ಚಾಲಾಕಿ ಮಂಗಳಮುಖಿಯರ ಗ್ಯಾಂಗ್/ ದೃಷ್ಟಿ ತೆಗೆಯುವ ನೆಪದಲ್ಲಿ ದರೋಡೆ/ ಸಿಸಿಟಿವಿಯಲ್ಲಿ ಕೃತ್ಯ ಸೆರೆ/ ಆಟೋದಲ್ಲಿ ಬಂದಿದ್ದ ನಾಲ್ವರು ಮಂಗಳಲುಖಿಯರು/ ಸಿನಿಮೀಯ ರೀತಿ ಎಸ್ಕೇಪ್
ಬೆಂಗಳೂರು(ಸೆ. 27) ದೇವರ ಪೊಟೋಗೆ ಅಕ್ಷತೆ ಹಾಕೋ ನೆಪದಲ್ಲಿ ಮಂಗಳಮುಖೀಯರು ಸುಲಿಗೆ ಮಾಡಿದ್ದಾರೆ. ಆಟೋದಲ್ಲಿ ಬಂದಿದ್ದ ನಾಲ್ವರು ಮಂಗಳಮುಖಿಯರಿಂದ ದುಷ್ಕೃತ್ಯ ಎಸಗಿದ್ದಾರೆ.
1.65 ಲಕ್ಷ ನಗದು, 23 ಗ್ರಾಂ ತೂಕದ 1 ಚಿನ್ನದ ಸರದ ಜೊತೆ 1 ಮೊಬೈಲ್ ಕಸಿದು ಎಸ್ಕೇಪ್ ಆಗಿದ್ದಾರೆ. ವಿದ್ಯಾರಣ್ಯಪುರದ ಈಚಲಮರ ಬಸ್ ಸ್ಟಾಪ್ ಬಳಿ ಘಟನೆ ವರದಿಯಾಗಿದೆ.
ಕಳೆದ ಸೆಪ್ಟೆಂಬರ್ 23 ರಂದು ಅನುವೃದ್ದಿ ಕೋ ಆಪರೇಟಿವ್ ಕಚೇರಿಯನ್ನು ಉದ್ವಾಟಿಸಲಾಗಿತ್ತು . ವಿದ್ಯಾರಣ್ಯಪುರ ಶಾಖೆಯನ್ನು ಈಚಲಮರ ಬಸ್ ಸ್ಟಾಪ್ ಬಳಿ ಉದ್ಘಾಟಿಸಲಾಗಿತ್ತು. ಈ ವೇಳೆ ಶಾಖೆಯ ದ್ವಾರಕ್ಕೆ ದೃಷ್ಟಿ ತೆಗೆಯುವ ನೆಪದಲ್ಲಿ ಮಂಗಳಮುಖಿಯರ ಗ್ಯಾಂಗ್ ಎಂಟ್ರಿಕೊಟ್ಟಿತ್ತು.
ಪತಿ ಜತೆ ಸೇರಿ ತಮ್ಮನ ಮನೆಗೆ ಕನ್ನ ಹಾಕಿದ ಕಿರುತೆರೆ ನಟಿ
ನಿಂಬೆಹಣ್ಣಿನಿಂದ ದ್ವಾರಕ್ಕೆ ದೃಷ್ಟಿ ತೆಗೆದು ನಂತರ ದೇವರ ಪೊಟೋಗೆ ಅಕ್ಷತೆ ಹಾಕುವ ನೆಪದಲ್ಲಿ ಕಚೇರಿಯ ಒಳಕ್ಕೆ ಬಂದಿದ್ದರು. ನಂತರ ಕೋ ಆಪರೇಟಿವ್ ಕಚೇರಿ ಒಳಗಿದ್ದ ಹಣ ಒಡವೆ ಪರ್ಸ್ ಮೊಬೈಲ್ ಎಗರಿಸಿ ಎಸ್ಕೇಪ್ ಆಗಿದ್ದಾರೆ. ಹಣ ಒಡವೆ ಎಗರಿಸಿದ ನಂತರ ಸಿನಿಮೀಯ ರೀತಿ ಆಟೋ ಹತ್ತಿ ಎಸ್ಕೇಪ್ ಆಗಿದ್ದಾರೆ.
ಮಂಗಳಮುಖಿ ಗ್ಯಾಂಗ್ ಹಣ ಎಗರಿಸಿ ಎಸ್ಕೇಪ್ ಆಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.