
ಚಿತ್ರದುರ್ಗ(ಏ.18): ನೀರಿನ ತೊಟ್ಟಿಯಲ್ಲಿ ತಾಯಿ, ಮಗಳು ಮುಳುಗಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಕೆಳಗೋಟೆ ಬಡಾವಣೆಯ ತಿಪ್ಪೇರುದ್ರಸ್ವಾಮಿ ಆಶ್ರಮದಲ್ಲಿ ನಡೆದಿದೆ. ಗೀತಾ(42), ಪ್ರಿಯಾಂಕ(20) ಸಾವಿಗೀಡಾದವರು. ಮಂಗಳವಾರ ತಡರಾತ್ರಿ ಘಟನೆ ನಡೆದಿರಬಹುದೆಂದು ಶಂಕಿಸಲಾಗಿದೆ.
ತಿಪ್ಪೇರುದ್ರಸ್ವಾಮಿ ಆಶ್ರಮದಲ್ಲಿ ಪೂಜಾರಿ ಸುರೇಶ್, ಪತ್ನಿ ಗೀತಾ ಹಾಗೂ ಪುತ್ರಿ ಪ್ರಿಯಾಂಕ ವಾಸವಿದ್ದರು. ಆಶ್ರಮದ ಹಿಂಭಾಗದಲ್ಲಿ ಸಿಮೆಂಟ್ ರಿಂಗಿನಿಂದ ನಿರ್ಮಿಸಿರುವ 3 ಅಡಿ ಆಳದ ಸಣ್ಣ ನೀರಿನ ತೊಟ್ಟಿಯಿದ್ದು ಅಲ್ಲಿ ಶವಗಳು ಕಂಡು ಬಂದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಬೆಂಗಳೂರು; ಇಬ್ಬರು ಮಕ್ಕಳನ್ನು ಕೊಲೆಗೈದ ತಾಯಿ ಗಂಗಾದೇವಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಆತ್ಮಹತ್ಯೆ
ಮತ್ತೊಂದೆಡೆ ತಾಯಿ, ಮಗಳು ಸಾವನ್ನಪ್ಪಿರುವ ಸ್ಥಳದ ಪಕ್ಕದಲ್ಲೇ ಡೆತ್ ನೋಟೊಂದು ಸಿಕ್ಕಿದ್ದು, ಆರೋಗ್ಯದಲ್ಲಿ ಸಾಕಷ್ಟು ಏರುಪೇರಾಗುತ್ತಿರುವುದರಿಂದ ನಾನು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ತಾಯಿ ಗೀತಾ ಬರೆದಿದ್ದಾಳೆ. ತಾಯಿ ಗೀತಾ ಅವರು ಇಲ್ಲದೆ ನಾನು ಜೀವನ ನಡೆಸಲು ಸಾಧ್ಯ ಆಗುವುದಿಲ್ಲ ಇದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಮಗಳು ಪ್ರಿಯಾಂಕ ಡೆತ್ ನೋಟ್ ಬರೆದಿರುವ ಪತ್ರವೊಂದು ಪೊಲೀಸರಿಗೆ ಕೈ ಸಿಕ್ಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ