ್ದರು. ಪರ್ಸ್ ಕಳೆದುಕೊಂಡ ಮೇಲೆ ಹೇಮಂತ್ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದರು.
ಬ್ಯಾನ್ ಆಗುತ್ತಾ ಎರಡು ಸಾವಿರದ ನೋಟು? ಏನಿದು ಅಂತೆ-ಕಂತೆ
ಈ ವರ್ಷದ ಏಪ್ರಿಲ್ ನಲ್ಲಿ ಹೇಮಂತ್ ಗೆ ಪೊಲೀಸರಿಂದ ಕರೆ ಬಂದಿದ್ದು ನಿಮ್ಮ ಪರ್ಸ್ ಸಿಕ್ಕಿದೆ ಎಂದಿದ್ದಾರೆ. ಕೊರೋನಾ ಲಾಕ್ ಡೌನ್ ಜಾರಿಯಲ್ಲಿದ್ದ ಕಾರಣ ಪರ್ಸ್ ಕಲೆಕ್ಟ್ ಮಾಡಿಕೊಳ್ಳಲು ಹೇಮಂತ್ ಗೆ ಸಾಧ್ಯವಾಗಿರಲಿಲ್ಲ.
ನನಗೆ ಹಣ ಹಿಂದುರಿಗಿ ಸಿಕ್ಕಿದ್ದು ತುಂಬಾ ಸಂತಸ ತಂದಿದೆ ಎಂದಿದ್ದಾರೆ. ಆರೋಪಿಯೊಬ್ಬನಿಂದ ಈ ಪರ್ಸ್ ವಶಕ್ಕೆ ಪಡೆಯಲಾಗಿದ್ದು 500 ರೂಪಾಯಿ ನೋಟು ರದ್ದಾಗಿದೆ. ಇದೆ ವಿಷಯಕ್ಕೆ ಸಂಬಂಧಿಸಿ ರಿಸರ್ವ್ ಬ್ಯಾಂಕ್ ಗೆ ಪತ್ರ ಬರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ