ಕುಟುಂಬದವರೆಲ್ಲ ಕೊರೋನಾಗೆ ಬಲಿ: ನೊಂದ ಮಹಿಳೆ ಆತ್ಮಹತ್ಯೆ

By Suvarna News  |  First Published Apr 23, 2021, 1:14 PM IST

ಮನೆಯವರೆಲ್ಲ ಕೊರೋನಾದಿಂದ ಸಾವು | ಮನೆಯಲ್ಲಿ ಒಬ್ಬಂಟಿ ಇದ್ದಾಕೆ ಆತ್ಮಹತ್ಯೆ


ಭೋಪಾಲ್(ಏ.23): ಮಧ್ಯಪ್ರದೇಶದ ದೇವಾಸ್‌ನಲ್ಲಿ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬದ ಮೂವರು ಸದಸ್ಯರು ಒಂದು ವಾರದೊಳಗೆ ಕೊರೋನವೈರಸ್ ಸೋಂಕಿಗೆ ಬಲಿಯಾದ ನಂತರ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಹಿಳೆಯ ಪತಿ, ಸೋದರ ಮಾವ ಮತ್ತು ಅತ್ತೆ ಇಂದೋರ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೊರೋನಾದಿಂದ ಇವರು ಮೂವರೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Tap to resize

Latest Videos

undefined

ಒಂದೇ ಆಸ್ಪತ್ರೆಯಲ್ಲಿ 24 ಗಂಟೆಯಲ್ಲಿ 25 ಸೋಂಕಿತರು ಸಾವು..!

ದೆಹಲಿ, ಮುಂಬೈ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ವ್ಯಾಕ್ಸೀನ್ ಕೊರತೆಯ ಜೊತೆಗೆ ಆಕ್ಸಿಜನ್ ಕೊರತೆಯೂ ತಲೆದೋರಿದೆ.

ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಕೊರೋನಾ ಪ್ರಕರಣ ದಾಖಲಾಗಿದೆ. 2300ಕ್ಕೂ ಹೆಚ್ಚು ಜನರು ಒಂದೇ ದಿನ ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ 25 ಸಾವಿರಕ್ಕೂ ಹೆಚ್ಚು ಕೊರೋನಾ ಕೇಸ್ ದಾಖಲಾಗಿದೆ.

click me!