
ಹಾಸನ (ಜ.2) : ಒಂದೇ ಮನೆಯಲ್ಲಿ ತಾಯಿ, ಮಕ್ಕಳು ವಿಷ ಸೇವಿಸಿ ನಿಗೂಢವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಹಾಸನ ಜಿಲ್ಲೆಯ ದಾಸರಕೊಪ್ಪಲಿನಲ್ಲಿ ನಡೆದಿದೆ. ಸಿಂಚನ (7), ಪವನ್ (9) ಹಾಗೂ ತಾಯಿ ಶಿವಮ್ಮ ಮೃತ ದುರ್ದೈವಿಗಳು. ಗಂಡ ಮನೆಯಲ್ಲಿಲ್ಲದ ವೇಳೆ ಮನೆ ಬಾಗಿಲು ಬಂದ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಕುಟುಂಬ. ಮನೆಯಲ್ಲಿದ್ದ ಗ್ಯಾಸ್ ಪೈಪ್ ಕೂಡ ಲಿಕೇಜ್ ಆಗಿದೆ.
ಮೂವರು ಆತ್ಮಹತ್ಯೆಗೆ ಶರಣಾಗಿರುವ ದೃಶ್ಯ ಕಂಡು ಮರುಗಿದ ದಾಸರ ಕೊಪ್ಪಲು ಜನರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಸ್ಥಳಕ್ಕೆ ಬಂದ ಪೆನ್ಷನ್ ಮೊಹಲ್ಲಾ ಠಾಣೆ ಪೊಲೀಸರು ಪರಿಶೀಲನೆ ನಡೆಸಿದರು
ಹೆಂಡ್ತಿ ಕೊಂದು ಮೆಟ್ರೋ ಸ್ಟೇಷನ್‌ನಿಂದ ಹಾರಿ ಗಂಡ ಸಾವಿಗೆ ಶರಣು: ಅಮ್ಮನ ಹೆಣದ ಮುಂದೆ ಮಗುವಿನ ರೋದನೆ
ಪತ್ನಿ ಮಕ್ಕಳ ಸಾವಿನ ಬಗ್ಗೆ ಪತಿ ತೀರ್ಥ ಹೇಳೋದೇನು?
ಕೆಲ ತಿಂಗಳಿಂದ ತುಮಕೂರಿನ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ನಿನ್ನೆ ಸಂಜೆವರೆಗೂ ಪತ್ನಿ ಮಕ್ಕಳ ಜೊತೆ ಫೋನ್‌ನಲ್ಲಿ ಮಾತನಾಡಿದ್ದೆನೆ. ಮದ್ಯಾಹ್ನ 3 ಗಂಟೆಗೆ ತುಮಕೂರಿನಿಂದ ಹೊರಟು ಹಾಸನಕ್ಕೆ ಬಂದೆ. ಮನೆ ತಲುಪ ವೇಳೆಗೆ ಸಂಜೆಯಾಗಿತ್ತು. ಸಂಜೆ 6 ಗಂಟೆ ವೇಳೆಗೆ ಮತ್ತೆ ಫೋನ್ ಮಾಡಿದ್ದೆ. ಫೋನ್ ಸ್ವಿಚ್ ಆಫ್ ಆಗಿತ್ತು. ಮನೆಗೆ ಬಂದು ಬಾಗಿಲು ಬಡಿದರೂ ಬಾಗಿಲು ತೆರೆಯಲಿಲ್ಲ. ಮತ್ತೆ ಮತ್ತೆ ಬಾಗಿಲು ಬಡಿದರೂ ತೆಗೆದಿರಲಿಲ್ಲ. ಹೀಗಾಗಿ ಮನೆ ಬಾಗಿಲಿಗೆ ಬೀಗ ಹಾಕಿದ್ರಿಂದ ಹೊರಗಡೆ ಹೋಗಿರಬಹುದು ಎಂದು ಮನೆಯ ಮೇಲೆ ಮಲಗಿದ್ದೆ. ಬೆಳಗ್ಗೆ ಮನೆಯ ಬಾಗಿಲ ಹೊಸ ಕೀ ಮಾಡಿಸಿ ಬಾಗಿಲು ಓಪನ್ ಮಾಡಿದಾಗ ಅವರು ಮೃತಪಟ್ಟ ವಿಚಾರ ಗೊತ್ತಾಗಿದೆ ಎಂದಿರುವ ಪತಿ ತೀರ್ಥ.
ಗಂಡನಿಂದ ಹೆಂಡ್ತಿ, ಆಕೆಯ ಅಪ್ಪ ಹಾಗೂ ನಾಲ್ವರ ಕೊಚ್ಚಿ ಕೊಲೆ
ಏಳೆಂಟು ತಿಂಗಳಿಂದ ಇದೇ ಮನೆಯಲ್ಲಿ ವಾಸ:
ನಾನು ಬೇಕರಿ ಕೆಲಸಕ್ಕಾಗಿ ತುಮಕೂರಿನಲ್ಲಿ ಇದ್ದೇನೆ. ಆದರೆ ನಾವು ಏಳೆಂಟು ತಿಂಗಳಿಂದ ಇದೇ ಮನೆಯಲ್ಲಿ ವಾಸವಾಗಿದ್ದೇವೆ. ನಾನು ಮನೆಯಿಂದ ತುಮಕೂರಿಗೆ ಹೋಗಿ ಒಂದು ತಿಂಗಳಾಗಿತ್ತಷ್ಟೆ. ಆದರೆ ನಿತ್ಯ ಪತ್ನಿ ಹಾಗೂ ಮಕ್ಕಳೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದೆ. ನಿನ್ನೆ ಕೂಡ ಮಾತನಾಡಿಕೊಂಡೆ ಹಾಸನಕ್ಕೆ ಬಂದಿದ್ದೆ. ಇದು ಯಾಕೆ ಸಾವಾಗಿದೆ ಎಂದು ನನಗೆ ಗೊತ್ತಾಗ್ತಿಲ್ಲ. ನಮ್ಮಿಬ್ಬರ ನಡುವೆ ಏನೂ ಜಗಳ ಆಗಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವಂತಹ ಸಮಸ್ಯೆ ಏನೂ ಇರಲಿಲ್ಲ. ಮದುವೆಯಾಗಿ 12 ವರ್ಷ ಆಗಿದೆ. ನಾವಿಬ್ಬರು ಅನ್ಯೋನ್ಯವಾಗಿದ್ದೇವೆ. ನಮ್ಮಿಬ್ಬರ ನಡುವೆ ಯಾವುದೇ ಕಲಹ ಸಮಸ್ಯೆಗಳಿಲ್ಲ ಎಂದಿರುವ ಪತಿ.
ಹಾಗಾದರೆ ಪತ್ನಿ ಖಿನ್ನತೆಗೊಳಗಾಗಿದ್ದಾಳೆ. ಯಾರಿಂದಲಾದರೂ ತೊಂದರೆಯಾಗಿತ್ತೆ ಈ ಎಲ್ಲ ಆಯಾಮಗಳಲ್ಲಿ ವಿಚಾರಣೆಗೆ ಮುಂದಾಗಿರುವ ಪೊಲೀಸರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ