'ಜಮೀನಲ್ಲ, ಆಸ್ತಿಯಲ್ಲ ಲೂಡೋದಲ್ಲಿ ಅಪ್ಪ ಮೋಸ ಮಾಡಿದ್ದಾನೆ, ನ್ಯಾಯ ಕೊಡಿಸಿ'!

By Suvarna News  |  First Published Sep 27, 2020, 8:16 PM IST

ಲಾಕ್ ಡೌನ್ ವೇಳೆ ಜೋರಾದ ಆನ್ ಲೈನ್ ಗೇಮಿಂಗ್/ ತಂದೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದ ಮೊರೆ ಹೋದ ಮಹಿಳೆ/ ತಂದೆ ಮೇಲಿನ ಎಲ್ಲ ಗೌರವವನ್ನು ಕಳೆದುಕೊಂಡಿದ್ದೇನೆ


ಭೋಪಾಲ್(ಸೆ. 27)  ಲಾಕ್ ಡೌನ್ ನಡುವೆ ಆನ್ ಲೈನ್ ಗೇಮ್ ಗಳ ಆಟ ಮನೆ ಮನೆಗಳಲ್ಲಿ ಜೋರಾಗಿಯೇ ನಡೆದಿದೆ.  ಇಲ್ಲೊಬ್ಬ ಮಹಿಳೆ ಆನ್ ಲೈನ್ ಗೇಮ್ ನಲ್ಲಿ ತಂದೆ ನನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ!

24  ವರ್ಷದ ಮಹಿಳೆ ತಂದೆ ವಿರುದ್ಧವೇ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ.    ಅನೇಕ ಜನರು ಏಕಕಾಲದಲ್ಲಿ ಆಡುವ ಲೂಡೋ ಆಟದಲ್ಲಿ ತನಗೆ ಮೋಸವಾಗಿದೆ ಎಂದು ಮಹಿಳೆ ಆರೋಪಿಸಿದ್ದು ತಂದೆಯೊಂದಿಗಿನ ಎಲ್ಲ ಸಂಬಂಧ ಕಡಿದುಕೊಳ್ಳುತ್ತೇನೆ  ಎಂದು ಹೇಳಿದ್ದಾರೆ.

Tap to resize

Latest Videos

ದೃಷ್ಟಿ ತೆಗೆಯಲು ಬಂದು ಹಣ-ಒಡವೆ ದೋಚಿದ ಮಂಗಳಮುಖಿಯರು

ಲೂಡೋ ಗೇಮ್ ಕಾರಣಕ್ಕೆ ತಂದೆ ಮೇಲೆ ಇದ್ದ ಎಲ್ಲ ಗೌರವ ಕಳೆದುಕೊಂಡಿದ್ದೇನೆ. ನಾನು ಮತ್ತು ಸಂಬಂಧಿಕರು ಆಟ ಆಡುತ್ತಿದ್ದಾಗ ಮೋಸದಿಂದ ತಂದೆ ನನ್ನ ಪಾನ್ ಹೊಡೆದಿದ್ದಾರೆ ಎಂಬುದು ಮಹಿಳೆಯ ಪ್ರಮುಖ ಆರೋಪ. 

ಸೋಶಿಯಲ್ ಮೀಡಿಯಾದಲ್ಲಿಯೂ ಈ ಸುದ್ದಿಗೆ ಭಿನ್ನ ಭಿನ್ನವಾದ ಪ್ರತಿಕ್ರಿಯೆಗಳು ಬಂದಿವೆ.  ಮಹಿಳೆಗೆ ಮೂರು ಸುತ್ತಿನ ಕೌನ್ಸೆಲಿಂಗ್ ಸಹ ನಡೆಸಲಾಗಿದ್ದು ಸದ್ಯದ ಮಟ್ಟಿಗೆ ಯಾವುದೆ ಪರಿಣಾಮಕಾರಿ ಫಲಿತಾಂಶ ದೊರೆತಿಲ್ಲ. 

 

 

 

The woman said she lost respect for her father as he went on to defeat her. She feels that her father should have lost in the game for the sake of her happiness. After 4 counselling sessions, she now feels positive: Sarita, a counsellor at Bhopal Family Court https://t.co/P9Lbl6iKJB

— ANI (@ANI)
click me!