ಆ ವ್ಯಕ್ತಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಸಂತ್ರಸ್ತೆ ತನ್ನ ಸಂಕಷ್ಟವನ್ನು ವಿವರಿಸಿದ್ದಾಳೆ. ಈ ಘಟನೆಯನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದ ಎಂದೂ ಬಾಲಕಿ ಹೇಳಿದ್ದಾಳೆಂದು ವರದಿಯಾಗಿದೆ.
ಮುಂಬೈ (ಜುಲೈ 8, 2023): ಐದು ವರ್ಷದ ನೆರೆಯ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 60 ವರ್ಷದ ವ್ಯಕ್ತಿಯನ್ನು ಮಹಾರಾಷ್ಟ್ರದ ಗೋವಂಡಿಯ ಶಿವಾಜಿ ನಗರ ಪೊಲೀಸರು ಬಂಧಿಸಿದ್ದಾರೆ. ಇನ್ನು, ಆರೋಪಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು ಇದೇ ಮೊದಲಲ್ಲ ಎಂದು ಆಕೆಯ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪೊಲೀಸರಿಗೆ ದೂರು ನೀಡಿದ ಸಂತ್ರಸ್ತೆಯ ಪೋಷಕರು, ಜುಲೈ 3 ರಂದು ಆ ವ್ಯಕ್ತಿ ತಮ್ಮ ಮನೆಗೆ ಬಂದು ಹುಡುಗಿಯನ್ನು ತನ್ನೊಂದಿಗೆ ಕರೆದುಕೊಂಡು ಹೋಗುವಂತೆ ಕೇಳಿದಾಗ ಅಪರಾಧ ನಡೆದಿದೆ ಎಂದು ಹೇಳಿದರು. ಅವರು ತಮ್ಮ ಮನೆಯಲ್ಲಿ ಜೋಲಿಯನ್ನು ಹಾಕಿಕೊಂಡಿದ್ದಾರೆ. ಮತ್ತು ಮಗು ಅದರ ಮೇಲೆ ಆಡಲು ಇಷ್ಟಪಡುತ್ತದೆ. ಈ ಹಿನ್ನೆಲೆ ಅವರ ಬಗ್ಗೆ ಅನುಮಾನಿಸದೆ, ಅವರೊಂದಿಗೆ ಹೋಗಲು ಅವಕಾಶ ಮಾಡಿಕೊಟ್ಟಿದ್ದಾಗಿಯೂ ಪೊಲೀಸರು ಹೇಳಿದ್ದಾರೆ.
ಇದನ್ನು ಓದಿ: ಲೈಂಗಿಕ ಸಂಬಂಧ ಹೊಂದಿ ಮಾತು ತಪ್ಪಿದರೆ ರೇಪ್ ಎನ್ನಲಾಗದು: ಹೈಕೋರ್ಟ್ ತೀರ್ಪು
ಘಟನೆಯ ವಿವರ..
ಈ ಘಟನೆಯ ಬಗ್ಗೆ ಪೊಲೀಸರು ವಿವರಿಸಿರುವುದು ಹೀಗೆ.. ‘’ಬಾಲಕಿ ಮನೆಗೆ ವಾಪಸಾದ ನಂತರ ವಿಚಿತ್ರವಾಗಿ ವರ್ತಿಸಿದಳು. ಆರಂಭದಲ್ಲಿ, ಪೋಷಕರು ಅದನ್ನು ನಿರ್ಲಕ್ಷಿಸಿದರು, ಆದರೆ ಸಮಸ್ಯೆ ಮುಂದುವರಿದಾಗ, ಏನು ತಪ್ಪಾಗಿದೆ ಎಂದು ಪೋಷಕರು ಮಗಳನ್ನು ಕೇಳಿದ್ದಾರೆ. ಕೊನೆಗೆ ಆ ವ್ಯಕ್ತಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಸಂತ್ರಸ್ತೆ ತನ್ನ ಸಂಕಷ್ಟವನ್ನು ವಿವರಿಸಿದ್ದಾಳೆ. ಈ ಘಟನೆಯನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದ ಎಂದೂ ಬಾಲಕಿ ಹೇಳಿದ್ದಾಳೆ. ಈ ಹಿನ್ನೆಲೆ, ಆರೋಪಿ ತಮ್ಮ ಮಗಳ ಮೇಲೆ ಈಹಿಂದೆಯೂ ರೇಪ್ ಮಾಡಿರಬಹುದು, ಅಸಹ್ಯಕರ ಕೃತ್ಯದ ಮೊದಲ ನಿದರ್ಶನವಲ್ಲ ಎಂದೂ ಪೋಷಕರು ಊಹಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ಆರೋಪಿಯನ್ನು ಆತನ ನಿವಾಸದಿಂದ ಬಂಧಿಸಲಾಗಿದ್ದು, ವಿಚಾರಣೆ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾರೆ’’ ಎಂದು ಪೊಲೀಸರು ಘಟನೆಯ ವಿವರದ ಬಗ್ಗೆ ಮಾಹಿತಿ ನೀಡಿದ್ದಾರೆ.
ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಒಂದೇ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗುವುದು), 376 (3) (16 ವರ್ಷದೊಳಗಿನ ಮಹಿಳೆಯ ಮೇಲೆ ಅತ್ಯಾಚಾರ ಎಸಗುವುದು) ಮತ್ತು 506 (ಅಪರಾಧ ಬೆದರಿಕೆ) ಹಾಗೂ 2012 ರ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆಯ 4 (ಉಗ್ರವಾದ ಲೈಂಗಿಕ ಆಕ್ರಮಣ), 6 (ಉಲ್ಭಣಗೊಂಡ ನುಗ್ಗುವ ಲೈಂಗಿಕ ಆಕ್ರಮಣ), 8 (ಲೈಂಗಿಕ ಆಕ್ರಮಣ) ಮತ್ತು 12 (ಲೈಂಗಿಕ ಕಿರುಕುಳ) ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಪಾಪಿಗೆ ತಕ್ಕ ಶಿಕ್ಷೆ! ಮನೆಗೆ ನುಗ್ಗಿ ರೇಪ್ ಮಾಡಿದವನ ಮರ್ಮಾಂಗವನ್ನೇ ಸೀಳಿದ ಸಂತ್ರಸ್ತೆ
ಸಮ್ಮತಿ ಸೆಕ್ಸ್‌ಗೆ ಕನಿಷ್ಠ ವಯೋಮಿತಿಯನ್ನು 16ಕ್ಕೆ ಇಳಿಸಬೇಕು!
ದೈಹಿಕ ಸಂಬಂಧಕ್ಕೆ ಅಥವಾ ಸಮ್ಮತಿ ಸೆಕ್ಸ್‌ಗೆ ಒಪ್ಪಿಗೆ ನೀಡುವ ವಯಸ್ಸು ಭಾರತದಲ್ಲಿ ಹೆಚ್ಚು ಚರ್ಚಾಸ್ಪದ ವಿಷಯವಾಗಿದೆ. ಪ್ರಸ್ತುತ ಸಮ್ಮತಿ ಸೆಕ್ಸ್‌ಗೆ ಕನಿಷ್ಠ ವಯೋಮಿತಿ 18 ವರ್ಷವಾಗಿದ್ದರೂ ಕನಿಷ್ಠ ವಯೋಮಿತಿ 16 ಆಗಿರಬೇಕು ಎಂಬ ಬಹುದಿನಗಳ ಬೇಡಿಕೆ ಇದೆ. ಇದೀಗ ಮಧ್ಯಪ್ರದೇಶ ಹೈಕೋರ್ಟ್ ಕೂಡ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆಯಡಿ ವಯೋಮಿತಿಯನ್ನು ಪ್ರಸ್ತುತ 18 ವರ್ಷದಿಂದ 16 ವರ್ಷಕ್ಕೆ ಇಳಿಸುವುದನ್ನು ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಇದನ್ನೂ ಓದಿ: ಸಮ್ಮತಿ ಸೆಕ್ಸ್‌ಗೆ ಒಪ್ಪಿಗೆ ವಯಸ್ಸು 16 ಆಗಿರ್ಬೇಕು: 17 ವರ್ಷದ ಹುಡುಗನ ವಿರುದ್ಧ ಎಫ್‌ಐಆರ್ ರದ್ದು ಮಾಡಿದ ಹೈಕೋರ್ಟ್